ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ: ಏನಿದು, ಬೆಲೆ ಎಷ್ಟು, ಪ್ರಯೋಜನವೇನು?

Date:

Advertisements
ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಲಾಗಿದೆ. ಏನಿದು ಸ್ಮಾರ್ಟ್ ಮೀಟರ್, ಗ್ರಾಹಕರಿಗೆ ಏನು ಪ್ರಯೋಜನ, ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದೇಕೆ?

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅದರಂತೆ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ.

ಸ್ಮಾರ್ಟ್‌ ಮೀಟರ್ ಅಳವಡಿಕೆ ಮಾಡುವ ಕುರಿತಾಗಿ 2024ರ ಮಾರ್ಚ್ 6ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಈಗಾಗಲೇ ನಗರ ಪ್ರದೇಶಗಳಲ್ಲಿ ಫೆಬ್ರವರಿ 15ರಿಂದಲೇ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇದೀಗ ಗ್ರಾಮಾಂತರ ಪ್ರದೇಶದಲ್ಲಿಯೂ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಲಾಗಿದೆ.

ಇದನ್ನು ಓದಿದ್ದೀರಾ? ಸ್ಮಾರ್ಟ್‌ ಮೀಟರ್ ಕಡ್ಡಾಯ – ಖರೀದಿ; ಬಿಜೆಪಿ ಹಗರಣ ಆರೋಪ, ಕಾಂಗ್ರೆಸ್‌ ಸ್ಪಷ್ಟನೆ

Advertisements

ಸ್ಮಾರ್ಟ್‌ ಮೀಟರ್‌ ಖರೀದಿ ಮತ್ತು ಬೆಲೆ

ಗ್ರಾಹಕರು ಬೆಸ್ಕಾಂನಲ್ಲಿ ಅರ್ಜಿ ಸಲ್ಲಿಸಿ, ಬೆಸ್ಕಾಂ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್‌ ಮೀಟರ್‌ಗಳನ್ನು ಖರೀದಿಸಬಹುದು. ಇದನ್ನು ಅಧಿಕೃತ ಮಾರಾಟಗಾರರಿಂದ ಮಾತ್ರವೇ ಖರೀದಿಸಬೇಕು. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಬೆಲೆ 5 ಸಾವಿರ ರೂಪಾಯಿ, ತ್ರೀ ಫೇಸ್ ಕನೆಕ್ಷನ್​ಗೆ ಸ್ಮಾರ್ಟ್ ಮೀಟರ್ ದರ 8,800 ರೂಪಾಯಿಯಾಗಿದೆ.

ಸ್ಮಾರ್ಟ್‌ ಮೀಟರ್ ಎಂದರೇನು, ವೈಶಿಷ್ಟ್ಯವೇನು?

ಸಾಂಪ್ರದಾಯಿಕ ಮೀಟರ್‌ಗಳಂತೆ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆಯನ್ನು ಅಳೆಯುವ ಸಾಧನ. ಇದು ಇಂಧನ ಪೂರೈಕೆದಾರರಿಗೆ ಇಂಧನ ಬಳಕೆಯ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ. ಸ್ಮಾರ್ಟ್ ಮೀಟರ್‌ಗಳು ಸಾಮಾನ್ಯವಾಗಿ ಸ್ಮಾರ್ಟ್ ಮೀಟರ್ ಮಾನಿಟರ್‌ ಅನ್ನು ಹೊಂದಿರುತ್ತದೆ. ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ, ಎಷ್ಟು ವೆಚ್ಚವಾಗುತ್ತಿದೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಮೊದಲೇ ಹಣ ಪಾವತಿಸಿ ಬಳಿಕ ವಿದ್ಯುತ್ ಬಳಸುವ ವ್ಯವಸ್ಥೆಯೂ ಇದೆ. ಇದರಿಂದಾಗಿ ಇಂಧನ ಬಳಕೆಯನ್ನು ನಿಯಂತ್ರಿಸಬಹುದು ಎಂಬ ಅಭಿಪ್ರಾಯಗಳಿವೆ. ಬೆಸ್ಕಾಂ ಅಡಿಯಲ್ಲಿ ಈ ಸ್ಮಾರ್ಟ್‌ ಮೀಟರ್‌ ಪ್ರಿಪೇಯ್ಡ್ ಆಗಿದೆ. ನೀವು ಮೊಬೈಲ್‌ಗಳಿಗೆ ಮೊದಲೇ ರೀಚಾರ್ಜ್ ಮಾಡಿ ಬಳಸುವಂತೆ ವಿದ್ಯುತ್‌ಗೂ ಮೊದಲೇ ಹಣ ಪಾವತಿಸಿ ಬಳಸಬೇಕಾಗುತ್ತದೆ.

ಪ್ರಯೋಜನವೇನು, ಅನಾನುಕೂಲವೇನು?

ಸ್ಮಾರ್ಟ್‌ ಮೀಟರ್‌ನಿಂದಾಗಿ ನಿಖರ ಬಿಲ್ ಪಡೆಯಬಹುದು. ನೀವು ಯಾವ ಸಮಯದಲ್ಲಿ ಬೇಕಾದರೂ ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ, ಎಷ್ಟು ಹಣ ವೆಚ್ಚವಾಗಿದೆ ಎಂದು ಮೊಬೈಲ್‌ನಲ್ಲೇ ತಿಳಿಯಬಹುದು. ಇದರಿಂದಾಗಿ ವಿದ್ಯುತ್ ಬಳಕೆಯನ್ನು ನಿಯಂತ್ರಿಸಬಹುದು ಎಂಬುದು ಸರ್ಕಾರದ ಅಭಿಪ್ರಾಯ. ಆದರೆ ಸ್ಮಾರ್ಟ್‌ ಮೀಟರ್‌ನಲ್ಲಿ ಯಾವುದೇ ಸಣ್ಣ ಸಮಸ್ಯೆಯಾದರೂ ನಿಮಗೆ ವಿದ್ಯುತ್ ಬಿಲ್ಲಿಂಗ್ ಸಮಸ್ಯೆ ಉಂಟಾಗಬಹುದು. ಸಿಗ್ನಲ್ ಕೊರತೆ ಮೊದಲಾದವುಗಳು ಇಕ್ಕಟ್ಟಿಗೆ ಸಿಲುಕಿಸಬಹುದು. ಈ ವಾದವೂ ಇದೆ.

ಇದನ್ನು ಓದಿದ್ದೀರಾ? ಹಾಲಿ- ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯವೇ? ಬೆಸ್ಕಾಂನಿಂದ ಮಹತ್ವದ ಮಾಹಿತಿ ಪ್ರಕಟ

ಹೈಕೋರ್ಟ್‌ನಲ್ಲಿ ಸ್ಮಾರ್ಟ್ ಮೀಟರ್ ವಿರುದ್ಧ ಅರ್ಜಿ

ಈಗಾಗಲೇ ಸ್ಮಾರ್ಟ್ ಮೀಟರ್ ಕಡ್ಡಾಯ ವಿರುದ್ಧವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಕಳುಹಿಸಿದ್ದು ಮಾತ್ರವಲ್ಲದೇ ಸ್ಮಾರ್ಟ್ ಮೀಟರ್ ಬೆಲೆ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಿದ್ಯುತ್‌ ಸಂಪರ್ಕಕ್ಕೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯವೇಕೆ? ಈ ಹಿಂದೆ ಎರಡು ಸಾವಿರ ರೂಪಾಯಿ ಇದ್ದ ಮೀಟರ್ ಬೆಲೆಯನ್ನು 10 ಸಾವಿರ ರೂಪಾಯಿ ಮಾಡಲಾಗಿದೆ. ಬಡವರು ಏಕಾಏಕಿ ಈ ರೀತಿ ಹಣ ನೀಡಲು ಹೇಗೆ ಸಾಧ್ಯ? ಅಷ್ಟಕ್ಕೂ ಉಚಿತ ವಿದ್ಯುತ್ ನೀಡಿ ಎಂದು ನಿಮ್ಮನ್ನು ಕೇಳಿದವರು ಯಾರು? ಹೊರ ಗುತ್ತಿಗೆದಾರರ ಮೂಲಕ ಖರೀದಿ ಅಪಾಯವಲ್ಲವೇ? -ಹೀಗೆ ಹಲವು ಪ್ರಶ್ನೆಗಳನ್ನು ಹೈಕೋರ್ಟ್ ಸರ್ಕಾರದ ಮುಂದಿಟ್ಟಿದೆ. ಇನ್ನು ಇತರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಬೆಲೆ 900 ರೂಪಾಯಿ ಆಗಿರುವಾಗ ನಮ್ಮಲ್ಲಿ 10 ಸಾವಿರದವರೆಗೂ ಬೆಲೆ ಇರುವುದು ಎಷ್ಟು ಸರಿ? ಎಂಬುದು ಅರ್ಜಿದಾರರ ವಾದ.

ವಿಪಕ್ಷಗಳ ಆರೋಪ, ಸರ್ಕಾರದ ಸ್ಪಷ್ಟಣೆ

ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) ಅಳವಡಿಸುವ ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ. ನಿಯಮ ಪಾಲಿಸದ ರಾಜಶ್ರೀ ಎಲೆಕ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್‌ ಎಂಬ ಕಂಪನಿಯ ಜೇಬು ತುಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಸೇರಿದ ಬರೋಬ್ಬರಿ 15,568 ಕೋಟಿ ರೂಪಾಯಿ ಹಣ ಲೂಟಿಯಾಗುತ್ತಿದೆ, ಇದು ಹಗರಣ ಎಂಬುದು ವಿಪಕ್ಷ ಬಿಜೆಪಿ ಆರೋಪವಾಗಿದೆ. ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತ್ರ ಸ್ಮಾರ್ಟ್ ಮೀಟರ್ ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಕೆಟಿಪಿಪಿ ಕಾಯ್ದೆ ಪ್ರಕಾರವಾಗಿಯೇ ಟೆಂಡರ್ ಕರೆದು ಬಿಡ್ ಪೂರ್ವ ಸಭೆಯಲ್ಲಿ ಆಸಕ್ತ ಬಿಡ್ಡುದಾರರ ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು. ಬಳಿಕ ಅತಿ ಕಡಿಮೆ ಬಿಡ್ ಮಾಡಿದ್ದ ರಾಜಶ್ರೀ ಎಂಟರ್‌ಪ್ರೈಸಸ್‌ನವರಿಗೆ ಗುತ್ತಿಗೆ ನೀಡಲಾಗಿದೆ ಎಂದೂ ಸಚಿವರು ಹೇಳಿಕೊಂಡಿದ್ದಾರೆ.

ಇದೇನೇ ಆದರೂ ಸದ್ಯ ಜನರ ಮುಂದಿರುವುದು ಸ್ಮಾರ್ಟ್ ಮೀಟರ್‌ಗೆ ಅಷ್ಟೊಂದು ಬೆಲೆ ಏಕೆ ಎಂಬ ಪ್ರಶ್ನೆ. ಇತರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್‌ ಬೆಲೆ 900 ರೂಪಾಯಿ ಆಗಿದೆ. ಹೀಗಿರುವಾಗ ನಾಲ್ಕು ಪಟ್ಟು ಅಧಿಕ ಬೆಲೆಯನ್ನು ವಿಧಿಸಿರುವುದು ಏಕೆ? ಈ ರೀತಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದರೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಬಡವರು ಹಣ ಹೊಂದಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ಸದ್ಯ ಚರ್ಚೆಯಲ್ಲಿವೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

4 COMMENTS

  1. ಪಶ್ಚಿಮಬಂಗಾಳದ ಹೆಣ್ಣುಹುಲಿ ಮುಖ್ಯಮಂತ್ರಿ ಮಮತಬ್ಯಾನೆರ್ಜಿಯವರು ತಮ್ಮ ರಾಜ್ಯದ ಜನರ ಹಿತಕಾಪಾಡಲು ಕೇಂದ್ರದ ಸ್ಮಾರ್ಟ್ಮೀಟರ್ ಬೇಡವೆಂದು ಧಿಕ್ಕರಿಸಿ ಸಾಮಾನ್ಯ ಮೀಟರ್ ಆಯ್ಕೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ, ಇಂಧನ ಮಂತ್ರಿ ಮೋದಿಯ ಕಾಲಿಗೆ ಬಿದ್ದು ಜನತೆಯ ಮೇಲೆ ದುಬಾರಿ ಸ್ಮಾರ್ಟ್ಮೀಟರ್ಗಳನ್ನು ಹೇರುತಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿ ಪಕ್ಷಕ್ಕೂ ಏನು ವ್ಯತ್ಯಾಸ?ಗ್ಯಾರಂಟಿ ಯೋಜನೆಗಳನ್ನು ಘೋಷಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರನ್ನು ಸುಲಿಯಾತೊಡಗಿದೆ. ಜನ ಯಾರನ್ನು ನಂಬಬೇಕು?

  2. ಖಂಡಿತವಾಗಿ ಬೇಕಾಗಿಲ್ಲ ಎಂದು ‌ಸಾರ್ವಜನಿಕರು. ನಂಬಿಕೆ. ಇದು ಆವಶ್ಯಕತೆ ಇಲ್ಲ ಎಂದು ಹೇಳಬಹುದು. ಯಾಕೆ ಹೀಗೆ ಪದೇ ಪದೇ ಸಾರ್ವಜನಿಕ ಮೇಲೆ ಹೊರೆ ಅಲ್ದೇ ಮತ್ತಿನೆನು

  3. ಇವರಿಗೆ ಹೇಳೋರು ಕೇಳೋರು yaru🙏 ಇಲ್ಲವಾ ಆನೆ ನೆಡೆದದ್ದೇ ದಾರಿ ಎನ್ನುವರೀತಿ ಇಷ್ಟ ಬಂದ ಹಾಗೆ ಮೀಟರುಗಳ ಬೆಲೆ ನಿಗಾಧಿಪಡಿಸಿದ್ದಾರಲ್ಲ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯ ಮೊದಲು ಇದನ್ನು ನಿರ್ಬಂಧಿಸಬೇಕು 1000/- ಮೀಟರ್ ಗೆ 10000/- ನಿಗಧಿ ಮಾಡೋಕೆ ಅಧಿಕಾರ ಕೊಟ್ಟಿದ್ದು ಯಾರು ಬ್ಯುರೋ ಸ್ಟ್ಯಾಂಡರ್ಡ್ ನವರು ಏನು ಕತ್ತೆ ಕಾಯ್ತಾವ್ರ * ಈ ಸರ್ಕಾರಕ್ಕೆ ಚೀಮಾರಿ ಹಾಕುವವರು ಯಾರು illava- ಮೊದಲು ಇವರನ್ನು kittogeyiri- ನಂತರ ಪುಗಸಟ್ಟೆ bhagya- ಪುಗಸಟ್ಟೆ odaata– vidyuth- 2000/- ಹಣ ನಿಲ್ಲಿಸಿ – ಬೆಲೆ ಏರಿಸಿರುವ ಎಲ್ಲವನ್ನು ಆದಷ್ಟು ಕಡಿಮೆ ಮಾಡಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X