2006 ಮುಂಬೈ ರೈಲು ಸ್ಫೋಟ | 12 ಮಂದಿ ಖುಲಾಸೆ: ಮುಸ್ಲಿಮರಾದರೆ ಭಯೋತ್ಪಾದಕ ಹಣೆಪಟ್ಟಿಯೇ?

Date:

ಇಷ್ಟು ವರ್ಷ ಅಮಾಯಕರನ್ನು ಅಪರಾಧಿಗಳೆಂಬಂತೆ ಬಿಂಬಿಸಿದ್ದ ಈ ಸಮಾಜ ಇದೀಗ ಆರೋಪಿಗಳು ಯಾರೆಂದು ಕೇಳುವುದೇ? ಅಥವಾ ನಿಜವಾದ ಆರೋಪಿಗಳ ರಕ್ಷಣೆಗಾಗಿಯೇ ನಿರಪರಾಧಿಗಳ ಮೇಲೆ ಆರೋಪ ಹೊರಿಸಲಾಗಿತ್ತೇ? ಇಲ್ಲಿ ಪ್ರಶ್ನೆಗಳಿವೆ ಹೊರತು, ಉತ್ತರಗಳಿಲ್ಲ. 19 ವರ್ಷದ ಬದುಕು ಕಳೆದುಕೊಂಡವರಿಗೆ, ಚಿತ್ರ ಹಿಂಸೆ ಅನುಭವಿಸಿದವರಿಗೆ ನ್ಯಾಯವಿಲ್ಲ.

2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟದಲ್ಲಿ ಶಿಕ್ಷೆಗೆ ಒಳಗಾದ 12 ಮಂದಿಯನ್ನೂ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಆದರೆ, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಏನಾಗುತ್ತದೆ ಮುಂದೆ ತಿಳಿಯಲಿದೆ. ಈಗ, ಪ್ರಕರಣ ಮತ್ತು ಹೈಕೋರ್ಟ್‌ ಆದೇಶವನ್ನು ಅವಲೋಕಿಸೋಣ. 2006ರಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 189 ಮಂದಿ ಸಾವನ್ನಪ್ಪಿ, 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಎಂಟು ವರ್ಷಗಳ ಕಾಲ ವಿಚಾರಣೆ ನಡೆಸಿ 12 ಆರೋಪಿಗಳನ್ನೂ ದೋಷಿಗಳೆಂದು ಘೋಷಿಸಿತು. ಐವರಿಗೆ ಗಲ್ಲು ಶಿಕ್ಷೆ ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇತ್ತೀಚೆಗೆ ಸುಮಾರು 19 ವರ್ಷಗಳ ನಂತರ ಈ 12 ಮಂದಿ ವಿರುದ್ಧ ಯಾವುದೇ ಪುರಾವೆಗಳು ಇಲ್ಲ ಎಂದಿರುವ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಆದರೆ ಈ 19 ವರ್ಷಗಳ ಜೀವನವನ್ನು ಈ ನಿರಪರಾಧಿಗಳಿಗೆ ಮರಳಿ ಕೊಡುವವರು ಯಾರು? ಜತೆಗೆ ನಿಜವಾದ ಆರೋಪಿಗಳನ್ನು ರಕ್ಷಿಸಲು ಅಮಾಯಕರ 19 ವರ್ಷದ ಜೀವನ ಬಲಿ ನೀಡಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

- Advertisement -

ಬಾಂಬ್ ಸ್ಫೋಟ, ಭಯೋತ್ಪಾದಕಾ ಕೃತ್ಯ ಎಲ್ಲೇ ನಡೆಯಲಿ ಅದರ ಆರೋಪಿಗಳು ಮುಸ್ಲಿಂ ಸಮುದಾಯಕ್ಕೆಯೇ ಸೇರಿದವರಾಗಿರುತ್ತಾರೆ ಎಂಬ ಪೂರ್ವಗ್ರಹ ಹಲವರಲ್ಲಿದೆ. ಯಾವುದೇ ಸ್ಫೋಟ, ಭಯೋತ್ಪದಕಾ ಕೃತ್ಯ ನಡೆದರೂ ಅದು ಗೋದಿ ಮೀಡಿಯಾಗಳಿಗೆ ಹಬ್ಬ. ಪ್ರಕರಣಕ್ಕೆ ರೆಕ್ಕೆ-ಪುಕ್ಕ, ವಿವಿಧ ಬಣ್ಣ, ರೆಂಬೆ-ಕೊಂಬೆಗಳನ್ನೆಲ್ಲ ಸೇರಿಸಿ ಸುದ್ದಿ ಪ್ರಕಟಿಸುತ್ತವೆ. ಪ್ರಚಾರ ಮಾಡುತ್ತವೆ. ಅದೇ ರೀತಿಯಲ್ಲಿ 2006 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿಯೂ ನಡೆದಿದೆ ಎನ್ನಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಈ 12 ಮಂದಿ ಮುಸ್ಲಿಮರು ಅಪರಾಧಿಗಳೆಂದು ವಿಶೇಷ ಎಪಿಸೋಡ್‌ಗಳನ್ನು ಮಾಡಿದ್ದ ಮಾಧ್ಯಮಗಳಿಗೆ, ಈಗ ನಿರಪರಾಧಿಗಳೆಂದು ನ್ಯಾಯಾಲಯ ಘೋಷಿಸಿರುವುದು ಮತ್ತು 19 ವರ್ಷಗಳ ಜೈಲುವಾಸದ ಜೀವನ ಕಾಣಿಸಿಲ್ಲ. ಈ ಪ್ರಕರಣದ ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆಯೂ ಹುಟ್ಟಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? 2006 ರ ಮುಂಬೈ ರೈಲು ಸ್ಫೋಟ ಪ್ರಕರಣ | ಸಾಕ್ಷ್ಯಾಧಾರಗಳ ಕೊರತೆ; ಎಲ್ಲ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್

ಯಾವುದೇ ಪ್ರಕರಣವಾದರೂ ಮೊದಲು ಮುಸ್ಲಿಮರ ಮೇಲೆಯೇ ಗೂಬೆ ಕೂರಿಸುವುದು ವಾಡಿಕೆಯಾಗಿಬಿಟ್ಟಿದೆ. ಸಂಜೋತಾ ಎಕ್ಸ್‌ಪ್ರೆಸ್ ಸ್ಪೋಟ, ಮಾಲೆಗಾಂವ್ ಸ್ಫೋಟ ಪ್ರಕರಣ, ದೆಹಲಿ ಗಲಭೆ ಮೊದಲಾದವು ಅದಕ್ಕೆ ಹಲವು ಉದಾಹರಣೆಗಳು. ಈ ಎಲ್ಲ ಪ್ರಕರಣದಲ್ಲಿ ತನಿಖಾ ತಂಡಕ್ಕೆ, ಮಾಧ್ಯಮಗಳಿಗೆ, ಜನರ ಬಾಯಿಗೆ ಸಿಕ್ಕಿದ್ದು ಅಲ್ಪಸಂಖ್ಯಾತರು, ಅದರಲ್ಲೂ ಮುಖ್ಯವಾಗಿ ಮುಸ್ಲಿಮರು. ದೇಶದಲ್ಲಿ ಪರಸ್ಪರ ಧರ್ಮಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡುವ ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ಮುಸ್ಲಿಮರನ್ನು ದೇಶದ್ರೋಹಿಗಳಂತೆ, ಭಯೋತ್ಪಾದಕರಂತೆ, ಲೂಟಿಕೋರರಂತೆ ಕಾಣುವುದು ಹೆಚ್ಚಾಗಿದೆ, ಅತಿರೇಖದ ಹಂತಕ್ಕೆ ಆರ್‌ಎಸ್‌ಎಸ್‌- ಸಂಘಪರಿವಾರದ ಕೊಂಡೊಯ್ದಿದೆ.

ಮುಸ್ಲಿಮರೆಂಬ ಕಾರಣಕ್ಕೆ ಉಗ್ರ ಹಣೆಪಟ್ಟಿ?

2006 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಕಮಾಲ್ ಅಹ್ಮದ್ ಮುಹಮ್ಮದ್ ವಕೀಲ್ ಅನ್ಸಾರಿ, ತನ್ವೀರ್ ಅಹ್ಮದ್ ಮುಹಮ್ಮದ್ ಇಬ್ರಾಹೀಂ ಅನ್ಸಾರಿ, ಮುಹಮ್ಮದ್ ಫೈಸಲ್ ಅತಾವು ಹಮಾನ್ ಶೇಕ್, ನವೀದ್ ಹುಸೇನ್ ಖಾನ್ ರಶೀದ್, ಮುಜಮ್ಮಿಲ್ ಅತಾವು ರಹಮಾನ್ ಶೇಕ್, ಮುಹಮ್ಮದ್ ಮಾಜಿದ್ ಮುಹಮ್ಮದ್ ಶಫಿ, ಇಹ್ತೆಶಾಮ್ ಕುತ್ಬುದ್ದೀನ್ ಸಿದ್ದೀಕಿ, ಝಮೀರ್ ಅಹ್ಮದ್ ಲತೀಫ್ ರಹಮಾನ್ ಶೇಕ್, ಸುಹೈಲ್ ಮಹಮೂದ್ ಶೇಕ್, ಶೇಕ್ ಮುಹಮ್ಮದ್ ಅಲಿ ಆಲಮ್, ಮುಹಮ್ಮದ್ ಸಾಜಿದ್, ಆಸಿಫ್ ಖಾನ್ ಬಶೀರ್ ಖಾನ್ ಅವರನ್ನು ಆರೋಪಿಗಳು ಎಂದು ಹೇಳಲಾಗಿತ್ತು. ಈಗ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಇದೊಂದೇ ಪ್ರಕರಣವಲ್ಲ ಅದೆಷ್ಟೋ ಭಯೋತ್ಪಾದಕ ಪ್ರಕರಣಗಳಲ್ಲಿ ನಿಜವಾದ ಆರೋಪಿಗಳ ರಕ್ಷಣೆಗೆ ಅಮಾಯಕ ಮುಸ್ಲಿಮರ ಬಲಿ ಪಡೆದರೆ, ಇನ್ನು ಕೆಲವು ಪ್ರಕರಣದಲ್ಲಿ ಇಂತಹ ಭಯೋತ್ಪಾದಕ ಕೃತ್ಯಗಳನ್ನು ಮುಸ್ಲಿಮರು ಮಾತ್ರ ಮಾಡಲು ಸಾಧ್ಯ ಎಂಬ ಪೂರ್ವಗ್ರಹವಿದೆ. ಇನ್ನು ಕೆಲವು ಪ್ರಕರಣದಲ್ಲಿ ರಾಜಕೀಯದಾಟ ಮೇಲೈಸಿ ನಿರಪರಾಧಿಗಳು ಅಪರಾಧಿಗಳೆಂಬ ಪಟ್ಟಕ್ಕೆ ಏರುತ್ತಾರೆ, ಅಪರಾಧಿಗಳು ಸಮಾಜದ ಮುನ್ನೆಲೆಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡಿ ದೇಶ ಭಕ್ತರೆನಿಸಿಕೊಳ್ಳುತ್ತಾರೆ.

ಭಯೋತ್ಪಾದಕ ದಾಳಿಯ ಸುಳ್ಳು ಆರೋಪವನ್ನು ಮುಸ್ಲಿಮರ ಮೇಲೆ ಹೊರಿಸಿದ ಹಲವು ಪ್ರಕರಣಗಳಿವೆ. ತನಿಖೆ ನಡೆದಾಗ ಪುರಾವೆಗಳಲ್ಲಿ ನಿಜವಾದ ಆರೋಪಿಗಳು ಮುಸ್ಲಿಮೇತರರು ಅಥವಾ ಸಂಘಪರಿವಾರದ ಸಂಘಟನೆಗಳಿಗೆ ಸೇರಿದವರು ಆಗಿರುವುದು ಬಹಿರಂಗವಾಗಿದೆ. ಉದಾಹರಣೆಗೆ, ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟದಲ್ಲಿ ಆರಂಭದಲ್ಲಿ ಮುಸ್ಲಿಮರ ಮೇಲೆ ಆರೋಪ ಹೊರಿಸಲಾಗಿತ್ತು. ಆದರೆ ತನಿಖೆ ವೇಳೆ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಕೊಂಡರು. ಹಿಂದೂ ಉಗ್ರಗಾಮಿ ಸಂಘಟನೆಗಳು ಭಾಗಿಯಾಗಿರುವುದು ಬಹಿರಂಗವಾಯಿತು. ಆದರೆ ಬಳಿಕ ಹಿಂಸೆ ನೀಡಿ ತಪ್ಪೊಪ್ಪುವಂತೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನು ಓದಿದ್ದೀರಾ? ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ನಾಯಕಿ ಸಾಧ್ವಿಗೆ ಮರಣದಂಡನೆ ವಿಧಿಸಲು NIA ಶಿಫಾರಸು

ಮಾಲೆಗಾಂವ್ ಸ್ಫೋಟ ಪ್ರಕರಣ: 2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆರಂಭದಲ್ಲಿ ಈ ಪ್ರಕರಣದಲ್ಲಿಯೂ ಆರಂಭದಲ್ಲಿ ಮುಸ್ಲಿಮರನ್ನು ಬಂಧಿಸಲಾಗಿತ್ತು. ಆದರೆ ಪುರಾವೆಗಳು ಇಲ್ಲದೆ ಬಿಡುಗಡೆ ಮಾಡಲಾಗಿದೆ. ತನಿಖೆ ಮುಂದುವರೆದಂತೆ ಈ ಪ್ರಕರಣದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (ನಿವೃತ್ತ) ಸೇರಿದಂತೆ ಏಳು ಆರೋಪಿಗಳನ್ನು ಹೆಸರಿಸಲಾಗಿದೆ. ಪ್ರಕರಣದ ವಿಚಾರಣೆ 17 ವರ್ಷಗಳಿಂದ ನಡೆಯುತ್ತಿದ್ದು ಜುಲೈ 31ರಂದು ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ದಾಳಿ: 2007ರ ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ದಾಳಿಯಲ್ಲಿ 68 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಹಲವು ಮುಸ್ಲಿಮ್ ಸಂಘಟನೆಗಳಿಗೆ ಸೇರಿದವರನ್ನು ಬಂಧಿಸಲಾಗಿತ್ತು. ಆದರೆ ಭಯೋತ್ಪಾದನಾ ನಿಗ್ರಹ ದಳದ(ATS) ತನಿಖೆಗಳು ಹಿಂದೂ ಉಗ್ರಗಾಮಿ ಗುಂಪುಗಳ ಕಡೆಗೆ ಬೆರಳು ತೋರಿಸಿತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ವಯಂ ಘೋಷಿತ ಸ್ವಾಮಿ, ಆರ್‌ಎಸ್‌ಎಸ್‌ನ ಮಾಜಿ ಮುಖಂಡ ಅಸೀಮಾನಂದ ಸೇರಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣವೂ ಖುಲಾಸೆಯಾಗಿದೆ. ಆದರೆ ಸ್ವಾಮಿ ಅಸೀಮಾನಂದ ವಿರುದ್ಧ ಮೆಕ್ಕಾ ಮತ್ತು ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲೂ ಆರೋಪಿ.

ಪುಣೆ ಜರ್ಮನ್ ಬೇಕರಿ ಸ್ಫೋಟ (2010): ಮುಂಬೈ ಮತ್ತು ಮಾಲೆಗಾಂವ್ ಸ್ಫೋಟಗಳಂತೆಯೇ, ಪುಣೆ ಜರ್ಮನ್ ಬೇಕರಿ ಸ್ಫೋಟದ ಎಟಿಎಸ್ ತನಿಖೆಯಲ್ಲಿ ಗಂಭೀರ ನ್ಯೂನತೆಗಳಿವೆ ಎಂಬ ಬಗ್ಗೆ 2014ರಲ್ಲಿಯೇ ವಕೀಲ ಆಶೀಶ್ ಖೇತನ್ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. 2010ರ ಫೆಬ್ರವರಿ 13ರಂದು ಪುಣೆಯ ಕೋರೆಗಾಂವ್ ಪಾರ್ಕ್‌ನ ಐಷಾರಾಮಿ ಕಾಲೋನಿಯಲ್ಲಿರುವ ಪ್ರಸಿದ್ಧ ಜರ್ಮನ್ ಬೇಕರಿಯ ಮೇಲೆ ಬಾಂಬ್ ದಾಳಿ ನಡೆದಿದ್ದು, ಈ ಸ್ಫೋಟದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇವೆಲ್ಲವುದರ ಜೊತೆಗೆ ಸದ್ಯ ಜಾಮೀನು ಲಭಿಸದೆ ಜೈಲಿನಲ್ಲೇ ಉಳಿದಿರುವವರತ್ತವೂ ಕಣ್ಣಾಡಿಸೋಣ. ದೆಹಲಿ ಗಲಭೆ ಆರೋಪದ ಮೇಲೆ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಶಿಫಾ ಉರ್ ರೆಹಮಾನ್, ಮೀರಾನ್ ಹೈದರ್, ಖಾಲಿದ್ ಸೈಫಿ ಹಲವು ವರ್ಷಗಳಿಂದ ಜೈಲಿನಲ್ಲಿಯೇ ಯಾಕೆ ಉಳಿದಿದ್ದಾರೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಇಲ್ಲಿ ಮುಸ್ಲಿಮರೆಂದರೆ ಅವರು ಭಯೋತ್ಪಾದಕರೆಂಬ ಹಣೆಪಟ್ಟಿ ಕಾಯಂ ಆಗಿದೆಯೇ?

ಧಾರ್ಮಿಕ ಗುರುತನ್ನು ಬದಿಗೊತ್ತಿ ನೋಡುವಾಗ ಇಲ್ಲಿ ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆ ಈಗ ಏಳುತ್ತದೆ. ಇಷ್ಟು ವರ್ಷ ಅಮಾಯಕರನ್ನು ಅಪರಾಧಿಗಳೆಂಬಂತೆ ಬಿಂಬಿಸಿದ್ದ ಈ ಸಮಾಜ ಇದೀಗ ನಿಜವಾದ ಆರೋಪಿಗಳು ಯಾರೆಂದು ಕೇಳುವುದೇ? ಅಥವಾ ನಿಜವಾದ ಆರೋಪಿಗಳ ರಕ್ಷಣೆಗಾಗಿಯೇ ನಿರಪರಾಧಿಗಳ ಮೇಲೆ ಆರೋಪ ಹೊರಿಸಲಾಗಿತ್ತೇ? ಇಲ್ಲಿ ಪ್ರಶ್ನೆಗಳಿವೆ ಹೊರತು, ಉತ್ತರಗಳಿಲ್ಲ. 19 ವರ್ಷದ ಬದುಕು ಕಳೆದುಕೊಂಡವರಿಗೆ, ಚಿತ್ರಹಿಂಸೆ ಅನುಭವಿಸಿದವರಿಗೆ ನ್ಯಾಯವಿಲ್ಲ. ಆದಾಗ್ಯೂ, ಮಹಾರಾಷ್ಟ್ರ ಸರ್ಕಾರವು ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿಸಿದೆ. ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆಯೊಡ್ಡಿದೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ ಸಾಗಿದ ರೈತ ಹೋರಾಟ!

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ...