- ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯ ಜೊತೆಗೆ ಕೋಮು ಪ್ರಚೋದನೆ ನೀಡಿರುವ ಆರೋಪ
- ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದ ಕೆಎಂಡಿಸಿ ಅಧಿಕಾರಿ
ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಲ್ಲದೇ, ದುರುದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ‘ಆಜ್ ತಕ್’ ವಾಹಿನಿ, ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಿಂದ ವಿಡಿಯೋ ‘ಡಿಲೀಟ್’ ಮಾಡಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿಎಫ್ಐಆರ್ ದಾಖಲಾದ ಬಳಿಕ ಟ್ವೀಟ್ ಮಾಡಿರುವ ಸುಧೀರ್ ಚೌಧರಿ, ‘ಪ್ರಶ್ನಿಸಿದ್ದಕ್ಕೆ ಎಫ್ಐಆರ್ ಹಾಕಲಾಗಿದೆ’ ಎಂದು ಆರೋಪಿದ್ದಾರೆ.
कर्नाटक में कांग्रेस सरकार द्वारा मेरे ख़िलाफ़ FIR की जानकारी मिली।
— Sudhir Chaudhary (@sudhirchaudhary) September 12, 2023
सवाल का जवाब FIR ?
वो भी ग़ैर ज़मानती धाराओं के साथ।
यानी गिरफ़्तारी की पूरी तैयारी
मेरा सवाल ये था कि स्वावलंबी सारथी योजना में हिंदू समुदाय शामिल क्यों नहीं है ?
इस लड़ाई के लिए भी मैं तैयार हूँ।
अब अदालत… https://t.co/3loIh9rGNh
“ಕರ್ನಾಟಕದ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಎಫ್‌ಐಆರ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಶ್ನೆ ಮಾಡಿದ್ದಕ್ಕೆ ಎಫ್‌ಐಆರ್ ಉತ್ತರವೇ? ಅದೂ ಜಾಮೀನು ರಹಿತ ಸೆಕ್ಷನ್‌ಗಳೊಂದಿಗೆ. ಅಂದರೆ ನನ್ನ ಬಂಧನಕ್ಕೆ ಸಂಪೂರ್ಣ ಸಿದ್ಧತೆ ಮಾಡಲಾಗಿದೆ ಎಂದಾಯ್ತು. ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಹಿಂದೂ ಸಮುದಾಯವನ್ನು ಏಕೆ ಸೇರಿಸಲಾಗಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು? ಎಲ್ಲ ಹೋರಾಟಕ್ಕೂ ನಾನು ಸಿದ್ಧ. ನ್ಯಾಯಾಲಯದಲ್ಲಿ ಸಿಗೋಣ” ಎಂದು ಟ್ವೀಟ್‌ನಲ್ಲಿ ಕರ್ನಾಟಕ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಇದಕ್ಕೆ ಉತ್ತರಿಸಿರುವ ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಅಕೇಶಿಯಾ ಮರವನ್ನು ಬಿತ್ತಿದರೆ ಮಾವು ಎಲ್ಲಿಂದ ಬರುತ್ತದೆ? ಎಂದು ವ್ಯಂಗ್ಯವಾಡಿದ್ದಾರೆ.
बोया पेड़ बबूल का तो आम कहाँ से होय ! https://t.co/xwm543ApUz
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 13, 2023
ವಿಡಿಯೋ ಯಾಕೆ ಡಿಲೀಟ್ ಮಾಡಿದ್ದೀರಾ? ನೆಟ್ಟಿಗರ ಪ್ರಶ್ನೆ
ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ‘ಡಿಲೀಟ್’ ಮಾಡಿರುವ ಹಿನ್ನೆಲೆಯಲ್ಲಿ ‘ಆಜ್ ತಕ್’, ಸುಧೀರ್ ಚೌಧರಿಯನ್ನು ಪ್ರಶ್ನಿಸಿರುವ ನೆಟ್ಟಿಗರು, ನೀವು ತಪ್ಪು ಮಾಡಿಲ್ಲ ಎಂದಾದರೆ, ಯೂಟ್ಯೂಬ್ ಮತ್ತು ಟ್ವಿಟ್ಟರ್‌ನಿಂದ ವಿಡಿಯೋ ಯಾಕೆ ಡಿಲೀಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
Why was this video and tweet deleted? 🤔 pic.twitter.com/Nyk3SyhWRJ
— Mohammed Zubair (@zoo_bear) September 12, 2023
ಅಲ್ಲದೇ, ಕೆಲವು ಟ್ರೋಲ್ ಪೇಜ್‌ಗಳು ಕೂಡ ಈ ಬಗ್ಗೆ ತಮ್ಮ ಪ್ರಶ್ನೆಗಳನ್ನು ಎತ್ತಿದ್ದು, ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಲ್ಲದೇ, ದುರುದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ನೀಡಿರುವುದು ಸತ್ಯ. ಈಗ ‘ವಿಕ್ಟಿಮ್ ಕಾರ್ಡ್’ ಬಳಸಿ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Chronology:
— Mahua Moitra Fans (@MahuaMoitraFans) September 13, 2023
🔹 Sudhir Chaudhary reported Fake News against Karnataka Congress Govt.
🔹 He Tried to give Religion angle for a state Govt. Scheme.
🔹 Tried to spread Communal Hate.
🔺Karnataka govt registered FIR against Sudhir Chaudhary.
🔸Sudhir has now deleted his video post… pic.twitter.com/UditsRzjce
ಈ ನಡುವೆ ಕೆಲವು ಬಲಪಂಥೀಯರು ಸುಧೀರ್ ಚೌಧರಿ ಹಾಗೂ ‘ಆಜ್ ತಕ್’ನ ಬೆಂಬಲಕ್ಕೆ ನಿಂತಿದ್ದು, ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಪೋಸ್ಟ್ ಹಾಕುತ್ತಿದ್ದಾರೆ.