ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲು ಕಂಡಿದೆ. ಆದಾಗ್ಯೂ, ಕಲ್ಕಾಜಿ ಸ್ಥಾನದಲ್ಲಿ ಸ್ಪರ್ಧಿಸಿದ್ದ ದೆಹಲಿ ನಿರ್ಗಮಿತಿ ಮುಖ್ಯಮಂತ್ರಿ, ಎಎಪಿ ನಾಯಕಿ ಆತಿಶಿ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವನ್ನು ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ್ದು, ಡಾನ್ಸ್ ಮಾಡಿದ್ದಾರೆ. ಅವರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟ್ರೋಲ್-ಟೀಕೆಗೆ ಗುರಿಯಾಗಿದೆ.
ಶನಿವಾರ, ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕೇಜ್ರಿವಾಲ್ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಎಎಪಿ ಪ್ರಮುಖ ನಾಯಕರಲ್ಲಿ ಆತಿಶಿ ಮಾತ್ರವೇ ಗೆದ್ದಿದ್ದಾರೆ. ಆತಿಶಿ ಗೆದ್ದಿರುವ ಹಿನ್ನೆಲೆ, ಅವರ ನಿವಾಸದ ಬಳಿ ಶನಿವಾರ ರಾತ್ರಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಈ ವೇಳೆ, ಕಾರ್ಯಕರ್ತರೊಂದಿಗೆ ಆತಿಶಿ ಕೂಡ ಡಾನ್ಸ್ ಮಾಡಿದ್ದಾರೆ.
ಆ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, “ಇದು ಎಂತಹ ನಾಚಿಕೆಗೇಡಿನ ಪ್ರದರ್ಶನ? ಪಕ್ಷ ಸೋತಿದೆ, ಪಕ್ಷದ ಎಲ್ಲ ಪ್ರಭಾವಿ ನಾಯಕರು ಸೋತಿದ್ದಾರೆ. ಅದರೂ, ಆತಿಶಿ ಮರ್ಲೇನಾ ಈ ರೀತಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
#WATCH | #DelhiElectionResults | AAP winning candidate from Kalkaji Vidhan Sabha and outgoing CM Atishi dances and celebrates her victory with the supporters and party workers. pic.twitter.com/nGbItW5nM7
— ANI (@ANI) February 8, 2025
ಆತಿಶಿ ಸಂಭ್ರಮದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, “ಅವರು ತಾನು ಮಾಡಿದ್ದಕ್ಕೆ ಹೆಮ್ಮೆ ಪಡುತ್ತಿದ್ದರೆ. ಎಲ್ಲ ಉನ್ನತ ನಾಯಕರು ಸೋತು, ತನ್ನ ಪಕ್ಷ ಅವಮಾನಕ್ಕೊಳಗಾಗಿದ್ದರೂ, ಅವರು ಡಾನ್ಸ್ ಮಾಡುತ್ತಿದ್ದಾರೆ. ಇದನ್ನೇ ತಂಡದ ಮನೋಭಾವ ಎಂದು ಕರೆಯಲಾಗುತ್ತದೆ!” ಎಂದು ಕಿಡಿಕಾರಿದ್ದಾರೆ.
ಮತ್ತೊಬ್ಬ ನೆಟ್ಟಿಗರು, “ಇದು ಶೂನ್ಯ ತಂಡ ಮನೋಭಾವ! ಆದರೆ, ನಾನು ಕೂಡ ಅರವಿಂದ್ ಕೇಜ್ರಿವಾಲ್ ಸೋತಿದ್ದನ್ನು ಸಂಭ್ರಮಮಿಸಿದೆ, ಆತಿಶಿ ಯಾಕೆ ಸಂಭ್ರಮಿಸಬಾರದು. ವಿಧಾನಸಭೆಯಿಂದ ಕೇಜ್ರಿವಾಲ್ ಹೊರಗುಳಿದರೆ, ಅವರು ದೆಹಲಿಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗುತ್ತಾರೆಯಲ್ಲವೇ” ಎಂದು ಟ್ರೋಲ್ ಮಾಡಿದ್ದಾರೆ.