ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಮತ್ತು ಕಾರ್ಯಕರ್ತರು ಇಂದು ‘ಸಾಮೂಹಿಕ ಉಪವಾಸ’ ನಡೆಸಲಿದ್ದಾರೆ.
ಭಾರತ ಮತ್ತು ವಿದೇಶಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಿಗರು ಪಕ್ಷದ ‘ಸಾಮೂಹಿಕ ಉಪವಾಸ’ದಲ್ಲಿ ಭಾಗವಹಿಸಲಿದ್ದಾರೆ ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ. “ಜನರು ತಮ್ಮ ಮನೆಗಳಲ್ಲಿ ಉಪವಾಸ ಆಚರಿಸಬಹುದು ಮತ್ತು ದೆಹಲಿ ಮುಖ್ಯಮಂತ್ರಿಯನ್ನು ಬೆಂಬಲಿಸಬಹುದು” ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ತಿಹಾರ್ ಜೈಲಿನಿಂದಲೇ ಶಾಸಕರಿಗೆ ಕೇಜ್ರಿವಾಲ್ ನಿರ್ದೇಶನ: ಜನರ ಸಮಸ್ಯೆ ಪರಿಹರಿಸಲು ಸೂಚನೆ
ಎಎಪಿಯ ಎಲ್ಲಾ ಶಾಸಕರು, ಪದಾಧಿಕಾರಿಗಳು ಜಂತರ್ ಮಂತರ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಸಾಮೂಹಿಕ ಉಪವಾಸ ಆರಂಭಿಸಲಿದ್ದಾರೆ. ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಪ್ರತಿಭಟನಾ ಸ್ಥಳಕ್ಕೆ ತೆರಳುವ ರಸ್ತೆಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡಿಂಗ್ ಇದ್ದು ಇಂದು ಮಧ್ಯ ದೆಹಲಿಯ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.
आज सुबह 10 बजे से @ArvindKejriwal जी की साज़िशन हुई गिरफ्तारी के खिलाफ उपवास रखेगा पूरा देश 🔥🇮🇳
👉 उपवास करते हुए अपनी तस्वीरें व संदेश हमें इस Website पर भेजें 👇https://t.co/22CZdcSnDQ
👉 Twitter पर उपवास की तस्वीरों के साथ हमें Tag करना ना भूलें
हारेगी तानाशाही, जीतेगा… pic.twitter.com/ggBHeUC3c3
— AAP (@AamAadmiParty) April 7, 2024
ಆಮ್ ಆದ್ಮಿ ಪಕ್ಷ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ‘ಘೇರಾವ್’ ಕರೆ ನೀಡಿತ್ತು. ಪ್ರತಿಭಟನೆಯ ಸಮಯದಲ್ಲಿ ಹಲವಾರು ಎಎಪಿ ನಾಯಕರು ಮತ್ತು ಮಹಿಳೆಯರು ಸೇರಿದಂತೆ ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿದ್ದೀರಾ? ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿದ್ದ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಕಾರ
ಬಂಧನದ ಸಮಯದ ಬಗ್ಗೆ ಎಎಪಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಕೇಜ್ರಿವಾಲ್ ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ಸಿಎಂ ಜೈಲಿನಿಂದಲೇ ಆಡಳಿತಕ್ಕೆ ಸಂಬಂಧಿಸಿದ ಆದೇಶಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಜೈಲಿನಲ್ಲಿದ್ದರೂ ಕೂಡಾ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಎಪಿ ಸ್ಪಷ್ಟಪಡಿಸಿದೆ. ಈ ನಡುವೆ ಕೇಜ್ರಿವಾಲ್ ಸಿಎಂ ಸ್ಥಾನದಿಂದ ಅಮಾನತುಗೊಳಿಸಲು ಬಿಜೆಪಿಯು ಒತ್ತಾಯಿಸಿದೆ. ದೆಹಲಿ ಹೈಕೋರ್ಟ್ ಸತತ ಎರಡು ಬಾರಿ ಈ ಸಂಬಂಧ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿದೆ. ಇನ್ನು ಕೇಜ್ರಿವಾಲ್ ಬಂಧನದ ಬಳಿಕ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದ ಎಎಪಿ ಬಣವು ಈಗ ಒಟ್ಟಾಗಿದೆ.