ನಾಯಕರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ನಟ ಶೇಖರ್ ಸುಮನ್ ಮತ್ತು ಮಾಜಿ ಕಾಂಗ್ರೆಸ್ ನಾಯಕ ರಾಧಿಕಾ ಖೇರಾ ಅವರು ಮಂಗಳವಾರ ದೆಹಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಇದನ್ನು ಓದಿದ್ದೀರಾ? ದೆಹಲಿ| ಚುನಾವಣೆ ಹೊಸ್ತಿಲಲ್ಲೇ ಐವರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಶೇಖರ್ ಸುಮನ್, “ನಿನ್ನೆಯವರೆಗೂ ನಾನು ಇಂದು ಇಲ್ಲಿ ಕುಳಿತುಕೊಳ್ಳುತ್ತೇನೆ ಎಂದು ತಿಳಿದಿರಲಿಲ್ಲ. ಆದರೆ ಜೀವನದಲ್ಲಿ ಅನೇಕ ವಿಷಯಗಳು ತಿಳಿದೋ ಅಥವಾ ತಿಳಿಯದೆಯೋ ನಡೆಯುತ್ತವೆ, ನಾನಿಲ್ಲಿಗೆ ಬಂದಿದ್ದೇನೆ. ನನಗೆ ಇಲ್ಲಿಗೆ ಬರುವ ಯೋಚನೆ ಹುಟ್ಟಿಸಿದ, ನನಗೆ ಆದೇಶ ನೀಡಿದ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
#WATCH | Actor Shekhar Suman joins BJP at the party headquarters in Delhi pic.twitter.com/Y1izO3Fp6X
— ANI (@ANI) May 7, 2024
ಕಾಂಗ್ರೆಸ್ನ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿಯಾಗಿದ್ದ ರಾಧಿಕಾ ಖೇರಾ ಅವರು ಕಾಂಗ್ರೆಸ್ ಅನ್ನು ರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಕರೆದಿದ್ದಾರೆ. ಇದೇ ಕಾರಣವನ್ನು ನೀಡಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು.
#WATCH | Former Congress National Media Coordinator, Radhika Khera joins BJP at the party headquarters in Delhi pic.twitter.com/ZnYeVvtFAA
— ANI (@ANI) May 7, 2024
“ರಾಮನ ಭಕ್ತೆ ಎಂಬ ಕಾರಣಕ್ಕೆ, ರಾಮಲಲ್ಲಾನ ದರ್ಶನ ಪಡೆದಿದ್ದಕ್ಕೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ. ಬಿಜೆಪಿ ಸರ್ಕಾರದ, ಮೋದಿ ಸರ್ಕಾರದ ರಕ್ಷಣೆ ಸಿಗದಿದ್ದರೆ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅದು ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಲ್ಲ, ಅದು ರಾಮ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್” ಎಂದು ರಾಧಿಕಾ ಖೇರಾ ಕಿಡಿಕಾರಿದ್ದಾರೆ.