ಖರ್ಗೆ, ರಾಹುಲ್‌ ನಂತರ ಜಾತಿ ಗಣತಿ ಅಂಕಿಅಂಶ ಬಿಡುಗಡೆಗೆ ಬಿಹಾರ್‌ ಸಿಎಂ ನಿತೀಶ್ ಆಗ್ರಹ

Date:

Advertisements
  • 1931ರ ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ 2011ರಲ್ಲಿ ನಡೆದಿದ್ದ ಜಾತಿ ಗಣತಿ
  • ನೂತನ ಗಣತಿ ಆರಂಭಿಸಬೇಕೆಂದು ಎಸ್‌ಪಿ, ಬಿಎಸ್‌ಪಿ ಸೇರಿ ಹಲವು ಪಕ್ಷಗಳ ಒತ್ತಾಯ

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಗಣತಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದ ಬೆನ್ನಲ್ಲೇ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸಿದ್ದಾರೆ.

2011-12ರ ಅವಧಿಯಲ್ಲಿ ಯುಪಿಎ ಸರ್ಕಾರವು ಮೊದಲ ಬಾರಿಗೆ ಸುಮಾರು 25 ಕೋಟಿ ಕುಟುಂಬಗಳನ್ನು ಒಳಗೊಂಡು ನಡೆಸಿರುವ ಸಾಮಾಜಿಕ-ಆರ್ಥಿಕ ಜಾತಿ ಗಣತಿ ವಿವರ ಬಿಡುಗಡೆ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಟ್ವಿಟರ್‌ ಮೂಲಕ ಪತ್ರ ಹಂಚಿಕೊಂಡಿರುವ ಖರ್ಗೆ, “2014ರ ಮೇನಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮತ್ತು ಇತರ ಸಂಸದರು ವರದಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರೂ ಹಲವು ಕಾರಣಗಳಿಗಾಗಿ ಜಾತಿ ದತ್ತಾಂಶವನ್ನು ಪ್ರಕಟಿಸಿಲ್ಲ. ನವೀಕರಿಸಲಾದ ಜಾತಿ ಗಣತಿ ಇಲ್ಲದಿರುವಾಗ, ನಾನು ವಿಶ್ವಾಸಾರ್ಹ ದತ್ತಾಂಶಗಳ ಬಗ್ಗೆ ಆತಂಕಗೊಂಡಿದ್ದೇನೆ. ಅರ್ಥಪೂರ್ಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ, ವಿಶೇಷವಾಗಿ ಒಬಿಸಿಗಳಿಗೆ ಜಾತಿ ಗಣತಿಯಿಂದ ಅನುಕೂಲವಾಗುತ್ತದೆ” ಎಂದು ತಿಳಿಸಿದ್ದಾರೆ.

Advertisements

“ಜಾತಿ ಗಣತಿಯ ದತ್ತಾಂಶ ಇಲ್ಲವಾದರೆ ‘ಅರ್ಥಪೂರ್ಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳ ಮೇಲೆ, ವಿಶೇಷವಾಗಿ ಒಬಿಸಿಗಳ ಮೇಲೆ ಪರಿಣಾಮ ಬೀರಬಹುದು. 2021ರ ವೇಳೆಗೆ ಮಾಡಬೇಕಾದ ಕೊನೆಯ ಗಣತಿಯನ್ನು ಮುಂದೂಡಲಾಗಿದೆ. ಕೂಡಲೇ ಆ ಗಣತಿಯನ್ನು ಆರಂಭಿಸಬೇಕು” ಎಂದು ಒತ್ತಾಯಿಸಿದರು.

ಜಾತಿ ಗಣತಿ ಮರೆ ಮಾಚುತ್ತಿರುವ ಸರ್ಕಾರದ ವಿರುದ್ಧ ರಾಹುಲ್ ಟೀಕೆ

ಕೋಲಾರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “2011ರಲ್ಲಿ ಯುಪಿಎ ಸರ್ಕಾರ ನಡೆಸಿದ ಜಾತಿ ಗಣತಿಯನ್ನು ಕೇಂದ್ರವು ಮರೆಮಾಚುತ್ತಿದೆ. ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಿಗೆ ಅಗೌರವ ತೋರುತ್ತಿದೆ” ಎಂದು ಆರೋಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುಪಿಎ ಸರ್ಕಾರವು ನಡೆಸಿದ ಜನಗಣತಿಯಿಂದ ಜಾತಿ ಆಧಾರಿತ ಅಂಕಿ ಅಂಶವನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ ರಾಹುಲ್‌ ಗಾಂಧಿ, “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಮೇಲಿನ ಶೇ. 50ರಷ್ಟರ ಮಿತಿಯನ್ನು ತೆರವುಗೊಳಿಸಬೇಕು” ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

“ಯುಪಿಎ ಸರ್ಕಾರದ ಜಾತಿ ಗಣತಿಯು ಭಾರತದ ಪ್ರತಿ ಜಾತಿಯ ಅಂಕಿ ಅಂಶ ಹೊಂದಿದೆ. ಮೋದಿಯವರೇ, ಒಬಿಸಿಗಳ ಬಗ್ಗೆ ಮಾತನಾಡುತ್ತಿರುವ ನೀವು ನಮ್ಮ ಸರ್ಕಾರ ಜಾರಿಗೊಳಿಸಿದ ಅಂಕಿ ಅಂಶವನ್ನು ಬಹಿರಂಗಗೊಳಿಸಿ. ಎಲ್ಲರೂ ದೇಶದ ಪ್ರಗತಿಯಲ್ಲಿ ಭಾಗಿಯಾಗಿ ಸಮಾನ ಪಾಲುದಾರರಾಗಬೇಕಾದರೆ, ಅದಕ್ಕೆ ದೇಶದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ನೀವು, ಜಾತಿ ಗಣತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ, ದೇಶದಲ್ಲಿ ಎಷ್ಟು ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಸಮುದಾಯದವರಿದ್ದಾರೆ ಎಂಬುದನ್ನು ಜನರಿಗೆ ತಿಳಿಸಿ. ಹಾಗೆ ಮಾಡದಿದ್ದರೆ ಒಬಿಸಿಗಳಿಗೆ ಅವಮಾನ ಮಾಡಿದಂತಾಗುತ್ತದೆ. ನೀವು ಒಬಿಸಿಗಳ ಬಗ್ಗೆ ಮಾತನಾಡಿದ್ದೀರಿ, ಒಬಿಸಿಗಳ ಜನಸಂಖ್ಯೆ ಎಷ್ಟು ಎಂಬುದನ್ನು ದೇಶಕ್ಕೆ ತೋರಿಸಿ” ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದರು.

ಜಾತಿ ಗಣತಿಯನ್ನು ತಕ್ಷಣವೇ ಆರಂಭಿಸಲು ನಿತೀಶ್ ಕುಮಾರ್ ಒತ್ತಾಯ

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, “2011ರಲ್ಲಿ ಜಾತಿ ಗಣತಿಯ ಅಂಕಿ ಅಂಶಗಳು ಲಭ್ಯವಾಗದ ಕಾರಣ ನೂತನ ಜಾತಿ ಗಣತಿಯನ್ನು ತಕ್ಷಣ ಆರಂಭಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ನಾವು ಜಾತಿ ಆಧಾರಿತ ಜನಗಣತಿಯನ್ನು ಹೊಂದಲು ನಿರ್ಧರಿಸಿದಾಗ ಬಿಹಾರದ ಎಲ್ಲಾ ಪಕ್ಷಗಳು ಒಂದೇ ರೀತಿಯ ದೃಷ್ಟಿಕೋನ ಹೊಂದಿದ್ದವು ಮತ್ತು ಪ್ರಸ್ತುತ ಅದನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. ಇದು ದೇಶದ ಜನರಿಗೆ ಹೆಚ್ಚು ಪ್ರಯೋಜನಕಾರಿ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡ ಜಾತಿ ಗಣತಿ ನಡೆಸಬೇಕೆಂದು ಬೇಡಿಕೆಗಳನ್ನು ಮಂಡಿಸಿದ್ದರು.

ಉತ್ತರ ಪ್ರದೇಶ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅಖಿಲೇಶ್‌, “ಉತ್ತರ ಪ್ರದೇಶದ ಜನರು ಜಾತಿ ಗಣತಿ ನಡೆಯಬೇಕೆಂದು ಬಯಸುತ್ತಾರೆ. ಅದು ನಡೆದರೆ, ಜನರು ತಮ್ಮ ಹಕ್ಕು ಮತ್ತು ಗೌರವವನ್ನು ಪಡೆಯುತ್ತಾರೆ. ಇದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಬಹುದು” ಎಂದು ಹೇಳಿದ್ದರು

ರಾಷ್ಟ್ರವ್ಯಾಪಿ ಜಾತಿ ಗಣತಿಗೆ ತಮ್ಮ ಪಕ್ಷವು ಕೂಡ ಬೆಂಬಲಿಸಲಿದ್ದು, ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಲು ಮುಂದಾಗಬೇಕು ಎಂದು ಮಾಯಾವತಿ ಹೇಳಿದ್ದರು.

ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯು ಗ್ರಾಮೀಣ ಮತ್ತು ನಗರ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಸಮಗ್ರ ಅಧ್ಯಯನ. ಹೆಚ್ಚುವರಿಯಾಗಿ, ಇದು ಜಾತಿ ಗಣತಿಯನ್ನು ಒಳಗೊಂಡಿದ್ದು, ಜನಸಂಖ್ಯೆಯ ಜಾತಿ ಸಂಯೋಜನೆಯ ಮಾಹಿತಿಯನ್ನು ಒದಗಿಸುತ್ತದೆ. 1931ರ ನಂತರ ಜಾತಿ ಗಣತಿ ಸ್ಥಗಿತವಾಗಿತ್ತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2011ರಲ್ಲಿ ಮತ್ತೆ ಜಾತಿಗಣತಿ ನಡೆಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X