ಯಾರು ಈ ದೇಶವನ್ನು ಅರವತ್ತು ವರ್ಷಕ್ಕಿಂತ ಹೆಚ್ಚುಕಾಲ ಆಡಳಿತ ಮಾಡಿ, ಲೂಟಿ ಮಾಡಿದ್ದಾರೋ ಅವರೆಲ್ಲರೂ ಮತ್ತೆ ಒಟ್ಟು ಸೇರಿದ್ದಾರೆ. ಬೆಂಗಳೂರಿಗೆ ಬಂದಿದ್ದವರದಲ್ಲಿ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಜುಲೈ 18ರಂದು ನಡೆದ ಲೋಕಸಭಾ ವಿರೋಧ ಪಕ್ಷಗಳ ಸಭೆಯ ಬಗ್ಗೆ ಉಡುಪಿಯಲ್ಲಿ ಕರದ್ಲಾಜೆ ಮಾತನಾಡಿದ್ದಾರೆ. “ಕಳೆದ ಬಾರಿ ಕೂಡ ಅವರು ಒಟ್ಟು ಸೇರಿದ್ದನ್ನು ನಾವು ನೋಡಿದ್ದೇವೆ. ಆದರೆ, ಈ ಬಾರಿ ಮತ್ತೆ ಬಹಳ ಬಿರುಸಿನ ಪ್ರಚಾರ ಆರಂಭ ಮಾಡಿದ್ದಾರೆ. ಅವರ ಪ್ರಯತ್ನ ಫಲಿಸುವುದಿಲ್ಲ” ಎಂದಿದ್ದಾರೆ.
“ಅವರು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರು ಇಟ್ಟಿದ್ದಾರೆ. ಅವರದ್ದು ಇಂಡಿಯಾ ಅಲ್ಲ, ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ. ಅವರು ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ. ಅವರು ಇಂಡಿಯ ಎಂಬ ಹೆಸರು ಇಟ್ಟಿರುವುದೇ ಕಾನೂನುಬಾಹಿರವಾಗಿದೆ” ಎಂದುಅವರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕನ ಆಯ್ಕೆ ಯಾಕೆ ಕಗ್ಗಂಟಾಗಿ ಉಳಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದ ಸಚಿವೆ, ಪೆಚ್ಚು ಮೋರೆ ಹಾಕಿ ಕೊಠಡಿಯಿಂದ ಹೊರ ನಡೆಸಿದ್ದಾರೆ.