ಸಾಕ್ಷಿ ಸಮೇತ ಡಿ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ 80% ವರೆಗೂ ಕಮೀಷನ್ ದಂಧೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಗಾದೆ ಮಾತು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಷರಶಃ ಅನ್ವಯಿಸುತ್ತದೆ.
ಬಿಜೆಪಿ ಸರ್ಕಾರದ ಕಾಲದಲ್ಲಿ ಇದೇ ಕೆಂಪಣ್ಣನವರು ಕಮೀಷನ್ ಆರೋಪದ ಗದ್ದಲ ಎಬ್ಬಿಸಿದ್ದರು. ಕಾಂಗ್ರೆಸ್ಸಿಗರು ಅದನ್ನು ಬಂಡವಾಳ ಮಾಡಿಕೊಂಡು ಸತ್ಯಹರಿಶ್ಚಂದ್ರರಂತೆ ಕೂಗಾಡಿದ್ದರು” ಎಂದಿದ್ದಾರೆ.
“ಸತ್ಯ ಏನೆಂಬುದು ಜನರಿಗೆ ಮನವರಿಕೆಯಾಗುತ್ತಿದೆ, ಮಾನ್ಯ ಕೆಂಪಣ್ಣನವರು ತಾವೇ ಹೇಳಿರುವಂತೆ
ಕಮೀಷನ್ ವಸೂಲಿಗೆ ನಿಯುಕ್ತಿಯಾಗಿರುವ ಅಧಿಕಾರಗಳ ವಿವರ ಧೈರ್ಯವಾಗಿ ಬಹಿರಂಗ ಪಡಿಸಲಿ ಆಗ ಅದರ ಹಿಂದಿರುವ ಮುಖ್ಯ, ಉಪ ಮುಖ್ಯ ಸೂತ್ರಧಾರಿಗಳ ನೈಜ ಮುಖವಾಡ ಕಳಚುತ್ತದೆ” ಎಂದು ಹೇಳಿದ್ದಾರೆ.
“ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ” ಎಂಬ ಗಾದೆ ಮಾತು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಷರಶಃ ಅನ್ವಯಿಸುತ್ತದೆ.
ಬಿಜೆಪಿ ಸರ್ಕಾರದ ಕಾಲದಲ್ಲಿ ಇದೇ ಕೆಂಪಣ್ಣನವರು ಕಮಿಷನ್ ಆರೋಪದ ಗದ್ದಲ ಎಬ್ಬಿಸಿದ್ದರು, ಕಾಂಗ್ರೆಸ್ಸಿಗರು ಅದನ್ನು ಬಂಡವಾಳ ಮಾಡಿಕೊಂಡು ಸತ್ಯಹರಿಶ್ಚಂದ್ರರಂತೆ ಕೂಗಾಡಿದ್ದರು, ಆದರೆ ಈಗ ಸಾಕ್ಷಿ ಸಮೇತ 40% ಕಮೀಷನ್… pic.twitter.com/cFmGSwyZq4— Vijayendra Yediyurappa (@BYVijayendra) February 9, 2024
ವಿಜಯಣ್ಣ ಎಂಟು ತಿಂಗಳ ಹಿಂದೆ ತಮ್ಮದೇ ಸರ್ಕಾರದಲ್ಲಿ ನಲವತ್ತು ಪರ್ಸೆಂಟ್ ಕಮಿಷನ್,,ಪಾಪ ಪರ್ಸೆಂಟೇಜು ಏಟಿಗೆ ಕೆಲವರು ಜೀವ ಕಳಕೊಂಡರು,,, ಎಷ್ಟು ಬೇಗ ಮರೆತುಹೋಗಿದೆ