ಕುರ್ಚಿಗಾಗಿ ಯುಪಿಎ ಸರ್ಕಾರ ಮಂಡಿಸಿದ ತೆರಿಗೆ ವಿಕೇಂದ್ರೀಕರಣಕ್ಕೆ ಜೈ ಎಂದಿದ್ದ ಸಿದ್ದರಾಮಯ್ಯ: ಬಿಜೆಪಿ ಟೀಕೆ

Date:

2013ರಲ್ಲಿ ರಾಹುಲ್ ಗಾಂಧಿಯವರ ಅತ್ಯಾಪ್ತ ರಘುರಾಂ ರಾಜನ್ ನೇತೃತ್ವದಲ್ಲಿ “ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವ ಸಮಿತಿ”ಯ ಶಿಫಾರಸ್ಸಿನ ಮೇಲೆ ಕರ್ನಾಟಕದ ತೆರಿಗೆ ಹಂಚಿಕೆ ಪ್ರಮಾಣವನ್ನು 4.13% ನಿಂದ 3.73% ಕ್ಕೆ ಇಳಿಸಿ, ಕಾಂಗ್ರೆಸ್ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಿತ್ತು ಎಂದು ಬಿಜೆಪಿ ಆರೋಪಿಸಿದೆ.

ಮೋದಿ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸರಣಿ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡಿರುವ ರಾಜ್ಯ ಬಿಜೆಪಿ, “ಸರಣಿ ಸುಳ್ಳುಗಾರ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಎಷ್ಟೇ ಅನ್ಯಾಯವಾದರೂ, ತಮ್ಮ ಕುರ್ಚಿ ಉಳಿದರೆ ಸಾಕು ಎಂಬ ಸ್ವಾರ್ಥದ ಕಾರಣಕ್ಕೆ ತೆರಿಗೆ ವಿಕೇಂದ್ರೀಕರಣದ ಕುರಿತು ಅಂದಿನ ಯುಪಿಎ ಸರ್ಕಾರ ಮಂಡಿಸಿದ ಒಪ್ಪಂದಕ್ಕೆ “ಜೈ” ಎಂದಿದ್ದರು” ಎಂದು ಟೀಕಿಸಿದೆ.

“ಸಹಜವಾಗಿ ಅಂದು ಯುಪಿಎ ಸರ್ಕಾರ ನೀಡಿದ ವರದಿಯ ಶಿಫಾರಸುಗಳ ಮೇಲೆ ಹಣಕಾಸು ಆಯೋಗ ಕಾರ್ಯನಿರ್ವಹಿಸಿತು. ಕರ್ನಾಟಕಕ್ಕೆ ಯು.ಪಿ.ಎ ಸಮಯದಲ್ಲಾದ ಅನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕದ ತೆರಿಗೆ ಆದಾಯದ ಪಾಲನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಹಾಗೂ ಅನುದಾನವನ್ನು ದ್ವಿಗುಣಗೊಳಿಸುವ ಮೂಲಕ, ಕರ್ನಾಟಕಕ್ಕೆ ನ್ಯಾಯ ಒದಗಿಸಿದೆ” ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಿಎಂ ಸಿದ್ದರಾಮಯ್ಯರವರೇ ನಿಮಗೆ ನಿಜಕ್ಕೂ ತಾಕತ್ತು, ದಮ್ಮು ಹಾಗೂ ನಿಮ್ಮ ಅಂತರಾಳದಲ್ಲಿ ನಿಜಕ್ಕೂ ಕನ್ನಡಿಗರ ಮೇಲೆ ಮಮತೆಯಿದ್ದರೆ, ಕರ್ನಾಟಕಕ್ಕೆ ಮಹಾದ್ರೋಹ ಮಾಡಿದ ದೆಹಲಿಯ ಎಐಸಿಸಿ ಕಚೇರಿ ಮುಂದೆ ಹಾಗೂ ರಾಹುಲ್ ಗಾಂಧಿಯವರ ಮನೆ ಮುಂದೆ ಪ್ರತಿಭಟಿಸಬೇಕು” ಎಂದು ತಿರುಗೇಟು ನೀಡಿದೆ.

“ನೆಹರು ಗಾಂಧಿ ಕುಟುಂಬದ ಮುಂದೆ ನಡು ಬಗ್ಗಿಸಿ ನಿಲ್ಲುವ ನಿಮಗೆ ಕನ್ನಡಿಗರ ಮೇಲೆ ಮಮತೆಯೂ ಇಲ್ಲ, ಕರ್ನಾಟಕದ ಬಗ್ಗೆ ಒಲವೂ ಇಲ್ಲ, ನಿಮ್ಮದೇನಿದ್ದರೂ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್ ಹೊರತು ಉಳಿದಿದ್ದೆಲ್ಲವೂ ಬರೀ ಬೊಗಳೆ” ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹372.13 ಕೋಟಿ ವೆಚ್ಚದಲ್ಲಿ ರಾಷ್ಟ್ರವ್ಯಾಪಿ 1,275 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ

“ಅಮೃತ್ ಭಾರತ ನಿಲ್ದಾಣ ಯೋಜನೆಯಡಿ ₹372.13 ಕೋಟಿ ವೆಚ್ಚದಲ್ಲಿ ರಾಷ್ಟ್ರವ್ಯಾಪಿ 1,275...

ಮಾನನಷ್ಟ ಪ್ರಕರಣಗಳಲ್ಲಿ ಪಕ್ಷವನ್ನೂ ಆರೋಪಿಯಾಗಿ ಮಾಡಬಹುದು: ಕರ್ನಾಟಕ ಹೈಕೋರ್ಟ್

ಮಾನನಷ್ಟ ಮೊಕದ್ದಮೆಗಳಲ್ಲಿ ಒಬ್ಬ ವ್ಯಕ್ತಿ ಮಾತ್ರವಲ್ಲ, ರಾಜಕೀಯ ಪಕ್ಷಗಳಂತಹ ಸಂಸ್ಥೆಗಳು ಸೇರಿದಂತೆ...

ಆನೇಕಲ್ | ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿಯೊಬ್ಬರ ಶವ ಸುಟ್ಟ ರೀತಿಯಲ್ಲಿ ಪತ್ತೆ

ಬೆಂಗಳೂರಿನ ಆನೇಕಲ್‌ ಬಳಿಯ ಕಾಳನಾಯಕನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿಯೊಬ್ಬರ ಶವ...

ಬೆಂಗಳೂರು | ಪದೇಪದೆ ಡ್ರಗ್ಸ್‌ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಅಪಹರಣ: ಆರೋಪಿಗಳ ಬಂಧನ

ಪದೇಪದೆ ಡ್ರಗ್ಸ್‌ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಭಾವಿಸಿ...