ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹೀನಾಯವಾದ ಸೋಲು ಕಂಡಿದ್ದು ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತ ವಾಗ್ದಾಳಿ ನಡೆಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಅಮಿತ್ ಶಾ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, “ಗೌರವಾನ್ವಿತ, ನಕಲಿ ಚಾಣಕ್ಯ ಅಮಿತ್ ಶಾ ಅವರೇ, ನಿಮ್ಮ ಸ್ಥಿತಿ ಕೆಟ್ಟು ಹೋಗುವಂತಹ ಅಹಂಕಾರ ಇಟ್ಟುಕೊಳ್ಳಬೇಡಿ. ಇದು ಒಳ್ಳೆಯದಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಅಮಿತ್ ಶಾ ಹೊರೆಸಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಅಮಿತ್ ಶಾ ವಿರುದ್ಧ ಕಿಡಿಕಾರಿರುವ ಬಿಜೆಪಿ ಕಾರ್ಯಕರ್ತ, “ಯೋಗಿ ಆದಿತ್ಯನಾಥ್ ಅವರಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿದೆಯೇ? ನೀರಜ್ ಶೇಖರ್ ಸಿಂಗ್ ಯೋಗಿ ಅವರ ಮಿತ್ರರೇ ಅಥವಾ ನೀನು ಟಿಕೆಟ್ ನೀಡಿದ್ದೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ಗಾಂಧಿನಗರ ಕ್ಷೇತ್ರ | 5 ಲಕ್ಷ ಮತಗಳ ಅಂತರದಿಂದ ಗೃಹ ಸಚಿವ ಅಮಿತ್ ಶಾ ಗೆಲುವು
“ಸಲೇಮ್‌ಪುರದಲ್ಲಿ ಟಿಕೆಟ್ ನೀಡಿದ್ದು ಯಾರು? ಪ್ರಕಾಶ್ ರಾಜಭರ್ ಜೊತೆ ಮೈತ್ರಿ ಮಾಡಲು ಯೋಗಿ ಹೇಳಿದ್ದೆ” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಅಮಿತ್ ಶಾರನ್ನು ದಲ್ಲಾಳಿ ಎಂದು ಸಂಬೋಧಿಸಿರುವ ಬಿಜೆಪಿ ಕಾರ್ಯಕರ್ತ, “ಎಲ್ಲ ದಲ್ಲಾಳಿಯನ್ನು ನೀವು ಮಾಡಿ. ಎಲ್ಲ ಭಟ್ಟಂಗಿತನವನ್ನು ಮಾಡಿದ್ದು ನೀವು” ಎಂದಿದ್ದಾರೆ.
“ಕಳ್ಳತನ ನೀವು ಮಾಡಿದ್ದು, ವಾರಣಾಸಿಯಲ್ಲಿ ಗುಜರಾತಿಗಳಿಗೆ (ಪ್ರಧಾನಿ ಮೋದಿ) ಸೀಟು ಹಂಚಿದ್ದು ನೀವು, ವಾರಣಾಸಿಯಲ್ಲಿ ಗುತ್ತಿಗೆದಾರರು ಎಷ್ಟಿದ್ದಾರೆ ಎಂದು ನಿಮಗೆ ತಿಳಿದಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
Breakin 🔥
Amit shah is schooled by a small time BJP worker of UP.
BJP is at verge of Breakin…
Nobody wants Amit shah and Narendra Modi to continue.
Watch and share. pic.twitter.com/32VO0sWx0i
— Manu🇮🇳🇮🇳 (@mshahi0024) June 5, 2024
“100 ಕೋಟಿ ರೂಪಾಯಿ ಖರ್ಚು ಮಾಡಿದ್ದೀರಿ, ಎಲ್ಲ ಗುತ್ತಿಗೆದಾರರಿಗೆ ವಾರಣಾಸಿಯಲ್ಲಿ ಆಶ್ರಯ ನೀಡಿದ್ದೀರಿ, ವಾರಣಾಸಿಯಲ್ಲಿ ಗುಜರಾತಿಗಳಿಗೆ ಆಶ್ರಯ ನೀಡಿದ್ದೀರಿ, ವಾರಣಾಸಿಯ ವ್ಯಾಪಾರಿಗಳಿಗೆ ನಷ್ಟ ಉಂಟಾಗುವಂತೆ ಮಾಡಿ ನೀವು ಆದಾಯ ಗಳಿಸಲು ಆರಂಭಿಸಿದಿರಿ” ಎಂದು ಆರೋಪಿಸಿದ್ದಾರೆ.
“ನಿಮ್ಮ ಮಗನನ್ನು ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಸೇರಿಸಿ ಅಲ್ಲಿ ದಲ್ಲಾಳಿ ಮಾಡಲು ಆರಂಭಿಸಿದಿರಿ. ಪೂರ್ವಂಚಲ್‌ನಲ್ಲಿ ಎಲ್ಲ ಸೀಟನ್ನು ಮಾರಾಟ ಮಾಡಿದ್ದೀರಿ. ಬಾಬಾ (ಆದಿತ್ಯನಾಥ್) ಬೇಡವೆಂದರೂ ಕೂಡಾ ಓಂ ಪ್ರಕಾಶ್ ರಾಜಭರ್ ಜೊತೆ, ದಾರಾ ಸಿಂಗ್ ಚೌಹಾಣ್ ಜೊತೆ ಮೈತ್ರಿ ಮಾಡಿದಿರಿ. ಎಲ್ಲರಿಗೂ ಟಿಕೆಟ್ ಹಂಚಿಕೆ ಮಾಡಿ ಈಗ ಎಲ್ಲ ಆರೋಪವನ್ನು ಬಾಬಾ (ಆದಿತ್ಯನಾಥ್) ಮೇಲೆ ಹಾಕುತ್ತಿದ್ದೀರಿ. ನಾಚಿಕೆ ಆಗುವುದಿಲ್ಲವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ !
“ಆದಿತ್ಯನಾಥ್ ಕಾರಣದಿಂದಾಗಿ ನಿಮ್ಮನ್ನು ಗೆಲ್ಲಿಸಲಾಗಿದೆ. ಇಲ್ಲವಾದರೆ ಈಗಾಗಲೇ ಗುಜರಾತ್‌ನಿಂದ ಗಡಿಪಾರುಗೊಂಡಿರುವ ನೀವು ನೇರವಾಗಿ ಜೈಲು ಸೇರಬೇಕಾಗುತ್ತಿತ್ತು” ಎಂದು ಹೇಳಿದ್ದಾರೆ.
ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವೇನು?
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭೆ ಕ್ಷೇತ್ರಗಳಲ್ಲಿ 37 ಕ್ಷೇತ್ರಗಳಲ್ಲಿ ಎಸ್‌ಪಿ, 33 ಕ್ಷೇತ್ರಗಳಲ್ಲಿ ಬಿಜೆಪಿ, ಆರು ಕ್ಷೇತ್ರದಲ್ಲಿ ಕಾಂಗ್ರೆಸ್, ಆರ್‌ಎಲ್‌ಡಿ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿ 63 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದು ಈ ಚುನಾವಣೆಯಲ್ಲಿ 30 ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಬಿಜೆಪಿಗೆ ಮುಖಭಂಗವಾಗಿದೆ.
ನೀರಜ್ ಶೇಖರ್ ಸಿಂಗ್ ಬಲಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು ಎಸ್‌ಪಿ ಅಭ್ಯರ್ಥಿ ಸನತನ್ ಪಾಂಡೆ ವಿರುದ್ಧ ಸೋಲು ಕಂಡಿದ್ದಾರೆ. ಸಲೇಮ್‌ಪುರದ ಬಿಜೆಪಿ ಅಭ್ಯರ್ಥಿ ರವೀಂದ್ರ ಕುಷ್ವಹ, ಎಸ್‌ಪಿಯ ರಾಮಶಂಕರ್ ರಾಜಭರ್ ಎದುರು ಸೋಲು ಕಂಡಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಇದು ಮೋದಿಯವರ ಅಹಂಕಾರದ ಸೋಲು: ಮಲ್ಲಿಕಾರ್ಜುನ ಖರ್ಗೆ
ಇನ್ನು ಎಸ್‌ಬಿಎಸ್‌ಪಿಯ ಓಂ ಪ್ರಕಾಶ್ ರಾಜಭರ್ ಜೊತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಹಿಂದೆ ಬಿಎಸ್‌ಪಿಯಲ್ಲಿದ್ದ ದಾರಾ ಸಿಂಗ್ ಚೌಹಾಣ್ 2015ರಲ್ಲಿ ಬಿಜೆಪಿ ಸೇರಿದ್ದು 2017ರಲ್ಲಿ ಯುಪಿ ಸರ್ಕಾರದ ಸಚಿವರಾದರು. ಆದರೆ ತನಗೆ ಟಿಕೆಟ್ ಸಿಗುವುದು ಕಷ್ಟವಿದೆ ಎಂದು ತಿಳಿದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್‌ಪಿ ಸೇರಿದರು. 2023ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿ ಸೇರಿದರು. ನಿರಂತರ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ದಾರಾ ಸಿಂಗ್ ಚೌಹಾಣ್‌ರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಂಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಿಸಿದೆ.