ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ !

Date:

ಟೀ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ಕರೆಯಲಾಗಿದ್ದ ಅರ್ಜಿಯ ಅವಧಿ ಮುಗಿದಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಆದಾಗ್ಯೂ ಭಾರತ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಕೋಚ್‌ ಹುದ್ದೆಯ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ.

ಅರ್ಜಿ ಸಲ್ಲಿಸಿದವರಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಹೆಸರುಗಳು ಇವೆ. ಬಿಸಿಸಿಐ ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಹೆಸರುಗಳನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿದ್ದು, ಹಲವರು ಖ್ಯಾತ ಸೆಲಬ್ರಿಟಿಗಳು ಹಾಗೂ ರಾಜಕೀಯ ನಾಯಕರ ನಕಲಿ ಹೆಸರನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿರುವ ನಕಲಿ ಹೆಸರುಗಳಲ್ಲಿ ಮಾಜಿ ಕ್ರಿಕೆಟರುಗಳಾದ ಸಚಿನ್‌ ತೆಂಡೂಲ್ಕರ್, ಮಹೇಂದ್ರ ಸಿಂಗ್‌ ಧೋನಿ, ಹರ್‌ಭಜನ್‌ ಸಿಂಗ್‌, ವೀರೇಂದ್ರ ಸೆಹ್ವಾಗ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸೇರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ ಕಳೆದ ವರ್ಷ ಕೂಡ ಟೀಂ ಇಂಡಿಯಾ ಮುಖ್ಯ ಕೋಚ್‌ ಹುದ್ದೆಗೆ ಬಿಸಿಸಿಐ ಇದೇ ರೀತಿ ಸುಳ್ಳು ಹೆಸರುಗಳನ್ನು ಬಳಸಿ ಅರ್ಜಿಗಳನ್ನು ಸ್ವೀಕರಿಸಿತ್ತು.ಗೂಗಲ್‌ ಫಾರ್ಮ್‌ಗಳಲ್ಲಿ ಅರ್ಜಿಗಳನ್ನು ಆಹ್ವಾನಿಸುವ ಕಾರಣ ಅರ್ಜಿದಾರರ ಹೆಸರುಗಳನ್ನು  ಸುಲಭವಾಗಿ ಪರಿಶೀಲಸಬಹುದಾಗಿದೆ” ಎಂದು ಬಿಸಿಸಿಐ ಅಧಿಕಾರಿಗಳು ಹೇಳುತ್ತಾರೆ.

ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದು, 2023ರ ಏಕದಿನ ವಿಶ್ವಕಪ್‌ ವೇಳೆಗೆ ರಾಹುಲ್ ದ್ರಾವಿಡ್‌ ಅವರ ಅವಧಿ ಮುಗಿದಿದೆ. ಬಿಸಿಸಿಐ ದ್ರಾವಿಡ್ ಅವರ ಅವಧಿಯನ್ನುಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ ತನಕ ಮುಂದುವರೆಸಿದೆ.

ಬಿಸಿಸಿಐ ಹುದ್ದೆಯ ವಿವರವನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿತ್ತು. ಫುರುಷರ ಹಿರಿಯರ ಮುಖ್ಯ ಕೋಚ್‌ ಹುದ್ದೆಯ ಅವಧಿಯು 3.5 ವರ್ಷಗಳವರೆಗೆ ಇರಲಿದ್ದು, 2024, ಜುಲೈ 1ರಿಂದ ಡಿಸೆಂಬರ್‌ 31 2027ರವರೆಗೂ ಕಾರ್ಯನಿರ್ವಹಿಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಮುಖ್ಯ ಕೋಚ್‌ ಹುದ್ದೆಯು ಭಾರತ ಕ್ರಿಕೆಟ್‌ ತಂಡವನ್ನು ಟಿ20, ಏಕದಿನ ಹಾಗೂ ಟೆಸ್ಟ್‌ ಒಳಗೊಂಡು ಎಲ್ಲ ಮಾದರಿಯಲ್ಲೂ ‘ವಿಶ್ವದ ಅತ್ಯುತ್ತಮ ತಂಡವಾಗಿ’ ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಿಸುವುದು. ಸಹಾಯಕ ಕೋಚ್‌ಗಳು ಹಾಗೂ ಸಿಬ್ಬಂದಿ ತರಬೇತುದಾರರನ್ನು ನಿರ್ವಹಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರಿಕೆಟ್‌ನಲ್ಲಿ ಗಮನಾರ್ಹ ಅನುಭವವನ್ನು ಹೊಂದಿರಬೇಕು. ಕನಿಷ್ಠ 30 ಟೆಸ್ಟ್‌ಗಳು ಅಥವಾ 50 ಏಕದಿನ ಆಡಿರಬೇಕು ಅಥವಾ ಎರಡು ವರ್ಷ ಟೆಸ್ಟ್‌ ಆಡಿರುವ ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಯನ್ನು ನಿರ್ವಹಿಸಿರಬೇಕು.

ಇದರ ಜೊತೆ ಐಪಿಎಲ್ ತಂಡ ಅಥವಾ ಅದಕ್ಕೆ ಸಮನಾರ್ಹ ಮಾದರಿಗಳಲ್ಲಿ ಮುಖ್ಯ ಕೋಚ್‌ ಆಗಿರುವವರ ಬಳಿ ಸಹಾಯಕ ಸದಸ್ಯರಾಗಿ ಮೂರು ವರ್ಷ ಅನುಭವ ಹೊಂದಿರಬೇಕು. ಬಿಸಿಸಿಐ ಮಟ್ಟದ 3 ಪ್ರಮಾಣಪತ್ರ ಅಥವಾ ಸಮಾನಾರ್ಹವಾದುದನ್ನು ಒಳಗೊಂಡಿರಬೇಕು. ಅಭ್ಯರ್ಥಿಗಳು ವಯಸ್ಸಿನಲ್ಲಿ 60 ವರ್ಷಕ್ಕಿಂತ ಕೆಳಗಿರಬೇಕು.

ಪುರುಷರ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್‌ನ ವೇತನದ ಬಗ್ಗೆ ವಿವರಿಸಿರುವ ಬಿಸಿಸಿಐ, ವೇತನವು ನೆಗೋಶಿಯಬಲ್(ಮಾತುಕತೆ ಮೂಲಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು) ಹಾಗೂ ಅನುಭವಕ್ಕೆ ಅನುಗುಣವಾಗಿ ನೀಡಲಾಗುತ್ತದೆ” ಎಂದು ತಿಳಿಸಲಾಗಿದೆ.

ಈಗ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರಿಗೆ ವಾರ್ಷಿಕವಾಗಿ 12 ಕೋಟಿ ರೂ. ವೇತನ ನೀಡಲಾಗುತ್ತಿದೆ. ಹಿಂದೆ ರವಿ ಶಾಸ್ತ್ರಿ ಅವರಿಗೆ 9 ರಿಂದ 10 ಕೋಟಿ ವೇತನ ನೀಡಲಾಗುತ್ತಿತ್ತು. ನೂತನ ಕೋಚ್‌ಗೆ 12 ಕೋಟಿಗೂ ಹೆಚ್ಚು ವೇತನ ನೀಡುವ ಸಾಧ್ಯತೆಯಿದೆ ಎನ್ನುತ್ತಿವೆ ಮೂಲಗಳು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಬಾಂಗ್ಲಾ ವಿರುದ್ಧ ರೋಹಿತ್ ಪಡೆಗೆ ಭರ್ಜರಿ ಜಯ: ಸೆಮಿಫೈನಲ್ ಹಾದಿಯತ್ತ ಟೀಮ್ ಇಂಡಿಯಾ

ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ 2024ರ...

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ ನಿಧನ: ಆತ್ಮಹತ್ಯೆ ಶಂಕೆ?

ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ರಣಜಿ ಆಟಗಾರ ಡೇವಿಡ್ ಜಾನ್ಸನ್​(52)...

ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ ಎಂಬ ಅಪರೂಪದ ಆಟಗಾರ್ತಿಯ ಆದಾಯವೆಷ್ಟು?

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ...