“ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ” ಎಂದು ಹೇಳುವ ಮೂಲಕ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ರೋಲ್ ಆಗಿದ್ದಾರೆ. ಆಗಸ್ಟ್ 23ರಂದು ಹಿಮಾಚಲ ಪ್ರದೇಶದ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುರಾಗ್ ನೀಡಿದ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ, ಟ್ರೋಲ್‌ಗೆ ಗುರಿಯಾಗಿದೆ.
ಸದ್ಯ ಅನುರಾಗ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, “ಮೊದಲ ಬಾಹ್ಯಾಕಾಶ ಯಾತ್ರಿಕ ಯಾರು? ನನ್ನ ಪ್ರಕಾರ ಅದು ಭಗವಾನ್ ಹನುಮಾನ್” ಎಂದು ಹೇಳುವುದು ವಿಡಿಯೋದಲ್ಲಿ ಕಾಣಬಹುದು. “ಈ ಹೇಳಿಕೆಯ ಪೂರ್ಣ ಶ್ರೇಯಸ್ಸು ನಮ್ಮ ಅಜೈವಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಸಲ್ಲಬೇಕು” ಎಂದು ಕೆಲವು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಜೈವಿಕವಲ್ಲದ ಪ್ರಧಾನಿ ಮಣಿಪುರಕ್ಕೆ ಹೋಗಲಿ: ಜೈರಾಮ್ ರಮೇಶ್
ಇನ್ನು ವಾಸ್ತವದಲ್ಲಿ ಮೊದಲ ಬಾಹ್ಯಾಕಾಶ ಯಾತ್ರಿಕರಾದ ಯೂರಿ ಗಗಾರಿನ್ ಎಂದು ಹಲವು ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಮಕ್ಕಳ ತಪ್ಪನ್ನು ತಿದ್ದುವ ಬದಲು ಆ ಕ್ಷುಲ್ಲಕ ನಗುವಿನೊಂದಿಗೆ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ ಎಂದು ನೀವು ಅವರಿಗೆ ಹೇಳಿದ್ದೀರಿ. ನಿಜವಾಗಿ ಯೂರಿ ಗಗಾರಿನ್ ಮೊದಲ ಬಾಹ್ಯಾಕಾಶ ಪ್ರಯಾಣಿಕ. ಮಕ್ಕಳ ಮುಗ್ಧ ಮನಸ್ಸಿನೊಂದಿಗೆ ಆಟವಾಡುವುದನ್ನು ನಿಲ್ಲಿಸಿ” ಎಂದು ತಿಳಿಸಿದ್ದಾರೆ.
Hi Anurag,
— Pracool (@thehighmonk) August 24, 2025
Instead of correcting the children, you told them Hanuman was the first space traveller with that frivolous smile. It was Yuri Gagarin. Stop playing with the innocent minds of children. You & your ideology has already corrupted a couple of generations. https://t.co/PGoT5xYQXa
“ಎಲ್ಲಾ ಮಕ್ಕಳು ತಪ್ಪು ಉತ್ತರಗಳನ್ನು ನೀಡುತ್ತಿದ್ದರು. ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್ ಅಲ್ಲ, ಯೂರಿ ಗಗಾರಿನ್ (ಚಂದ್ರನಿಗೆ ಪ್ರಯಾಣಿಸಿದ ಮೊದಲ ವ್ಯಕ್ತಿ). ನಂಬಿಕೆ ಮತ್ತು ವಿಜ್ಞಾನವು ವಿಭಿನ್ನ ವಿಷಯಗಳು. ಮಕ್ಕಳು ಶಾಲೆಯಲ್ಲಿ ವಿಜ್ಞಾನವನ್ನು ಮತ್ತು ಮನೆಯಲ್ಲಿ ನಂಬಿಕೆಯನ್ನು ಕಲಿಯಲಿ” ಎಂದು ಅಭಿಪ್ರಾಯಿಸಿದ್ದಾರೆ.
Q: How does Anurag Thakur know so much about space travel history?
— SirKazam {blu tik} (@SirKazamJeevi) August 24, 2025
A: pic.twitter.com/Fhw2brq3da
ಇನ್ನೋರ್ವ ನೆಟ್ಟಿಗರು, “ವಿಜ್ಞಾನವು ಪುರಾಣವಲ್ಲ. ತರಗತಿಗಳಲ್ಲಿ ಯುವ ಮನಸ್ಸುಗಳನ್ನು ದಾರಿ ತಪ್ಪಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜ್ಞಾನ, ತರ್ಕ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಅವಮಾನ” ಎಂದಿದ್ದಾರೆ. ಇನ್ನು ಹಲವು ಮೀಮ್ಸ್‌ಗಳು ಹರಿದಾಡುತ್ತಿದೆ.
