- ಹಿಂದಿನ ಅಧ್ಯಕ್ಷರಾಗಿದ್ದ ಶಾಫಿ ಸಅದಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ
- ಸಚಿವ ಝಮೀರ್ ಅಹಮದ್ ಖಾನ್ ಸೇರಿ ಹಲವರಿಂದ ಅಭಿನಂದನೆ ಸಲ್ಲಿಕೆ
ಕರ್ನಾಟಕ ವಕ್ಫ್ ಬೋರ್ಡಿನ ನೂತನ ಅಧ್ಯಕ್ಷರಾಗಿ ಚಿತ್ರದುರ್ಗ ಮೂಲದ ಅನ್ವರ್ ಪಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಕ್ಫ್ ಬೋರ್ಡಿನ ಈ ಹಿಂದೆ ಅಧ್ಯಕ್ಷರಾಗಿದ್ದ ಶಾಫಿ ಸಅದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅನ್ವರ್ ಪಾಷಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ನಾಳೆ ಚುನಾವಣಾಧಿಕಾರಿ ಇವರ ಆಯ್ಕೆಯನ್ನು ಘೋಷಣೆ ಮಾಡಲಿದ್ದಾರೆ.
ಚಿತ್ರದುರ್ಗ ನಿವಾಸಿಯಾಗಿರುವ ಅನ್ವರ್ ಪಾಷ ಅವರು ಮುಸ್ಲಿಂ ಸಮಾಜದ ಪ್ರಗತಿಗಾಗಿ ಹಲವಾರು ಸೇವೆಯನ್ನು ಸಲ್ಲಿಸಿದ್ದಾರೆ.
ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾದ ಅನ್ವರ್ ಪಾಷ ಅವರಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್, ಪೌರಾಡಳಿತ ಸಚಿವ ರಹೀಮ್ ಖಾನ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್, ಪರಿಷತ್ ಸದಸ್ಯ ಜಬ್ಬಾರ್ ಖಾನ್, ಶಾಸಕರಾದ ಎನ್. ಎ. ಹ್ಯಾರಿಸ್, ರಿಝ್ವಾನ್ ಅರ್ಷದ್ ಅಭಿನಂದನೆ ಸಲ್ಲಿಸಿದರು.
ಶಕೀಲ್ ನವಾಝ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.