ಅಪ್ಪಾಜಿ ಕುಟುಂಬದ ಬಣ್ಣ ಬಯಲಾಗಬೇಕು, ಅವರೂ ಜೈಲಿಗೆ ಹೋಗಬೇಕು: ಯತ್ನಾಳ್

Date:

Advertisements

ಯಡಿಯೂರಪ್ಪ ಅವರ ಕಾಲದ ಹಗರಣಗಳು ಹೊರಗೆ ಬರಲಿ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೂ ಅವರ ನಿಜ ಬಣ್ಣ ಬಯಲಾಗಲಿ. ಪೂಜ್ಯ ಅಪ್ಪಾಜಿಯವರು, ಪೂಜ್ಯ ತಂದೆಯವರು ಎಂದು ತಿಳಿದುಕೊಳ್ಳುವವರಿಗೆ ಇವರ ಅಸಲಿ ರೂಪ ಗೊತ್ತಾಗಲಿ ಎಂದು ಸ್ವಪಕ್ಷ ನಾಯಕರ ವಿರುದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, “ಅಪ್ಪಾಜಿ ಕುಟುಂಬದ ಬಣ್ಣ ಬಯಲಾಗಬೇಕು. ಅವರೂ ಜೈಲಿಗೆ ಹೋಗಬೇಕು” ಎಂದರು.

“ಮುಡಾ ಅಕ್ರಮದಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಸತ್ಯವೆಲ್ಲವೂ ರಾಜ್ಯದ ಜನತೆಗೆ ತಿಳಿಯಬೇಕು. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ, ಕುಮಾರಸ್ವಾಮಿ ಅವಧಿಯಲ್ಲಿ ತಪ್ಪಾಗಿದ್ದರೂ ಅದು ಕೂಡಾ ತಪ್ಪೇ” ಎಂದು ಹೇಳಿದರು.

Advertisements

“ಯಡಿಯೂರಪ್ಪ ಅವಧಿಯಲ್ಲಿ ಏನೇನು ಆಗಿದೆ ಎನ್ನುವುದು ಮೊದಲು ಗೊತ್ತಾಗಲಿ. ಪಾದಯಾತ್ರೆ ಮಾಡುವುದರಿಂದ ಆಗುವುದೇನಿದೆ? ಮೊದಲು ನಮಗೆ ನೈತಿಕತೆ ಇದೆಯಾ?” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಕುಟುಕಿದರು.

“ಮೈಸೂರು ಪಾದಯಾತ್ರೆ ಎನ್ನುವುದು ಬರೀ ನಾಟಕ, ಬರೀ ಆಟ. ಇವರು, ಇವರ ಅಪ್ಪ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಬೇಕಲ್ಲ. ಮುಖ್ಯಮಂತ್ರಿಗಳ ಮಗನ ದಾಖಲೆಯೂ ಇದೆ. ಎಲ್ಲರೂ ಜೈಲಿಗೆ ಹೋದರೆ ಹೋಗಲಿ, ನ್ಯಾಯ ಕೊಡಿಸುವುದಕ್ಕೆ ನಾನಿದ್ದೇನೆ” ಎಂದರು.

“ಸದನದಲ್ಲಿ ಮುಡಾ ಅಕ್ರಮ ಬಗ್ಗೆ ಏಕೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸಿದ್ದರಿಲ್ಲ? ಸಿದ್ದರಾಮಯ್ಯ ಪಲಾಯನ ಮಾಡುತ್ತಿದ್ದಾರೆ. ವಾಲ್ಮೀಕಿ ಮತ್ತು ಮುಡಾ ಹಗರಣ ಸಿದ್ದರಾಮಯ್ಯನವರ ಅನುಮತಿ ಇಲ್ಲದೆ ಆಗಲು ಸಾಧ್ಯವಿಲ್ಲ. ಮುಡಾ ಹಗರಣದಲ್ಲಿ ಸಿಎಂ ತಲೆ ಎತ್ತಿ ಓಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X