ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧರಾಗಿರಿ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಸೋಮವಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಎನ್‌ಸಿಪಿ (ಶರದ್‌ಚಂದ್ರ ಪವಾರ್) ಪಕ್ಷದ 25ನೇ ಸಂಸ್ಥಾಪನಾ ದಿನವನ್ನು ಪುಣೆಯ ಕಚೇರಿಯಲ್ಲಿ ಆಚರಿಸಲಾಗಿದ್ದು, ಪವಾರ್ ಅವರು ತಮ್ಮ ಪುತ್ರಿ ಮತ್ತು ಬಾರಾಮತಿ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಇತರ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷದ ಧ್ವಜವನ್ನು ಹಾರಿಸಿದರು.
#WATCH | Maharashtra: NCP-SCP chief Sharad Pawar, MP-elect Supriya Sule and other party leaders attend the NCP-SCP Foundation Day program in Pune. pic.twitter.com/oCzHoD0mEn
— ANI (@ANI) June 10, 2024
“ಕಳೆದ 25 ವರ್ಷಗಳಲ್ಲಿ, ನಾವು ಪಕ್ಷದ ಸಿದ್ಧಾಂತವನ್ನು ಹರಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ ಮತ್ತು ಆ ಕಾರ್ಯವನ್ನು ಮುಂದುವರಿಸಲು ಒಟ್ಟಾಗಿ ಕೆಲಸ ಮಾಡೋಣ. ಇನ್ನು ಮೂರು ತಿಂಗಳಲ್ಲಿ, ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿ ಕೆಲಸ ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ” ಎಂದು ಎನ್‌ಸಿಪಿ ಸಂಸ್ಥಾಪಕರು ಹೇಳಿದರು.
ಇದನ್ನು ಓದಿದ್ದೀರಾ? ಮುಸ್ಲಿಮರಿಗೆ ಶೇ.15 ರಷ್ಟು ಹಣ ಮೀಸಲು ಎಂಬ ಪ್ರಧಾನಿ ಹೇಳಿಕೆ ಮೂರ್ಖತನದ್ದು: ಶರದ್ ಪವಾರ್
ಪವಾರ್ 1999ರಲ್ಲಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ಸ್ಥಾಪಿಸಿದರು. ಕಳೆದ ವರ್ಷ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಇತರ ಕೆಲವು ಶಾಸಕರು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಯಾದ ನಂತರ ಎನ್‌ಸಿಪಿ ವಿಭಜನೆಯಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ, ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವೆಂದು ಘೋಷಿಸಿದೆ. ಬಣಕ್ಕೆ ಎನ್‌ಸಿಪಿ ಚಿಹ್ನೆ ಗಡಿಯಾರವನ್ನು ನೀಡಿದೆ. ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ಗೆ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಮಾನವ ತುರ್ಹಾ (ಸಾಂಪ್ರದಾಯಿಕ ತುತ್ತೂರಿ) ಊದುವ ಚಿಹ್ನೆಯನ್ನು ನೀಡಲಾಗಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಸ್ಪರ್ಧಿಸಿದ 10 ಲೋಕಸಭಾ ಸ್ಥಾನಗಳಲ್ಲಿ 8ರಲ್ಲಿ ಎನ್‌ಸಿಪಿ ಗೆಲುವು ಕಂಡಿದೆ.