ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ನಿನ್ನೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಳಿಕ, ಇಸ್ರೇಲ್‌ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುರುವಾರ ಭೇಟಿ ನೀಡಿದ್ದಾರೆ. ಇದೇ ವೇಳೆ ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ ದಾಳಿಯನ್ನು ಖಂಡಿಸಿದ್ದಾರೆ.
ಇಸ್ರೇಲ್‌ಗೆ ಮಿಲಿಟರಿ ವಿಮಾನದಲ್ಲಿ ಆಗಮಿಸಿದ ಬಳಿಕ ಟ್ವೀಟ್ ಮಾಡಿರುವ ಬ್ರಿಟನ್ ಪ್ರಧಾನಿ, ‘ನಾನು ಇಸ್ರೇಲ್‌ನಲ್ಲಿದ್ದೇನೆ, ಇಸ್ರೇಲ್ ದುಃಖದಲ್ಲಿರುವ ರಾಷ್ಟ್ರ. ನಾನು ನಿಮ್ಮೊಂದಿಗಿದ್ದೇನೆ. ಇಂದು ಮತ್ತು ಸದಾಕಾಲ ಭಯೋತ್ಪಾದನೆ ಎಂಬ ದುಷ್ಟತನದ ವಿರುದ್ಧ ನಿಮ್ಮೊಂದಿಗೆ ನಿಲ್ಲುತ್ತೇನೆ’ ಎಂದು ಹೇಳಿದ್ದಾರೆ.
I am in Israel, a nation in grief.
I grieve with you and stand with you against the evil that is terrorism.
Today, and always.
סוֹלִידָרִיוּת pic.twitter.com/DTcvkkLqdT
— Rishi Sunak (@RishiSunak) October 19, 2023
ಹಮಾಸ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮಧ್ಯಸ್ಥಿಕೆಯ ನಂತರ ಗಾಝಾ ಪಟ್ಟಿಗೆ ಸೀಮಿತ ಮಾನವೀಯ ಸರಬರಾಜುಗಳನ್ನು ತಲುಪಿಸಲು ಈಜಿಪ್ಟ್ ಒಪ್ಪಿಕೊಂಡಿದ್ದು, ಇದರ ಬೆನ್ನಲ್ಲೇ ರಿಷಿ ಸುನಕ್ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
ಜೆರುಸಲೇಮ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಖಾಸಗಿಯಾಗಿ ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದರು. ಪ್ರಧಾನಿ ಭೇಟಿಗೂ ಮುನ್ನ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾದರು.
Prime Minister Benjamin Netanyahu is currently holding a private meeting with British Prime Minister @RishiSunak at the Prime Minister’s Office in Jerusalem. The leaders will also hold an expanded meeting, at the conclusion of which they will issue statements to the media. pic.twitter.com/u8tJYpEoNH
— Prime Minister of Israel (@IsraeliPM) October 19, 2023
ಇಸ್ರೇಲ್ ಭೇಟಿಗೂ ಮುನ್ನ ಹೇಳಿಕೆ ನೀಡಿದ್ದ ರಿಷಿ ಸುನಕ್, ‘ಇದು ಭಯಾನಕ ದಾಳಿ. ಪ್ರತಿಯೊಬ್ಬ ನಾಗರಿಕನ ಸಾವು ದುರಂತವೇ ಆಗಿದೆ. ಹಮಾಸ್‌ನ ಭೀಕರ ಕೃತ್ಯದಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.
ಹಮಾಸ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ಘೋಷಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೆಲ್ ಅವೀವ್ಗೆ ಭೇಟಿ ನೀಡಿದ್ದರು. ಇದರ ಭಾಗವಾಗಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದ್ದರು.