ಹಮಸ್ ದಾಳಿಯಲ್ಲಿ 14 ಮಂದಿ ಅಮೆರಿಕ ಪ್ರಜೆಗಳು ಮೃತ್ಯು: ಅಧ್ಯಕ್ಷ ಜೋ ಬೈಡನ್

Date:

Advertisements
  • ಇಸ್ರೇಲ್ ಮೇಲಿನ ಹಮಸ್ ದಾಳಿಯು ದುಷ್ಟತನದಿಂದ ಕೂಡಿದೆ ಎಂದ ಬೈಡನ್
  • ಪತ್ರಕರ್ತರು ಪ್ರಶ್ನೆ ಕೇಳುವ ಮುನ್ನವೇ ಭಾಷಣ ಪೀಠದಿಂದ ತೆರಳಿದ ಅಮೆರಿಕದ ಅಧ್ಯಕ್ಷ

ಕಳೆದ ಶನಿವಾರ ಇಸ್ರೇಲ್ ಮೇಲೆ ಹಮಸ್ ನಡೆಸಿರುವ ದಾಳಿಯಲ್ಲಿ 14 ಮಂದಿ ಅಮೆರಿಕದ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಶ್ವೇತಭವನದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್ ಮೇಲೆ ಹಮಸ್ ದಾಳಿಯನ್ನು ಮತ್ತೊಮ್ಮೆ ಖಂಡಿಸಿದರು.

ಇಸ್ರೇಲ್ ಮೇಲಿನ ಹಮಸ್ ದಾಳಿಯು ದುಷ್ಟತನದಿಂದ ಕೂಡಿದೆ. ಇಸ್ರೇಲ್ ಅನ್ನು ನಿರ್ನಾಮ ಮಾಡುವುದು ಹಾಗೂ ಯಹೂದಿ ಜನರನ್ನು ಕೊಲ್ಲುವುದೇ ಹಮಸ್‌ನ ಉದ್ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

Advertisements

ಇಸ್ರೇಲ್ ಹಾಗೂ ಹಮಸ್ ಸಂಘರ್ಷದಲ್ಲಿ ಇಲ್ಲಿಯವರೆಗೆ 14 ಜನ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,000 ನಾಗರಿಕರ ಹತ್ಯೆಯಾಗಿದೆ. ಇಸ್ರೇಲ್‌ನಲ್ಲಿರುವ ಜನರು ಹಮಾಸ್ ಸಂಘಟನೆಯ ರಕ್ತಸಿಕ್ತ ಕೈಗಳಿಂದ ಶುದ್ಧ ಕಲಬೆರಕೆಯಿಲ್ಲದ ದುಷ್ಟತನದ ಕರಾಳತೆಯ ಅನುಭವನ್ನು ಪಡೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಇಸ್ರೇಲ್‌ಗೆ ಬೆಂಬಲ ನೀಡಲು ಹಾಗೂ ಪ್ಯಾಲೆಸ್ತೀನ್ ಉಗ್ರರ ಗುಂಪು ಹಮಾಸ್ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಮೆರಿಕ ಜಾಗತಿಕವಾಗಿ ರಾಜತಾಂತ್ರಿಕ ಕ್ರಮವನ್ನು ಅನ್ನು ಪ್ರಾರಂಭಿಸಿದೆ. ಹಮಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿದ್ದು, ನೂರಾರು ಜನರನ್ನು ಕೊಂದಿದೆ. ಇದು ದಶಕದಲ್ಲಿಯೇ ಅತಿ ದೊಡ್ಡ ಹಿನ್ನಡೆಯಾಗಿದೆ. ಇಸ್ರೇಲ್ ಈ ದಾಳಿಗೆ ಪ್ರತಿಯಾಗಿ ಈಗಾಗಲೇ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ ಹಾಗೂ 800ಕ್ಕೂ ಅಧಿಕ ಜನರನ್ನು ಕೊಂದಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿದೆ ಎಂದು ಬೈಡನ್ ತಿಳಿಸಿದರು.

ಇದು ಸಂಪೂರ್ಣ ದುಷ್ಟ ಕೃತ್ಯ. ಇಸ್ರೇಲ್‌ನ ಪಾಲಕರು ತಮ್ಮ ಮಕ್ಕಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಒತ್ತೆಯಾಗಿ ಇಟ್ಟಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಜನರ ಮೇಲೆ ದಾಳಿ ಮಾಡಿ ಹಮಸ್ ಕಗ್ಗೊಲೆ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಕಿಡಿಕಾರಿದರು.

ನಾವು ಈ ಸಂದರ್ಭದಲ್ಲಿ ಇಸ್ರೇಲ್ ಜೊತೆ ನಿಲ್ಲುತ್ತೇವೆ. ಇಸ್ರೇಲ್ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಮತ್ತು ಈ ದಾಳಿಗೆ ಪ್ರತಿಕ್ರಿಯಿಸಲು ಅಗತ್ಯವಿರುವ ಎಲ್ಲ ನೆರವನ್ನು ನಾವು ನೀಡುತ್ತೇವೆ. ಭಯೋತ್ಪಾದನೆಗೆ ಯಾವುದೇ ಸಮರ್ಥನೆ, ಯಾವುದೇ ರೀತಿಯ ಕ್ಷಮೆಯಿಲ್ಲ ಎಂದು ಬೈಡನ್ ತಿಳಿಸಿದರು. ಆದರೆ, ನೆರೆದಿದ್ದ ಪತ್ರಕರ್ತರು ಪ್ರಶ್ನೆ ಕೇಳುವ ಮುನ್ನವೇ ಭಾಷಣ ಪೀಠದಿಂದ ತೆರಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X