“ನಾನು ಇಲ್ಲಿಯವರೆಗೂ ಸುಮಾರು ಕೆಲಸ ಮಾಡಿದ್ದೇನೆ. ಆದರೆ ಏನು ಮಾಡಿದ್ದೇನೆ ನೆನಪಿಲ್ಲ” ಎಂದು ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹೇಮಾ ಮಾಲಿನಿ ಅವರು, “ಮತ್ತೆ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ. ಯಾಕೆಂದರೆ ನಾನು ತುಂಬಾ ಒಳ್ಳೆಯ ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆಗೆ ಖುಷಿಯಿಂದ ಇದ್ದಾರೆ. ತುಂಬಾ ರಸ್ತೆಗಳು ಹಾಗೂ ತುಂಬಾ ಕೆಲಸಗಳನ್ನು ನಾನು ಮಾಡಿದ್ದೇನೆ. ಸದ್ಯ ನನಗೆ ಗುರುತಿಸೋಕೆ ಆಗುತ್ತಿಲ್ಲ. ನಾನು ಇಲ್ಲಿಯವರೆಗೂ ಸುಮಾರು ಕೆಲಸ ಮಾಡಿದ್ದೇನೆ. ಆದರೆ ಏನು ಮಾಡಿದ್ದೇನೆ ಎಂಬ ಬಗ್ಗೆ ಸದ್ಯ ನೆನಪಿಲ್ಲ” ಎಂದು ಹೇಳಿದ್ದಾರೆ.
She worked so much that she doesn’t remember what she did. 😭 pic.twitter.com/iMldwwELu8
— Narundar (@NarundarM) April 21, 2024
ಹೇಮಾಮಾಲಿನಿ ಅವರು ಉತ್ತರಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳೀದಿದ್ದಾರೆ.