- ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಧ್ಯಕ್ಷರ ನೇಮಕ ಕುರಿತು ಬಿಜೆಪಿ ಮಾಹಿತಿ
- ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗಳು
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಚುನಾವಣೆ ನಡೆಯುವ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ಮಂಗಳವಾರ (ಜುಲೈ 4) ನೇಮಕ ಮಾಡಿದೆ.
ತೆಲಂಗಾಣದ ಬಿಜೆಪಿಯ ನೂತನ ಅಧ್ಯಕ್ಷರಾಗಿ ಜಿ.ಕಿಶನ್ ರೆಡ್ಡಿ, ಆಂಧ್ರಪ್ರದೇಶದ ಅಧ್ಯಕ್ಷರಾಗಿ ಡಿ.ಪುರುಂದೇಶ್ವರಿ, ಜಾರ್ಖಂಡ್ ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮುರಾಂಡಿ ಹಾಗೂ ಪಂಜಾಬ್ಗೆ ಸುನಿಲ್ ಜಾಖರ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಪಕ್ಷ ಆದೇಶಿಸಿದೆ.
ಬಿಜೆಪಿ ಈ ಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಸುನಿಲ್ ಜಾಖರ್ ಅವರು ಈ ಹಿಂದೆ ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಸೆಂಥಿಲ್ ಬಾಲಾಜಿ ಪ್ರಕರಣ; ಮದ್ರಾಸ್ ಹೈಕೋರ್ಟ್ ದ್ವಂದ್ವ ತೀರ್ಪು
ತೆಲಂಗಾಣದ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಈಟಾಳ ರಾಜೇಂದರ್ ಅವರನ್ನು ಬಿಜೆಪಿಯು ಇದೇ ವೇಳೆ ನೇಮಿಸಿದೆ.
ಬಂಡಿ ಸಂಜಯ್ ಕುಮಾರ್ ಈ ಮುನ್ನ ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿದ್ದರು. ಸಂಜಯ್ ಕುಮಾರ್ ಅವರು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಪುನರ್ ರಚನೆ ವೇಳೆ ಸಚಿವರಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವರ್ಷದ ಅಂತ್ಯದಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ.