ಲೋಕಸಭೆ ಚುನಾವಣೆ ವೀಕ್ಷಿಸಲು 10 ದೇಶಗಳ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

Date:

Advertisements

ಲೋಕಸಭೆ ಚುನಾವಣೆ ವೀಕ್ಷಿಸಲು 10 ದೇಶಗಳ 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಬಿಜೆಪಿ ಆಹ್ವಾನಿಸಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಲೋಕಸಭೆ ಚುನಾವಣೆಯ ಪ್ರಕ್ರಿಯೆಗಳನ್ನು ವೀಕ್ಷಿಸಲಿದ್ದಾರೆ.

ವಿದೇಶಿ ನಾಯಕರಿಗೆ ಪಕ್ಷದ ಚುನಾವಣಾ ಪ್ರಚಾರದ ಒಳನೋಟಗಳನ್ನು ನೀಡಲಾಗುವುದು ಮತ್ತು ಅವರ ಕಾರ್ಯತಂತ್ರಗಳು, ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿಸಲಾಗುವುದು ಎಂದು ಬಿಜೆಪಿ ಹೇಳಿದೆ. ವಿದೇಶಿ ಪಕ್ಷಗಳ ಈ ನಾಯಕರು ಬುಧವಾರ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನು ಓದಿದ್ದೀರಾ?  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶೋಭಾ ಕರಂದ್ಲಾಜೆ ಈ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ?

Advertisements

ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿ, ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ, ಬಾಂಗ್ಲಾದೇಶದ ಅವಾಮಿ ಲೀಗ್, ಇಸ್ರೇಲ್‌ನ ಲಿಕುಡ್ ಪಕ್ಷ, ಉಗಾಂಡಾದ ನ್ಯಾಷನಲ್ ರೆಸಿಸ್ಟೆಂಟ್ಸ್ ಮೂವ್‌ಮೆಂಟ್, ತಾಂಜಾನಿಯಾದ ಚಮಾ ಚಾ ಮಪಿಂಡುಜಿ ಮತ್ತು ರಷ್ಯಾದ ಯುನೈಟೆಡ್ ರಷ್ಯಾ ಪಾರ್ಟಿಯ ಭಾರತಕ್ಕೆ ಭೇಟಿ ನೀಡುವ ರಾಜಕೀಯ ಪಕ್ಷಗಳಾಗಿದೆ.

ಶ್ರೀಲಂಕಾದಿಂದ ಶ್ರೀಲಂಕಾ ಪೊದುಜನ ಪೆರಮುನಾ ಮತ್ತು ಯುನೈಟೆಡ್ ನ್ಯಾಶನಲ್ ಪಾರ್ಟಿ, ಮಿಲಿಟೆಂಟ್ ಸೋಷಿಯಲಿಸ್ಟ್ ಮೂವ್‌ಮೆಂಟ್‌, ಪಾರ್ಟಿ ಮಾರಿಷಿಯನ್ ಸೋಶಿಯಲ್ ಡೆಮಾಕ್ರಟ್ ಮಾರಿಷಸ್, ನೇಪಾಳಿ ಕಾಂಗ್ರೆಸ್, ಜನಮತ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್), ಕಮ್ಯುನಿಸ್ಟ್ ನೇಪಾಳ್ ಪಾರ್ಟಿ (ಮಾವೋವಾದಿ) ಮತ್ತು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷ ಬಿಜೆಪಿಯ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿರುವ ಇತರ ಪಕ್ಷಗಳಲ್ಲಿ ಸೇರಿವೆ.

ಕಳೆದ ವರ್ಷ 43 ನೇ ಸಂಸ್ಥಾಪನಾ ದಿನದಂದು ನಡ್ಡಾ ಅವರು ಪ್ರಾರಂಭಿಸಿದ ಪಕ್ಷದ ಜಾಗತಿಕ ಪ್ರಚಾರ ಕಾರ್ಯಕ್ರಮವಾದ ‘ಬಿಜೆಪಿಯನ್ನು ತಿಳಿಯಿರಿ’ (Know BJP) ಎಂಬುವುದರ ಭಾಗ ಇದಾಗಿದೆ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌತೈವಾಲೆ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ’ ಎಂದ ಬಿಜೆಪಿ ನಾಯಕ ಅನುರಾಗ್ ಠಾಕೂರ್; ಟ್ರೋಲ್‌ಗೆ ಗುರಿ

"ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ" ಎಂದು ಹೇಳುವ ಮೂಲಕ ಬಿಜೆಪಿ...

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

Download Eedina App Android / iOS

X