ಲೋಕಸಭೆ ಚುನಾವಣೆ ವೀಕ್ಷಿಸಲು 10 ದೇಶಗಳ 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಬಿಜೆಪಿ ಆಹ್ವಾನಿಸಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಲೋಕಸಭೆ ಚುನಾವಣೆಯ ಪ್ರಕ್ರಿಯೆಗಳನ್ನು ವೀಕ್ಷಿಸಲಿದ್ದಾರೆ.
ವಿದೇಶಿ ನಾಯಕರಿಗೆ ಪಕ್ಷದ ಚುನಾವಣಾ ಪ್ರಚಾರದ ಒಳನೋಟಗಳನ್ನು ನೀಡಲಾಗುವುದು ಮತ್ತು ಅವರ ಕಾರ್ಯತಂತ್ರಗಳು, ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿಸಲಾಗುವುದು ಎಂದು ಬಿಜೆಪಿ ಹೇಳಿದೆ. ವಿದೇಶಿ ಪಕ್ಷಗಳ ಈ ನಾಯಕರು ಬುಧವಾರ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶೋಭಾ ಕರಂದ್ಲಾಜೆ ಈ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ?
ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿ, ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ, ಬಾಂಗ್ಲಾದೇಶದ ಅವಾಮಿ ಲೀಗ್, ಇಸ್ರೇಲ್‌ನ ಲಿಕುಡ್ ಪಕ್ಷ, ಉಗಾಂಡಾದ ನ್ಯಾಷನಲ್ ರೆಸಿಸ್ಟೆಂಟ್ಸ್ ಮೂವ್‌ಮೆಂಟ್, ತಾಂಜಾನಿಯಾದ ಚಮಾ ಚಾ ಮಪಿಂಡುಜಿ ಮತ್ತು ರಷ್ಯಾದ ಯುನೈಟೆಡ್ ರಷ್ಯಾ ಪಾರ್ಟಿಯ ಭಾರತಕ್ಕೆ ಭೇಟಿ ನೀಡುವ ರಾಜಕೀಯ ಪಕ್ಷಗಳಾಗಿದೆ.
ಶ್ರೀಲಂಕಾದಿಂದ ಶ್ರೀಲಂಕಾ ಪೊದುಜನ ಪೆರಮುನಾ ಮತ್ತು ಯುನೈಟೆಡ್ ನ್ಯಾಶನಲ್ ಪಾರ್ಟಿ, ಮಿಲಿಟೆಂಟ್ ಸೋಷಿಯಲಿಸ್ಟ್ ಮೂವ್‌ಮೆಂಟ್, ಪಾರ್ಟಿ ಮಾರಿಷಿಯನ್ ಸೋಶಿಯಲ್ ಡೆಮಾಕ್ರಟ್ ಮಾರಿಷಸ್, ನೇಪಾಳಿ ಕಾಂಗ್ರೆಸ್, ಜನಮತ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್), ಕಮ್ಯುನಿಸ್ಟ್ ನೇಪಾಳ್ ಪಾರ್ಟಿ (ಮಾವೋವಾದಿ) ಮತ್ತು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷ ಬಿಜೆಪಿಯ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿರುವ ಇತರ ಪಕ್ಷಗಳಲ್ಲಿ ಸೇರಿವೆ.
ಕಳೆದ ವರ್ಷ 43 ನೇ ಸಂಸ್ಥಾಪನಾ ದಿನದಂದು ನಡ್ಡಾ ಅವರು ಪ್ರಾರಂಭಿಸಿದ ಪಕ್ಷದ ಜಾಗತಿಕ ಪ್ರಚಾರ ಕಾರ್ಯಕ್ರಮವಾದ ‘ಬಿಜೆಪಿಯನ್ನು ತಿಳಿಯಿರಿ’ (Know BJP) ಎಂಬುವುದರ ಭಾಗ ಇದಾಗಿದೆ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌತೈವಾಲೆ ಹೇಳಿದ್ದಾರೆ.