ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಗುಜರಾತ್ ಬಿಜೆಪಿಯಲ್ಲಿ ತಿಕ್ಕಾಟ ಮುಂದುವರಿದಿದೆ. ಗುಜರಾತ್‌ನಲ್ಲಿ ಕ್ಷತ್ರಿಯ ಸಮುದಾಯದ ಪ್ರತಿಭಟನೆಗಳ ನಡುವೆ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯ ಶಮನವಾಗದೆ, ಪಕ್ಷದೊಳಗಿನ ಆಂತರಿಕ ಕಲಹ ಮುಂದುವರಿದಿದೆ.
ಪ್ರಸ್ತುತ ಬಿಜೆಪಿ ಗುಜರಾತ್ ಘಟಕದ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅವರು ಕ್ಷತ್ರಿಯ ಸಮುದಾಯದ ಕುರಿತು ರಾಜಕೋಟ್‌ನ ಬಿಜೆಪಿ ಅಭ್ಯರ್ಥಿ ಪರ್ಷೋತ್ತಮ್ ರೂಪಾಲಾ ಅವರ ಹೇಳಿಕೆಯಿಂದ ಆಕ್ರೋಶಗೊಂಡಿರುವ ಸಮುದಾಯವನ್ನು ಪತ್ರಿಕಾಗೋಷ್ಠಿ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನೊಂದೆಡೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಂಸದ ರಾಜೇಂದ್ರ ಸಿಂಗ್ ರಾಣಾ ಮಾತ್ರ “ರೂಪಾಲಾ ಅವರ ಹೇಳಿಕೆ ಕ್ಷತ್ರಿಯರ ಭಾವನೆಗೆ ನೋವುಂಟು ಮಾಡಿದೆ, ಆದ್ದರಿಂದ ಪ್ರತಿಭಟನೆ ಮುಂದುವರಿಯುತ್ತದೆ. ಈ ಹೋರಾಟದ ಪರಿಣಾಮವನ್ನು ಎಲ್ಲರೂ ಒಪ್ಪಿಕೊಳ್ಳಲಿದ್ದಾರೆ” ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಯನ್ನು ಬಿಜೆಪಿ ನಾಯಕರೇ ಸೋಲಿಸುವ ಸುಳಿವು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ಬಿಜೆಪಿಯಲ್ಲಿ ಭಾರೀ ಕಲಹ; ಘರ್ಷಣೆಯಿಂದ ಆಸ್ಪತ್ರೆ ಸೇರಿದ ಕಾರ್ಯಕರ್ತರು
ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅವರು ಪರ್ಷೋತ್ತಮ್ ರೂಪಾಲಾ ಅವರನ್ನು ಕ್ಷಮಿಸಬೇಕೆಂದು ರಜಪೂತ ಸಮುದಾಯದವರನ್ನು ಒತ್ತಾಯಿಸಿದ್ದಾರೆ. “ರೂಪಾಲಾ ತನ್ನ ಹೇಳಿಕೆಗೆ ಮೂರು ಬಾರಿ ಕ್ಷಮೆಯಾಚಿಸಿದರೂ ರಜಪೂತರು ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಸಿಎಂ ಹಾಗೂ ಪಕ್ಷದ ರಜಪೂತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಸಮುದಾಯವು ಔದಾರ್ಯ ತೋರಿ ಅವರನ್ನು ಕ್ಷಮಿಸಬೇಕು” ಎಂದು ಸಿ ಆರ್ ಪಾಟೀಲ್ ಮನವಿ ಮಾಡಿದ್ದಾರೆ.
ಇದಲ್ಲದೆ, ರಜಪೂತ ಅಥವಾ ಕ್ಷತ್ರಿಯ ಸಮುದಾಯದ ಸದಸ್ಯರನ್ನು ಸಮಾಧಾನಪಡಿಸಲೆಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಪಾಟೀಲ್ ಅವರು ಪಕ್ಷದ ರಜಪೂತ ನಾಯಕರೊಂದಿಗೆ ಸಭೆ ನಡೆಸಿದರು.
ಇದನ್ನು ಓದಿದ್ದೀರಾ? ಶೇ.62 ರಷ್ಟು ಹೊಸ ಸೈನಿಕ ಶಾಲೆಗಳನ್ನು ಸಂಘ ಪರಿವಾರ, ಬಿಜೆಪಿ ನಾಯಕರಿಗೆ ಹಸ್ತಾಂತರಿಸಿದ ಕೇಂದ್ರ!
ಇದಲ್ಲದೆ, ರಜಪೂತ ಅಥವಾ ಕ್ಷತ್ರಿಯ ಸಮುದಾಯದ ಸದಸ್ಯರನ್ನು ಸಮಾಧಾನಪಡಿಸುವ ಉದ್ದೇಶದಿಂದ ನಿರ್ಣಯವನ್ನು ಪಡೆಯಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಪಾಟೀಲ್ ಅವರು ಪಕ್ಷದ ರಜಪೂತ ನಾಯಕರೊಂದಿಗೆ ಸಭೆ ನಡೆಸಿದರು.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಕೋಟ್‌ನ ಅಭ್ಯರ್ಥಿ ಪರ್ಷೋತ್ತಮ್ ರೂಪಾಲಾ, “ಹಲವಾರು ರಜಪೂತ ಆಡಳಿತಗಾರರು ಬ್ರಿಟಿಷರಿಗೆ ಸಹಕಾರ ನೀಡಿದ್ದರು” ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ನಂತರ, ಕರ್ಣಿ ಸೇನಾದ ಮುಖ್ಯಸ್ಥ ರಾಜ್ ಶೆಖಾವತ್ ಶನಿವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.