ತೆಲುಗು ಸಿನಿಮಾಗಳನ್ನು ‘ರಾಜಕೀಯ ಅಸ್ತ್ರ’ವಾಗಿ ಬಳಸುತ್ತಿರುವ ಬಿಜೆಪಿ; ಟಾಲಿವುಡ್‌ಗೆ ಹಿಂದುತ್ವದ ಲೇಪನ

Date:

Advertisements
ಪ್ರಭಾಸ್, ರಾಮ್‌ಚರಣ್ ತೇಜಾ, ಅಲ್ಲು ಅರ್ಜುನ್, ಜೂ ಎನ್‌ಟಿಆರ್‌ರಂಥ ಪ್ಯಾನ್ ಇಂಡಿಯನ್ ಸ್ಟಾರ್ಸ್ ಚಿತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಿಂದುತ್ವದ ಕಂಟೆಂಟ್ ತುರುಕುವುದು ಸಂಘ ಪರಿವಾರದ ಹಿನ್ನೆಲೆಯ ನಿರ್ಮಾಪಕ, ನಿರ್ದೇಶಕ, ಕಥೆಗಾರರ ಅಜೆಂಡಾ. ಇದಕ್ಕೆ ಅತ್ಯುತ್ತಮ ನಿದರ್ಶನ ಆರ್‌ಆರ್‌ಆರ್‌, ಆದಿಪುರುಷ್, ಕಾರ್ತಿಕೇಯ 2. 

ಬಿಜೆಪಿ ಮತದಾರರನ್ನು ಸುಲಭವಾಗಿ ತಲುಪುವ ದಾರಿಗಳನ್ನು ಸದಾ ಹುಡುಕುತ್ತಿರುತ್ತದೆ. ಹಿಂದೂ ನಾವೆಲ್ಲ ಒಂದು ಎಂದು ಹೇಳುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ದೇವಸ್ಥಾನ, ಪೂಜಾ ಮಂದಿರ ಇತ್ಯಾದಿಗಳ ಬಗ್ಗೆ ವಿವಾದ ಹುಟ್ಟಿಸುವುದು.. ಬಿಜೆಪಿಯ ಕೆಲವು ಜನಪ್ರಿಯ ತಂತ್ರಗಳು. ಇತ್ತೀಚೆಗೆ ಇವುಗಳ ಜೊತೆಗೆ ಹೊಸದೊಂದು ಸುಲಭದ ಹಾಗೂ ಅತ್ಯಂತ ಜನಪ್ರಿಯವಾದ ದಾರಿಯೊಂದನ್ನು ಬಿಜೆಪಿ ಶೋಧಿಸಿದೆ, ಅದುವೇ ತೆಲುಗು ಚಿತ್ರರಂಗ.

ಟಾಲಿವುಡ್ ಎಂದು ಕರೆಯಲ್ಪಡುವ ತೆಲುಗು ಚಿತ್ರರಂಗ ಭಾರತದಲ್ಲಿ ಹಿಂದಿಗೆ ಸಮನಾದ ಮಾರುಕಟ್ಟೆಯುಳ್ಳ ಇಂಡಸ್ಟ್ರಿ. ಜನರನ್ನು ರಂಜಿಸುವ ಮಸಾಲಾ ಚಿತ್ರಗಳನ್ನು ತೆಗೆಯುವುದರಲ್ಲಿ ತೆಲುಗರು ನಿಸ್ಸೀಮರು. ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಆಚೆಗೆ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ತೆಲುಗು ಚಿತ್ರಗಳನ್ನು ನೋಡುವವರ ಸಂಖ್ಯೆ ದೊಡ್ಡದಿದೆ. ಕಳೆದ ಏಳೆಂಟು ವರ್ಷಗಳಿಂದೀಚೆಗೆ ತೆಲುಗು ಚಿತ್ರಗಳು ಹಿಂದಿ, ಭೋಜ್‌ಪುರಿ ಮತ್ತಿತರ ಭಾಷೆಗಳಿಗೆ ಡಬ್ ಆಗತೊಡಗಿದವು. ಅಲ್ಲಿಂದ ತೆಲುಗು ಚಿತ್ರಗಳು ಹಿಂದಿ ಚಿತ್ರಗಳನ್ನೂ ಮೀರಿಸುವಷ್ಟರ ಮಟ್ಟಿಗೆ ಜನಪ್ರಿಯತೆ, ಹಣ ಗಳಿಸತೊಡಗಿದವು. ತೆಲುಗು ಚಿತ್ರರಂಗದ ಸ್ಟಾರ್‌ಗಳಾದ ಅಲ್ಲು ಅರ್ಜುನ್, ರಾಮ್‌ಚರಣ್ ತೇಜಾ, ಜೂ.ಎನ್‌ಟಿಆರ್, ಮಹೇಶ್‌ ಬಾಬು ಮುಂತಾದವರು ಹಿಂದಿ ಭಾಷಿಕ ರಾಜ್ಯಗಳ ಹಾಟ್ ಫೇವರೆಟ್ ನಟರಾಗಿಹೋದರು.

ತೆಲುಗು ನಟರಿಗೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಇವೇ ಮುಂತಾದ ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳು ಸೃಷ್ಟಿಯಾದರು. ಎಷ್ಟರ ಮಟ್ಟಿಗೆ ಎಂದರೆ, ನಿರ್ದೇಶಕರು, ನಿರ್ಮಾಪಕರು ಹಿಂದಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾಗಳಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳನ್ನು ಅಳವಡಿಸತೊಡಗಿದರು. ಇದನ್ನು ಬಹಳ ಬೇಗ ಗ್ರಹಿಸಿದ ಬಿಜೆಪಿ ತೆಲುಗು ಚಿತ್ರರಂಗದ ಸ್ಟಾರ್‌ಗಳನ್ನು, ದೊಡ್ಡ ಹೆಸರುಳ್ಳ ತಂತ್ರಜ್ಞರನ್ನು ತನ್ನ ಬುಟ್ಟಿಗೆ ಬೀಳಿಸಿಕೊಂಡು ಅವರ ಮೂಲಕ ಹಿಂದೂ ಸಿದ್ಧಾಂತ ಹರಡುವುದಕ್ಕೆ ಕೈ ಹಾಕಿದೆ.

Advertisements

ಇತ್ತೀಚೆಗೆ ಈ ವಿಷಯ ಹೆಚ್ಚು ಸುದ್ದಿಯಾಗಲು ಕಾರಣವಾಗಿದ್ದು ಪ್ರಭಾಸ್ ನಟನೆಯ ‘ಆದಿಪುರುಷ್‘ ಚಿತ್ರ ಮತ್ತು ಅದರ ಬಗ್ಗೆ ತೆಲಂಗಾಣದ ಮುಖ್ಯಮಂತ್ರಿ ಮಗ ಹಾಗೂ ಅಲ್ಲಿನ ಐಟಿ ಸಚಿವ ಕೆ ಟಿ ರಾಮರಾವ್ (ಕೆಟಿಆರ್‌) ಮಾಡಿದ ವ್ಯಾಖ್ಯಾನ. “ಬಿಜೆಪಿ ಸಿನಿಮಾವನ್ನು ಪೊಲಿಟಿಕಲ್ ಮೀಡಿಯಂ ಆಗಿ ಬಳಸುತ್ತಿದೆ. ಚುನಾವಣೆ ಸಮಯದಲ್ಲಿ ಉರಿ ಎನ್ನುವ ಸಿನಿಮಾ ಬರುತ್ತದೆ, ಕೆಲವು ದಿನಗಳ ನಂತರ ಕಾಶ್ಮೀರ್ ಫೈಲ್ಸ್‌ ಬರುತ್ತೆ. ನಂತರ ಆದಿಪುರುಷ್ ಬರುತ್ತೆ. ಬಿಜೆಪಿಯು ಜನರನ್ನು ಸೆಳೆಯುವುದಕ್ಕೆ ಸಿನಿಮಾವನ್ನು ಕೂಡ ಒಂದು ಸಾಧನವಾಗಿ ಬಳಸುತ್ತಿದೆ. ಇದು ಅವರ ತಂತ್ರಗಾರಿಕೆಯ ಒಂದು ಭಾಗ. ಇಂಥ 15 ಪ್ರಾಪಗಾಂಡಾ ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ. ಬಿಜೆಪಿ ಈ ದೇಶದ ನಿಜವಾದ ಸಮಸ್ಯೆಗಳ ಕುರಿತು ಮಾತನ್ನೇ ಆಡುತ್ತಿಲ್ಲ.”

ಇದು ಕೆಟಿಆರ್ ಹೇಳಿರುವ ಮಾತು. ಈ ಮಾತು ಎಷ್ಟು ಸತ್ಯ ಎನ್ನುವುದಕ್ಕೆ ತೆಲುಗಿನಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಅದರಲ್ಲೂ ಪ್ಯಾನ್ ಇಂಡಿಯನ್ ಸ್ಟಾರ್ಸ್ ಎಂದು ಹೆಸರು ಮಾಡಿರುವ ನಟರ ಮೇಲೆ ಬಿಜೆಪಿ ವಿಶೇಷ ಕಣ್ಣು ನೆಟ್ಟಿದೆ. 2017ರಲ್ಲಿ ಬಂದ ಜವಾನ್, 2022ರಲ್ಲಿ ಬಂದ ಆರ್‌ಆರ್‌ಆರ್‌, 2022ರಲ್ಲಿ ಬಂದ ಮೇಜರ್, ಆಚಾರ್ಯ ಮುಂತಾದ ಸಿನಿಮಾಗಳಲ್ಲಿ ಹಿಂದುತ್ವದ ಅಜೆಂಡಾ ಇದೆ. ಆದಿಪುರುಷ್ ಚಿತ್ರವನ್ನು ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಯ ದಿನವೇ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಅದು ಸಾಧ್ಯವಾಗದಿದ್ದಾಗ, ಅಯೋಧ್ಯೆಯಲ್ಲಿ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಭಾಸ್, ರಾಮ್‌ಚರಣ್ ತೇಜಾ, ಅಲ್ಲು ಅರ್ಜುನ್, ಜೂ. ಎನ್‌ಟಿಆರ್‌ರಂಥ ಪ್ಯಾನ್ ಇಂಡಿಯನ್ ಸ್ಟಾರ್ಸ್ ಚಿತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಿಂದುತ್ವದ ಕಂಟೆಂಟ್ ತುರುಕುವುದು ಅವರ ಅಜೆಂಡಾ. ಇದಕ್ಕೆ ಅತ್ಯುತ್ತಮ ನಿದರ್ಶನ ಆರ್‌ಆರ್‌ಆರ್‌ ಸಿನಿಮಾ. ‘ಬಾಹುಬಲಿ’ ಚಿತ್ರದ ನಂತರ ರಾಜಮೌಳಿ ನಿರ್ದೇಶಿಸಿದ ‘ಆರ್‌ಆರ್‌ಆರ್‌’ ಚಿತ್ರವು ವಾಸ್ತವವಾಗಿ ಇಬ್ಬರು ಕ್ರಾಂತಿಕಾರಿಗಳನ್ನು ಕುರಿತದ್ದು. ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮರಂ ಭೀಮ್ ಅವರನ್ನು ಇಂದಿಗೂ ಆಂಧ್ರದ ಬಹುತೇಕ ಎಡಪಂಥೀಯರು, ಹೋರಾಟಗಾರರು ತಮ್ಮ ಐಕಾನ್‌ಗಳೆಂದು ಆರಾಧಿಸುತ್ತಾರೆ. ಇಂಥವರ ಬದುಕನ್ನು ಆಧರಿಸಿದ ಚಿತ್ರಕ್ಕೂ ಕೇಸರಿ ಲೇಪ ಬಳಿಯುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಆರ್‌ಆರ್‌ಆರ್‌

ಅರ್‌ಆರ್‌ಆರ್‌ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ಜೂ. ಎನ್‌ಟಿಆರ್ ಅವರನ್ನು ರಾಮ ಮತ್ತು ಹನುಮಂತನೊಂದಿಗೆ ಸಮೀಕರಿಸಲಾಗಿದೆ. ಚಿತ್ರದ ಕೊನೆಯಲ್ಲಿ ‘ಎತ್ತರ ಜೆಂಡಾ’ ಎನ್ನುವ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಒಂದು ಹಾಡು ಬರುತ್ತದೆ, ಅದರಲ್ಲಿ ಗಾಂಧಿ ಮತ್ತು ನೆಹರೂ ಅವರು ಸ್ಥಾನ ಪಡೆದಿಲ್ಲ. ಆ ಬಗ್ಗೆ ಒಂದೆಡೆ ಹೇಳಿಕೆ ನೀಡಿರುವ ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್, ಗಾಂಧಿ, ನೆಹರೂ ಅವರನ್ನು ಬೇಕೆಂದೇ ಹಾಡಿನಲ್ಲಿ ತೋರಿಸಿಲ್ಲ ಎಂದಿದ್ದಾರೆ. ಇನ್ನೂ ಮುಂದುವರೆದು, “ನೆಹರೂ ಬದಲು ಪಟೇಲ್ ಪ್ರಧಾನಿ ಆಗಿದ್ದಿದ್ದರೆ ಕಾಶ್ಮೀರದ ಸಮಸ್ಯೆಯೇ ಇರುತ್ತಿರಲಿಲ್ಲ” ಎಂದಿದ್ದಾರೆ.

ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳ ನಟರಷ್ಟೇ ಅಲ್ಲ, ರಾಮಾಯಣ, ಮಹಾಭಾರತದ ಪಾತ್ರಗಳನ್ನು, ಕಥೆಗಳನ್ನು ಆಧರಿಸಿದ ಹಲವು ಚಿತ್ರಗಳು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿವೆ. ಅಂಥ ಚಿತ್ರಗಳು ರಾಮಾಯಣ, ಮಹಾಭಾರತವನ್ನು ಒಂದು ಕಥೆ ಎಂದು ತೋರಿಸದೇ, ಚರಿತ್ರೆ ಎಂಬಂತೆ ತೋರಿಸಿ, ಜನರನ್ನು ಮರಳುಗೊಳಿಸಲಾಗುತ್ತಿದೆ. ಅಂಥ ಚಿತ್ರಗಳಿಗೆ ಉತ್ತಮ ನಿದರ್ಶನ ಕಾರ್ತಿಕೇಯ 2. ನಿಖಿಲ್ ಸಿದ್ಧಾರ್ಥ್ ಎನ್ನುವ ಯುವನಟ ಅದರ ಹೀರೋ. ಆತನೊಬ್ಬ ಸಣ್ಣ ಹೀರೋ. ಆದರೆ, ಕಾರ್ತಿಕೇಯ ಸಿನಿಮಾ ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಹವಾ ಎಬ್ಬಿಸಿದೆಯೆಂದರೆ, ಆತ ಕೂಡ ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ಬದಲಾಗಿದ್ದಾನೆ. ಕೃಷ್ಣನ ಜನ್ಮವೃತ್ತಾಂತದ ಬಗ್ಗೆ ಹಾಗೂ ಈಗಲೂ ಆತನ ಬದುಕಿನ ಕುರುಹುಗಳು, ಸಂಕೇತಗಳು ಇವೆ ಎನ್ನುವ ಬಗ್ಗೆ ತೆಗೆದ ಚಿತ್ರ ಅದು. ವಿಶೇಷ ಅಂದರೆ, ಪುರಾಣವನ್ನು ವಿಜ್ಞಾನ ಎನ್ನುವ ರೀತಿಯಲ್ಲಿಯೇ ಈ ಸಿನಿಮಾ ತೋರಿಸುತ್ತದೆ, ಪುರಾಣ, ಕಟ್ಟು ಕಥೆಗಳನ್ನು ನಂಬದ ಹೀರೋ ಕೊನೆಗೆ ಕೃಷ್ಣನನ್ನು, ಆತನ ಅಸ್ತಿತ್ವವನ್ನು, ಪವಾಡಗಳನ್ನು ನಂಬುತ್ತಾನೆ. ಈ ಸಿನಿಮಾ ಹಿಂದಿಗೆ ಡಬ್ ಆದ ನಂತರ ಗಳಿಕೆಯಲ್ಲಿ ದಾಖಲೆಗಳನ್ನೇ ನಿರ್ಮಿಸಿತು. ಕೇವಲ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 120 ಕೋಟಿ ರೂಪಾಯಿ ಗಳಿಸಿತು.

ಈ ಸುದ್ದಿ ಓದಿದ್ದೀರಾ: ರಾಜಕಾರಣದ ಒಳಸಂಚನ್ನು ಅರ್ಥ ಮಾಡಿಕೊಳ್ಳದ ಮಣಿಪುರದ ಮಹಿಳೆಯರು ಆತ್ಮಹತ್ಯಾಕಾರಿ ಹಾದಿ ತುಳಿದರೆ?

ಆರ್‌ಆರ್‌ಆರ್ ಚಿತ್ರದ ನಂತರ ವಿಜಯೇಂದ್ರ ಪ್ರಸಾದ್ ಹಾಗೂ ಹೀರೋ ಕಾರ್ತಿಕೇಯ ಸಂಘ ಪರಿವಾರದವರ ನೆಚ್ಚಿನ ವ್ಯಕ್ತಿಗಳಾದರು. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಮೂಲಕ ಬಿಜೆಪಿ ಋಣಸಂದಾಯ ಮಾಡಿತು. ತನ್ನ ಮೊದಲ ಚಿತ್ರ ‘ಹ್ಯಾಪಿ ಡೇಸ್’ ಸೂಪರ್ ಹಿಟ್ ಆಗಿದ್ದರೂ ಅವಕಾಶಗಳೇ ಇಲ್ಲದೆ ಹಲವು ವರ್ಷ ಸುಮ್ಮನೆ ಕೂತಿದ್ದ ನಿಖಿಲ್ ಸಿದ್ಧಾರ್ಥ್ ಈಗ ಬ್ಯುಸಿ ನಟ.

ಕಾರ್ತಿಕೇಯ

ವಿಜಯೇಂದ್ರ ಪ್ರಸಾದ್ ಹಾಗೂ ನಿಖಿಲ್ ಸಿದ್ಧಾರ್ಥ್ ಮುಂದಿನ ಚಿತ್ರಗಳ ಬಗ್ಗೆ ತಿಳಿದರೆ ನಿಜಕ್ಕೂ ಗಾಬರಿಯಾಗುತ್ತದೆ, ವಿಜಯೇಂದ್ರ ಪ್ರಸಾದ್ ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಹೋಗಿಬಂದು ಒಂದು ಸಿನಿಮಾಗೆ ಕಥೆ ಬರೆದಿದ್ದಾರೆ, ಹಾಗೆಯೇ ನಿಖಿಲ್ ಸಿದ್ಧಾರ್ಥ್, ಬಲಪಂಥೀಯರ ನೆಚ್ಚಿನ ನಾಯಕನ ಬದುಕನ್ನು ಆಧರಿಸಿ ಚಿತ್ರವೊಂದನ್ನು ಮಾಡುತ್ತಿದ್ದಾನೆ. ಇವರ ಜೊತೆಗೆ ರಾಮ್‌ಚರಣ್ ತೇಜಾ ಕೂಡ ಕೈ ಜೋಡಿಸಿದ್ದಾರೆ. ಇವರಿಗೆ ಹೆಗಲೆಣೆಯಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತೆಲಂಗಾಣ ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ಇದ್ದಾರೆ. ಇವರೆಲ್ಲ ಸೇರಿ ಒಂದು ಕಾಲದಲ್ಲಿ ಎಡಪಂಥೀಯ ಚಿತ್ರಗಳಿಗೆ ಖ್ಯಾತಿ ಪಡೆದಿದ್ದ ತೆಲುಗು ಚಿತ್ರರಂಗವನ್ನು ಬಲಪಂಥೀಯ ಚಿತ್ರಗಳ ಅಡ್ಡೆಯನ್ನಾಗಿ ಮಾಡಲು ಹೊರಟಿದ್ದಾರೆ.

ಅವರು ಯಾವ ಯಾವ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ, ಅವುಗಳ ಕಥಾವಸ್ತು ಏನು ಎನ್ನುವುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X