ಯುಪಿಎ ಅಡಿಯಲ್ಲಿ 2ಜಿ ಸ್ಪೆಕ್ಟ್ರಂನ ಆಡಳಿತಾತ್ಮಕ ಹಂಚಿಕೆಯನ್ನು “ಹಗರಣ” ಎಂದು ಕರೆದ ಬಿಜೆಪಿಯು ಈಗ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಹರಾಜು ಇಲ್ಲದೆ ಸ್ಪೆಕ್ಟ್ರಂ ನೀಡಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಕೇಳುತ್ತಿದ್ದು ಬಿಜೆಪಿಯ ಬೂಟಾಟಿಕೆಗೆ ಮಿತಿಯಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ ತನ್ನ ತೀರ್ಪನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದಾದ ಬಳಿಕ ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
The hypocrisy of the Modi Sarkar and Bhrasht Janata Party knows no bounds. During Dr. Manmohan Singh’s tenure, they cried to all who would listen that the administrative allocation of 2G spectrum was a “scam”.
Now, they are arguing the opposite – they have gone to the Supreme… pic.twitter.com/7fYPeIJ9g0
— Jairam Ramesh (@Jairam_Ramesh) April 27, 2024
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮೋದಿ ಸರ್ಕಾರ ಮತ್ತು ಭ್ರಷ್ಟ ಜನತಾ ಪಾರ್ಟಿಯ ಬೂಟಾಟಿಕೆಗೆ ಯಾವುದೇ ಮಿತಿಯಿಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ, 2ಜಿ ಸ್ಪೆಕ್ಟ್ರಂ ಆಡಳಿತಾತ್ಮಕ ಹಂಚಿಕೆಯನ್ನು ‘ಹಗರಣ’ ಎಂದು ಬಿಜೆಪಿ ಹೇಳಿತ್ತು. ಈಗ ಅದಕ್ಕೆ ತದ್ವಿರುದ್ಧವಾಗಿ ವಾದ ಮಂಡಿಸುತ್ತಿದ್ದಾರೆ. ಹರಾಜು ಮಾಡದೆ ತಮಗೆ ಬೇಕಾದವರಿಗೆ ಸ್ಪೆಕ್ಟ್ರಂ ನೀಡಲು ಅನುಮತಿ ನೀಡಲು ಕೇಂದ್ರವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು
“ಖಂಡಿತವಾಗಿಯೂ, ಈ ‘ಮೋದಾನಿ ಆಡಳಿತ’ವು ಈಗಾಗಲೇ ಸಾರ್ವಜನಿಕ ಸಂಪನ್ಮೂಲಗಳನ್ನು ಪ್ರಧಾನ ಮಂತ್ರಿಯ ಕ್ರೂರಿ ಬಂಡವಾಳಶಾಹಿ ಸ್ನೇಹಿತರಿಗೆ ಹಸ್ತಾಂತರಿಸುತ್ತಿದೆ. ವಿಮಾನ ನಿಲ್ದಾಣಗಳನ್ನು ಒಂದು ಕಂಪನಿಗೆ ಹಸ್ತಾಂತರಿಸಲಾಗಿದೆ. ಕಲ್ಲಿದ್ದಲು ಗಣಿಗಳನ್ನು ಮೋಸದ ಹರಾಜಿನಲ್ಲಿ ನೀಡಲಾಗಿದೆ. ಉಪಗ್ರಹ ಸ್ಪೆಕ್ಟ್ರಮ್ ಅನ್ನು ಸಹ ಹಸ್ತಾಂತರಿಸಲಾಗಿದೆ” ಎಂದು ದೂರಿದರು.
“ಒಟ್ಟಾರೆಯಾಗಿ 150 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳಿಗೆ ಬದಲಾಗಿ, ಅವರು ಈಗಾಗಲೇ ತಮ್ಮ ಕಾರ್ಪೊರೇಟ್ ದಾನಿಗಳಿಗೆ 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಸಂಪನ್ಮೂಲಗಳನ್ನು ಹಸ್ತಾಂತರಿಸಿದ್ದಾರೆ” ಎಂದರು.
“ಜೂನ್ 4 ರಂದು, ಭಾರತದ ಮತದಾರರು ಈ ಪಕ್ಷಕ್ಕೆ ‘ಸಂಘಟಿತ ಲೂಟಿ’ ಬಾಗಿಲನ್ನು ತೋರಿಸಲಿದ್ದಾರೆ” ಎಂದು ಹೇಳಿದರು. ಏಪ್ರಿಲ್ 19 ರಂದು ಆರಂಭವಾದ ಏಳು ಹಂತದ ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.
ಇದನ್ನು ಓದಿದ್ದೀರಾ? ಲೇಹ್ ಬಾರ್ಡರ್ ಮಾರ್ಚ್| ಸೆಕ್ಷನ್ 144 ಜಾರಿ, ಇಂಟರ್ನೆಟ್ ವೇಗ 2ಜಿಗೆ ಇಳಿಕೆ
“ಜೂನ್ 4 ರಂದು, ಭಾರತದ ಮತದಾರರು ಈ ಪಕ್ಷವು ಸಂಘಟಿತ ಲೂಟಿಯ ಬಾಗಿಲನ್ನು ತೋರಿಸುತ್ತಾರೆ. ಭಾರತ ಸರ್ಕಾರವು ಅದಾನಿ ಮೆಗಾ ಹಗರಣದ ಮೇಲೆ ಜೆಪಿಸಿ ಅನ್ನು ಪ್ರಾರಂಭಿಸುತ್ತದೆ. #PayPM ಹಗರಣ ಸೇರಿದಂತೆ ಪ್ರಧಾನಿ ಅವರು ತಮ್ಮ ಸುಸಜ್ಜಿತವಾದ ನಾಲ್ಕು ಮಾರ್ಗದ ಮೂಲಕ ಹಣವನ್ನು ಸಂಗ್ರಹಿಸುವ ಮೂಲಕ 8200 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.
“ನಿಧಿ ಸಂಗ್ರಹಿಸುವ ಬಿಜೆಪಿಯ ನಾಲ್ಕು ವಿಧಾನಗಳಲ್ಲಿ ಮೊದಲನೆಯದ್ದು ಪೂರ್ವ ಪಾವತಿಸಿದ ಲಂಚ ಅಂದರೆ ಚಂದಾ ನೀಡಿ ದಂಧೆ ಪಡೆಯಿರಿ ಆಗಿದೆ. ಎರಡನೆಯದ್ದು ಪೋಸ್ಟ್-ಪೇಯ್ಡ್ ಲಂಚ ಅಂದರೆ ಕಾಂಟ್ರಾಕ್ಟ್ ಪಡೆಯಿರಿ ಬಳಿಕ ಲಂಚ ನೀಡಿ ಎಂಬುವುದು ಆಗಿದೆ. ಮೂರನೆಯದ್ದು ದಾಳಿಯ ನಂತರದ ಲಂಚ ಪಡೆಯುವುದು ಅಂದರೆ ಹಫ್ತಾ ವಸೂಲಿ ಮತ್ತು ನಾಲ್ಕನೆಯದ್ದು ನಕಲಿ ಕಂಪನಿಗಳು” ಎಂದು ಕಾಂಗ್ರೆಸ್ ಮುಖಂಡ ವಿವರಿಸಿದ್ದಾರೆ.
ಫೆಬ್ರವರಿ 2, 2012 ರಂದು ನೀಡಿದ ತನ್ನ ತೀರ್ಪಿನಲ್ಲಿ, ಜನವರಿ 2008 ರಲ್ಲಿ ಎ ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ವಿವಿಧ ಸಂಸ್ಥೆಗಳಿಗೆ ನೀಡಲಾದ 2ಜಿ ತರಂಗಾಂತರ ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಸೋಮವಾರ, ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ಪೀಠದ ಮುಂದೆ ಮಧ್ಯಂತರ ಅರ್ಜಿಯನ್ನು ಪ್ರಸ್ತಾಪಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕೇಂದ್ರವು 2ಜಿ ಸ್ಪೆಕ್ಟ್ರಮ್ ಪರವಾನಗಿಗಳನ್ನು ನೀಡಲು ಬಯಸಿರುವುದರಿಂದ 2012 ರ ತೀರ್ಪನ್ನು ಮಾರ್ಪಾಡು ಮಾಡಲು ಮನವಿಯನ್ನು ಕೋರಲಾಗಿದೆ ಎಂದು ಉನ್ನತ ಕಾನೂನು ಅಧಿಕಾರಿ ಪೀಠಕ್ಕೆ ತಿಳಿಸಿದ್ದಾರೆ.