ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿ ಟ್ವೀಟ್ ಮಾಡಿದ್ದ ಹಿಂದುತ್ವ ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಿಕೊಡುವ ನಿಮ್ಮ ವಿಶ್ವಗುರು ಕಾವೇರಿ ವಿಚಾರದಲ್ಲಿ ಯಾಕೆ ಸುಮ್ಮನಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದಲ್ಲಿ ನೀರಿನ ಅಭಾವ ಸೃಷ್ಠಿಯಾಗಿದೆ. ಈ ನಡುವೆ , ತಮಿಳುನಾಡಿಗೆ ದಿನನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ನೀಡಿವೆ. ನೀರು ಹರಿಸದಂತೆ ರಾಜ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಚಾರಾಗಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿರುವ ಸೂಲಿಬೆಲೆ, ಸಿದ್ದರಾಮಯ್ಯ ಅವರನ್ನು ಮದ್ರಾಸಿ ಎಂದು ನಿಂದಿಸಿದ್ದಾರೆ.
ಬರಹ ವಿರುದ್ಧ ಚಿತ್ರವೊಂದನ್ನು ಸೂಲಿಬೆಲೆ ಟ್ವೀಟ್ ಮಾಡಿದ್ದು, ಅದರಲ್ಲಿ, ತಮಿಳಿಯನ್ ಒಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮವರು. ಅದು ‘ಸಿದ್ರಾಮ’ ಹೆಸರನ್ನು ಹಿಂಬದಿಯಿಂದ ಓದಿದರೆ ಗೊತ್ತಾಗುತ್ತದೆ ಎಂದಿರುವಂತೆ ಬರೆಯಲಾಗಿದೆ. ಈ ಪೋಸ್ಟ್ ನೋಡಿದ ಕನ್ನಡಿಗರು ಮತ್ತು ರೈತರ ಪರ ಹೋರಾಟಗಾರರು ಸೂಲಿಬೆಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೂಲಿಬೆಲೆ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದರು ನೆಟ್ಟಿಗರು, “ನೀವಾದ್ರೂ ಲ್ಯಾಪ್ ಟಾಪ್ ಕನೆಕ್ಟ್ ಮಾಡಿ ಮೋದಿಗೆ ಹೇಳಿ ಕರ್ನಾಟಕ ನೀರನ್ನು ಉಳಿಸಿ ಎಂದು. ಈ ತರ ಚೀಪ್ ಪೋಸ್ಟ್ ಮಾಡಬೇಡಿ, ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ. ಹಾಗೂ ಕಾವೇರಿ ಹೋರಾಟಕ್ಕೆ ನಿನ್ನ ಬೆಂಬಲ ಎಂದು ಒಂದಾದರು ಪೋಸ್ಟ್ ಮಾಡಿಲ್ವಲ್ಲೋ ಮಾರಾಯ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೂಲಿಬೆಲೆ ವಿರುದ್ಧ ಕಿಡಿಕಾರಿರುವ ಅರುಣ್ ಜಾವಗಲ್, “ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯಿರುವ ವಿಶ್ವಗುರುವಿಗೆ ಕಾವೇರಿ ಸಮಸ್ಯೆಯೇಕೆ ಕಾಣುತ್ತಿಲ್ಲಾ? ನಿಮ್ಮ ಪಕ್ಷದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಪ್ರಲ್ಹಾದ್ ಜೋಶಿ, BL ಸಂತೋಶ್ ರವರುಗಳು ಏಕೆ ಕಾವೇರಿ ವಿಚಾರವಾಗಿ ಮೌನ ತಾಳಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯಿರುವ ವಿಶ್ವಗುರುವಿಗೆ ಕಾವೇರಿ ಸಮಸ್ಯೆಯೇಕೆ ಕಾಣುತ್ತಿಲ್ಲಾ? ನಿಮ್ಮ ಪಕ್ಷದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಪ್ರಲ್ಹಾದ್ ಜೋಶಿ, BL ಸಂತೋಶ್ ರವರುಗಳು ಏಕೆ ಕಾವೇರಿ ವಿಚಾರವಾಗಿ ಮೌನ ತಾಳಿದ್ದಾರೆ?
— ಅರುಣ್ ಜಾವಗಲ್ | Arun Javgal (@ajavgal) September 26, 2023
ಮಯೂರ್ ವರ್ಮ ಹೆಸರಿನ ಮತ್ತೊಬ್ಬ ನೆಟ್ಟಿಗ, “ರೈತರ ಸಂಕಷ್ಟದ ಸಮಯದಲ್ಲಿ ಅವರಿಗೆ ದನಿ ಜೋಡಿಸುವುದನ್ನು ಬಿಟ್ಟು ಹೀಗೆ ವ್ಯಂಗ್ಯ ಮಾಡುತ್ತಿದ್ದೀಯಲ್ಲ, ನೀನು ಒಬ್ಬ ಮನುಷ್ಯನ” ಎಂದು ಕಿಡಿಕಾರಿದ್ದಾರೆ.