ಚಿಕ್ಕೋಡಿ | ಅಕ್ಕ ಪ್ರಿಯಾಂಕಾ ಬೆನ್ನಿಗೆ ನಿಂತ ತಮ್ಮ ರಾಹುಲ್, ʼಗೆಲುವು ಅಕ್ಕಂದೆʼ ಎನ್ನುತ್ತಿರುವ ಕಾರ್ಯಕರ್ತರು

Date:

Advertisements

ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ…

ಜಾನಪದರು ಕಟ್ಟಿದ ಈ ಹಾಡು ಸಹೋದರ ಸಹೋದರಿಯರ ನಡುವಿನ ಸಹೋದರತ್ವ ಬಾಂಧವ್ಯ  ಎಂತಹುದು ಮತ್ತು ಸಹೋದರಿಯ ಪ್ರತಿ ಯಶಸ್ಸಿನ ಹಿಂದಿನ ಅಣ್ಣ ತಮ್ಮಂದಿರ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಜಾನಪದದ ಈ  ಪದ್ಯದ ಸಾಲುಗಳಂತೆ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ  ಸಚಿವ ಸತೀಶ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು, ಅಕ್ಕಾ ಪ್ರಿಯಾಂಕಾ ಬೆನ್ನಿಗೆ ತಮ್ಮ ರಾಹುಲ್ ನಿಂತಿದ್ದು ಇಬ್ಬರೂ  ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಕ್ಕನ ಗೆಲುವಿಗಾಗಿ ಸಹೋದರ ರಾಹುಲ್ ಜಾರಕಿಹೊಳಿ ಅಕ್ಕನೊಟ್ಟಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದ್ದು ಅಕ್ಕ ತಮ್ಮನ ಪ್ರಚಾರದ ವೈಖರಿಗೆ ಭೇಷ್ ಎನ್ನುತ್ತಿದ್ದಾರೆ.

Advertisements

ಸಾಮಾಜಿಕ ಕಾರ್ಯಗಳಲ್ಲೂ ಅಕ್ಕಾ ತಮ್ಮ ಒಟ್ಟಿಗೆ

ಪ್ರಿಯಾಂಕಾ ಮತ್ತು ರಾಹುಲ್ ಕೇವಲ ರಾಜಕೀಯ ಮಾತ್ರವಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಒಟ್ಟಾಗಿ ಕೆಲಸ ಮಾಡಿದ್ದಾರೆ ಸತೀಶ ಜಾರಕಿಹೊಳಿ ಫೌಂಡೇಶನ್ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಒಟ್ಟಿಗೆ ಮಾಡಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ ನೆರೆ ಪ್ರವಾಹದ ಸಂದರ್ಭಗಳಲ್ಲಿ ಇಬ್ಬರೂ ಒಟ್ಟಾಗಿ ಪ್ರವಾಹ ಸಂತ್ರಸ್ತರೊಂದಿಗೆ ಜೊತೆಯಾಗಿ ನಿಂತಿದ್ದಾರೆ.

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಲಾಬಲ

ಚಿಕ್ಕೋಡಿ ಲೋಕಸಭೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದು, 3 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಪಕ್ಷದಿಂದ ಎರಡನೇ ಬಾರಿ ಅಣ್ಣಾ ಸಾಹೇಬ್ ಜೊಲ್ಲೆಯವರು ಸ್ಪರ್ಧಿಸಿದ್ದು ಹಾಗೂ ಸತೀಶ ಜಾರಕಿಹೋಳಿ, ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿಯಂತಹ ಘಟಾನುಘಟಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿದ್ದಾರೆ. ಅದೇ ರೀತಿ ರಮೇಶ ಕತ್ತಿ ಮತ್ತು ಶಶಿಕಲಾ ಜೊಲ್ಲೆಯವರ ವರ್ಚಸ್ಸು ಬಿಜೆಪಿಗೆ ಲಾಭವಾಗಬಹುದಾದರು ರಮೇಶ್ ಕತ್ತಿ ಅಭಿಮಾನಿಗಳು ಲೋಕಸಭಾ ಟಿಕೆಟ್ ರಮೇಶ್ ಕತ್ತಿಯವರಿಗೆ ನೀಡದಿರುವುದಕ್ಕೆ  ಮುನಿಸಿಕೊಂಡಿದ್ದು ಬಿಜೆಪಿಗೆ ನಷ್ಟವನ್ನುಂಟು ಮಾಡಬಹುದಾಗಿದೆ.

ಚಿಕ್ಕೋಡಿ ಲೋಕಸಭಾ ಜಾತಿ ಲೆಕ್ಕಾಚಾರ

ಚಿಕ್ಕೋಡಿ ಲೋಕಸಭಾ ಕ್ಷೇತ್ರದದಲ್ಲಿ ಒಟ್ಟು 17,41,758 ಮತದಾರರಿದ್ದು ಲಿಂಗಾಯತ ಮತ್ತು ಅಹಿಂದ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.

ಕಿರಿಯ ವಯಸ್ಸಿನ ಸಂಸದೆಯಾಗಿ ಇತಿಹಾಸ ಸೃಷ್ಟಿಸುವರೆ

17ನೇ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 25ರ ಹರೆಯದ ಚಂದ್ರಾನಿ ಮರ್ಮು ಬಿಜೆಡಿ ಪಕ್ಷದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಅದರಂತೆ ಕರ್ನಾಟಕದಿಂದ ಚಿಕ್ಕೋಡಿ ಲೋಕಸಭೆಗೆ 27 ವಯಸ್ಸಿನ ಪ್ರಿಯಾಂಕಾ ಜಾರಕಿಹೊಳಿಯವರು ಗೆದ್ದು ಕಿರಿಯ ವಯಸ್ಸಿನ ಸಂಸದರ ಸಾಲಿಗೆ ಸೇರ್ಪಡೆಯಾಗುವರೇ ಎಂದು ಕಾದು ನೋಡಬೇಕಾಗಿದೆ.

ರಾಜಕೀಯ ಲೆಕ್ಕಾಚಾರಗಳೇನಾದರೂ ಇರಲಿ, ಅಕ್ಕನ ಬೆನ್ನಿಗೆ ತಮ್ಮ ನಿಂತಿದ್ದು ನೋಡಿ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಇವರಿಬ್ಬರೂ ಒಟ್ಟಾಗಿ ನಿಂತರೆ ಗೆಲುವು ಅಕ್ಕಂದೆ ಎನ್ನುತ್ತಿದ್ದಾರೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ’ ಎಂದ ಬಿಜೆಪಿ ನಾಯಕ ಅನುರಾಗ್ ಠಾಕೂರ್; ಟ್ರೋಲ್‌ಗೆ ಗುರಿ

"ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ" ಎಂದು ಹೇಳುವ ಮೂಲಕ ಬಿಜೆಪಿ...

ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ...

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ: ಬಿಜೆಪಿಯ ಅಮಿತ್ ಮಾಳವೀಯ

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ...

ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿಕ ಇದೀಗ ಕಾಂಗ್ರೆಸ್ ಶಾಸಕ...

Download Eedina App Android / iOS

X