ಪಂಜಾಬ್ | ಎಎಪಿ ಮಾಜಿ ಸಂಸದ ಧರ್ಮವೀರ್ ಗಾಂಧಿ ಕಾಂಗ್ರೆಸ್ ಸೇರ್ಪಡೆ

Date:

ಲೋಕಸಭೆ ಚುನಾವಣೆಗೂ ಮುನ್ನ ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ (ಎಎಪಿ) ಮಾಜಿ ಸಂಸದ ಧರ್ಮವೀರ್ ಗಾಂಧಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಟಿಯಾಲ ಕ್ಷೇತ್ರದ ಮಾಜಿ ಸಂಸದರು ಸೋಮವಾರ ಹಿರಿಯ ನಾಯಕರುಗಳ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿರುವ ಧರ್ಮವೀರ್ ಗಾಂಧಿ ಪಟಿಯಾಲದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಪತ್ನಿ, ಪಟಿಯಾಲ ಸಂಸದೆ ಪ್ರಣೀತ್ ಕೌರ್ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅದಕ್ಕೂ ಮುನ್ನ ಪಕ್ಷವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು.

ಇದನ್ನು ಓದಿದ್ದೀರಾ? ಜಾರ್ಖಂಡ್ ಬಿಜೆಪಿ ಶಾಸಕ ಜೈ ಪ್ರಕಾಶ್ ಕಾಂಗ್ರೆಸ್ ಸೇರ್ಪಡೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು 2014ರಲ್ಲಿ ಎಎಪಿ ಅಭ್ಯರ್ಥಿಯಾಗಿದ್ದ ಧರ್ಮವೀರ್ ಗಾಂಧಿ ಪಟಿಯಾಲ ಕ್ಷೇತ್ರದಲ್ಲಿ ಪ್ರಣೀತ್ ಕೌರ್ ಅವರನ್ನು ಸೋಲಿಸಿ ಸಂಸದರಾಗಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ಧರ್ಮವೀರ್ ಗಾಂಧಿ 2016ರಲ್ಲೇ ಎಎಪಿ ತೊರೆದಿದ್ದು ತನ್ನದೇ ಆದ ನವಾಬ್ ಪಂಜಾಬ್ ಪಕ್ಷ (ಎನ್‌ಪಿಪಿ) ಕಟ್ಟಿದ್ದರು. ಎನ್‌ಪಿಪಿ ಸೋಮವಾರ ಕಾಂಗ್ರೆಸ್‌ನೊಂದಿಗೆ ವಿಲೀನವಾಗಿದೆ.

ಕಾಂಗ್ರೆಸ್‌ ನಾಯಕರಾದ ಪವನ್ ಖೇರಾ, ದೇವೇಂದ್ರ ಯಾದವ್, ಅಮರಿಂದರ್‌ ಸಿಂಗ್‌ ರಾಜ ವಾರಿಂಗ್‌, ಸಿಎಲ್‌ಪಿ ನಾಯಕ ಪ್ರತಾಪ್ ಸಿಂಗ್ ಭಾಜ್ವಾ ಸಮ್ಮುಖದಲ್ಲಿ ಧರ್ಮವೀರ್ ಗಾಂಧಿ ಕಾಂಗ್ರೆಸ್ ಸೇರಿದರು. “ಇಂತಹ ವೃತ್ತಿಪರರು ಕಾಂಗ್ರೆಸ್ ಸೇರುವುದು ಉತ್ತಮ ಸಂಕೇತ” ಎಂದು ಪ್ರತಾಪ್ ಸಿಂಗ್ ಭಾಜ್ವಾ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಾವು ಮತ ಹಾಕುತ್ತೇವೆ, ಆದರೆ ಬಿಜೆಪಿಗಲ್ಲ’; 1,200 ಕುಟುಂಬಗಳು ಹೀಗೆ ಹೇಳಿದ್ದೇಕೆ?

ನಾವು ಒಡೆದ ಮನೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮನೆಗಳನ್ನು ಒಡೆದುರುಳಿಸಿದೆ....

‘ಇಂಡಿಯಾ’ ಒಕ್ಕೂಟ ತೊರೆಯಲು ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಹೇಮಂತ್ ಸೊರೆನ್‌ಗೆ ಜೈಲು’

'ಇಂಡಿಯಾ' ಮೈತ್ರಿಕೂಟವನ್ನು ತೊರೆಯಲು ನಿರಾಕರಿಸಿದ್ದಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜೆಎಂಎಂ ನಾಯಕ...

ಮೋದಿಯವರ ದ್ವೇಷ ಭಾಷಣ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ: ರಾಹುಲ್ ಗಾಂಧಿ

"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ...