ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ ಹಳ್ಳಿ ಭಾಗದ ರಸ್ತೆಗಳಲ್ಲಿ ಜನರಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ಮೂಲಭೂತ ಸೌಲಭ್ಯಗಳಲ್ಲಿ ಒಂದಾದಂತಹ ಈ ರಸ್ತೆಗಳಲ್ಲಿ ತಗ್ಗು, ಗುಂಡಿಗಳು ಬಿದ್ದು ಹಲವಾರು ವರ್ಷಗಳು ಕಳೆದರೂ ನಗರಸಭೆ ಅಧಿಕಾರಿಗಳಾಗಲಿ, ಪಿಡಬ್ಲ್ಯೂಡಿ ಅಧಿಕಾರಿಗಳಾಗಲಿ ಹಾಗೂ ಸ್ಥಳೀಯ ಶಾಸಕರಾಗಲಿ ಈ ಬಗ್ಗೆ ಯಾವುದೇ ಜನರ ಹಿತಕ್ಕಾಗಿ ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಗಮನ ಸೆಳೆಯಲು ಕರ್ನಾಟಕ ರಾಷ್ಟ್ರ ಸಮಿತಿಯ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಈ ಗುಂಡಿಗಳು ಕ್ರಮೇಣ ಕ್ರಮೇಣ ದೊಡ್ಡದಾಗಿ ಈಜುಕೊಳದಂತಹ ಗುಂಡಿಗಳಾಗಿವೆ. ಇವುಗಳಿಂದ ದಿನನಿತ್ಯವೂ ಓಡಾಡುವ ಜನರಿಗೆ, ವಾಹನಗಳಿಗೆ ತೊಂದರೆ ಎದುರಿಸುತ್ತಿದ್ದು, ಕೆಲವೊಮ್ಮೆ ಅಪಘಾತಗಳಾದ ಉದಾಹರಣೆಗಳೂ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆ ಆರ್ ಎಸ್ ಪಕ್ಷದ ಚಳ್ಳಕೆರೆ ತಾಲೂಕು ಹಾಗೂ ಚಳ್ಳಕೆರೆ ನಗರದ ಘಟಕದ ಪದಾಧಿಕಾರಿಗಳು ಸೇರಿ ರಸ್ತೆ ಗುಂಡಿ ಪೂಜೆ ಕಾರ್ಯಕ್ರಮವನ್ನ ವಿನೂತನವಾಗಿ ಆಚರಿಸಿ ಆಡಳಿತದ ಗಮನ ಸೆಳೆದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಿ ಮಹೇಶ್ ನಗರಂಗೆರೆ, ಅವರ ನೇತೃತ್ವದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಪಾಪಯ್ಯ, ಉಪಾಧ್ಯಕ್ಷರಾದ ಜಬಿವುಲ್ಲಾ ಹಾಗೂ ನಗರ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ , ಪ್ರಧಾನ ಕಾರ್ಯದರ್ಶಿ ಧನಂಜಯ, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಚಿತ್ತಯ್ಯ ಇತರರೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಯಿತು.
https://shorturl.fm/YCBOF