ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಪಾರದರ್ಶಕವಾಗಿ ನೆಡೆದಿಲ್ಲ. ಚಿಕ್ಕ ಚಿಕ್ಕ ನೆಪ, ಕಾರಣಗಳನ್ನು ಮುಂದೆಮಾಡಿ ಮತಗಳನ್ನು ತಡೆಹಿಡಿಯಲಾಗಿದೆ ಹಾಗೂ ತಿರಸ್ಕರಿಸಲಾಗಿದೆ. ಅಂತಹ ಮತಗಳು ಸೇರಿಸಿ ಮರು ಎಣಿಕೆ ಮಾಡುವಂತೆ ಚಿತ್ರದುರ್ಗ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ಅರ್ಜುನ್ ಟಿಕೆ ಒತ್ತಾಯಿಸಿದರು.
ಚಿತ್ರದುರ್ಗದಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿ, ಫೋಟೋ ಹೊಂದಿಕೆಯಾಗಿಲ್ಲ, ವೀಡಿಯೋದಲ್ಲಿ ಲೋಪವಿದೆ ಎನ್ನುವಂತಹ ನಾನಾ ಕಾರಣ ಕೊಟ್ಟು ನೈಜ ಮತದಾರರನ್ನು ತಿರಸ್ಕರಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 6 ರಿಂದ 7 ಸಾವಿರ ಮತದಾರರನ್ನು ನೊಂದಾಯಿಸಿದ್ದೇನೆ. ಆದರೆ ನನಗೆ 3800 ಮತಗಳು ಮಾತ್ರ ಬಂದಿವೆ. ಉಳಿದ ಮತಗಳು ಎಲ್ಲಿ? ಏನಾದವು? ಚುನಾವಣೆ ಪದ್ದತಿಯಲ್ಲಿ ಮತಗಟ್ಟೆಗೆ ಬಂದು ಮತದಾನ ಚಲಾಯಿಸುವ ಪದ್ಧತಿ ಬರಬೇಕು. ಚಿಕ್ಕ ಚಿಕ್ಕ ಕಾರಣಗಳಿಗಾಗಿ ಮತಗಳನ್ನು ತಡೆ ಹಿಡಿದು ತಿರಸ್ಕರಿಸಿರುವುದರಿಂದ ಹಿನ್ನಡೆಯಾಗಿದೆ. ಹಾಗಾಗಿ ಮರು ಎಣಿಕೆ ಮಾಡಬೇಕು” ಎಂದು ಅಭ್ಯರ್ಥಿ ಅರ್ಜುನ್ ಟಿ.ಕೆ. ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? .ಚಿತ್ರದುರ್ಗ | ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಬೆಸ್ಕಾಂ ಕಛೇರಿಗೆ ರೈತ ಸಂಘ ಮುತ್ತಿಗೆ.“ಯೂತ್ ಕಾಂಗ್ರೆಸ್‌ನಲ್ಲಿ ಪಕ್ಷದ ತತ್ವ ಸಿದ್ದಾಂತಗಳನ್ನಿಟ್ಟುಕೊಂಡು ಬೇರು ಮಟ್ಟದಿಂದ ಸಂಘಟಿಸಿದ್ದೇನೆ. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಾನು ಗೆಲ್ಲಬೇಕಿತ್ತು. ಚುನಾವಣೆಯಲ್ಲಿ ಅಕ್ರಮ, ಮೋಸವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ” ಎಂದು ಆರೋಪಿಸಿದರು.
ಹಿರಿಯೂರು ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೇಶವ ಜೆ.ಜೆ.ಹಳ್ಳಿ ಮಾತನಾಡಿ, “ಹಿರಿಯೂರು ಯೂತ್ ಕಾಂಗ್ರೆಸ್ ಚುನಾವಣಾ ಫಲಿತಾಂಶದಲ್ಲಿ ಮೋಸವಾಗಿರುವ ಅನುಮಾನವಿದೆ. 12200 ಮತಗಳು ಬಂದಿವೆ. 2390 ಮತಗಳು ತಿರಸ್ಕಾರವಾಗಿರುವುದು, ಚುನಾವಣೆಯ ಫಲಿತಾಂಶ ಪಾರದರ್ಶಕವಾಗಿಲ್ಲ ಎಂದು ಕಂಡುಬರುತ್ತಿದೆ. ಮರು ಎಣಿಕೆಯಾಗಬೇಕು. ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ. ಈ ಸಂಬಂಧ ಪಕ್ಷದ ನಾಯಕರುಗಳ ಗಮನಕ್ಕೆ ತರಲಾಗುವುದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರುಣ, ಅಜೀಜ್ ಹಾಜರಿದ್ದರು.
