‘ಯಡಿಯೂರಪ್ಪ ಪುತ್ರ, ಬಿಜೆಪಿ ಸಂಸದ ಬಿವೈ ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸಿ’ ಎಂದು ಕಾಂಗ್ರೆಸ್ ಹಿರಿಯ ನಾಯಕ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಇದು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬೆಕ್ಕಿನಕಲ್ಮಠದಲ್ಲಿಜಗದ್ಗುರು ಶ್ರೀ ಗುರುಬಸವ ಸ್ವಾಮೀಜಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಮನೂರು ಶಿವಶಂಕರಪ್ಪ, ”ರಾಘವೇಂದ್ರ ಅವರಂತಹ ಸಂಸತ್ ಸದಸ್ಯರನ್ನು ಪಡೆದ ನೀವೇ ಧನ್ಯರು. ಏಕೆಂದರೆ ತಮ್ಮ ಕ್ಷೇತ್ರದಲ್ಲಿ ಯಾವ ಕೆಲಸಗಳಾಗಬೇಕೆಂದು ನೋಡಿಕೊಂಡು ಆ ಎಲ್ಲವನ್ನು ತಮ್ಮ ಕೈಯಿಂದ ಆಗದೇ ಇದ್ದರೂ ಸಹ ಆಗುವಂತಹ ರೀತಿಯಲ್ಲಿ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟ ಧೀಮಂತ ನಾಯಕ ಎಂದರೆ ತಪ್ಪಾಗಲಾರದು” ಎಂದು ಹಾಡಿ, ಹೊಗಳಿದ್ದಾರೆ.
ಈ ದಿನವು ನನ್ನ ರಾಜಕೀಯ ಜೀವನದ ಅತ್ಯಂತ ಸುದಿನಗಳಲ್ಲಿ ಒಂದಾಗಿದ್ದು, ಹಿರಿಯ ಮುತ್ಸದ್ಧಿ ನಾಯಕರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪರವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮಾತಾಡಿರುವುದರಿಂದ ನನಗೆ ನೂರಾನೆ ಬಲ ಬಂದಂತಾಗಿದೆ. ಮುಂದಿನ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ… pic.twitter.com/n54wfXjDQY
— B Y Raghavendra (@BYRBJP) January 26, 2024
“ಇನ್ನೇನು ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ರಾಘವೇಂದ್ರ ಅವರೇ ಸ್ಪರ್ಧಿಸುತ್ತಾರೆ. ಬಿಜೆಪಿಯಿಂದ ಬೇರೆ ಯಾರಿಗೂ ಟಿಕೆಟ್ ನೀಡುವುದಿಲ್ಲ. ಅವರು ಮತ್ತೆ ಸ್ಪರ್ಧೆ ಮಾಡೇ ಮಾಡುತ್ತಾರೆ. ಅವರು ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಸಮತೂಕ ಮಾಡಿ ಅವರನ್ನು ಗೆಲ್ಲಿಸುವಂತಹ ದೊಡ್ಡ ಕರ್ತವ್ಯ ನಿಮ್ಮದಾಗಿದೆ. ಕ್ಷೇತ್ರದ ಜನತೆಗೆ ಏನು ಬೇಕು? ಅವರು ಬಯಸಿದ್ದು ಅಭಿವೃದ್ಧಿ. ಅಂತಹ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅಭಿವೃದ್ಧಿಗೆ ಆದ್ಯತೆ ನೀಡಿ ಮುಂಬರುವ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿ” ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಕೂಡ ಆಗಿರುವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಈ ಹೇಳಿಕೆಯ ವಿಡಿಯೋವನ್ನು ಖುದ್ದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ, “ಈ ದಿನ ನನ್ನ ರಾಜಕೀಯ ಜೀವನದ ಅತ್ಯಂತ ಸುದಿನಗಳಲ್ಲಿ ಒಂದಾಗಿದ್ದು, ಹಿರಿಯ ಮುತ್ಸದ್ಧಿ ನಾಯಕರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪರವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮಾತಾಡಿದ್ದಾರೆ. ಇದರಿಂದ ನನಗೆ ನೂರಾನೆ ಬಲ ಬಂದಂತಾಗಿದೆ. ಮುಂದಿನ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಪ್ರಗತಿಗಾಗಿ ಮತ್ತಷ್ಟು ದುಡಿಯುವ ಮೂಲಕ ಸನ್ಮಾನ್ಯರು ನನ್ನ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇನೆ” ಎಂದು ಧನ್ಯವಾದ ಸಲ್ಲಿಸಿದ್ದಾರೆ.
#WATCH | On Karnataka Congress MLA Shamanur Shivashankarappa’s statement to re-elect former Karnataka CM Yediyurappa’s son BY Raghavendra in 2024 Lok Sabha polls, former Karnataka CM BS Yediyurappa says, “Raghavendra’s work has been appreciated by everyone. I congratulate… pic.twitter.com/493xSx5lev
— ANI (@ANI) January 27, 2024
ಶಾಮನೂರು ಶಿವಶಂಕರಪ್ಪರವರ ಹೇಳಿಕೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ, “2024ರ ಲೋಕಸಭೆ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಮರು ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಸಂತಸ ತಂದಿದೆ. ಅವರು ನಮ್ಮ ಸಮಾಜದ ಹಿರಿಯ ಮುಖಂಡರು. ಅವರ ಹೇಳಿಕೆಗೆ ಅದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ಸಂಸದನಾಗಿ ರಾಘವೇಂದ್ರ ಅವರ ಕಾರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ” ಎಂದು ಪುತ್ರನ ಬಗ್ಗೆ ಬಂದ ಹೊಗಳಿಕೆಗೆ ಧನ್ಯವಾದ ಸಲ್ಲಿಸಿದ್ದಾರೆ.