ಅಧಿಕೃತ ಕೋವಿಡ್ ಸಾವಿನ ಸಂಖ್ಯೆ ಮತ್ತು ನಾಗರಿಕ ನೋಂದಣಿ ವ್ಯವಸ್ಥೆಯ ದತ್ತಾಂಶದಲ್ಲಿರುವ ಅಂಕಿಅಂಶಗಳ ನಡುವೆ ಹೊಂದಾಣಿಕೆ ಇಲ್ಲ ಎಂಬ ಆರೋಪದ ಮೇಲೆ ಕಾಂಗ್ರೆಸ್ ಭಾನುವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಈ ಪಕ್ಷಪಾತ ಸರ್ಕಾರ ತಮ್ಮ ಕ್ರಮಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ನಿರೀಕ್ಷಿಸುವುದು ತುಂಬಾ ಹೆಚ್ಚು. ಆದರೆ ಇತಿಹಾಸದಲ್ಲಿ ಈ ಸರ್ಕಾರ ದುರ್ಬಲ ಕೃತ್ಯಗಳು ದಾಖಲಾಗುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಐದು ವರ್ಷಗಳ ಹಿಂದೆ, ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಜಗತ್ತು ಧ್ವಂಸಗೊಡಿತ್ತು. ಆ ಕ್ಷಣದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ನಾವು ನೋಡಿರದ ಪ್ರಮಾಣದಲ್ಲಿ ಭಾರತವು ವಿನಾಶಕ್ಕೆ ಒಳಗಾಗಿದೆ ಎಂಬುದು ಸ್ಪಷ್ಟವಾಗಿತ್ತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದಿರಾ? ಕೋವಿಡ್ ಲಸಿಕೆ ಪಡೆದ ಗಣ್ಯರ ಮಾಹಿತಿ ಸೋರಿಕೆ; ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪ
“ವಲಸಿಗರ ಬಿಕ್ಕಟ್ಟಿನಿಂದ ಹಿಡಿದು ಲಸಿಕೆಗಳ ಉತ್ಪಾದನೆಯ ಕೊರತೆಯವರೆಗೆ, ಸಾಮೂಹಿಕ ಸಾವುಗಳು ಮತ್ತು ಆಮ್ಲಜನಕದ ಕೊರತೆಯಿಂದ ಹಿಡಿದು ಮಾನವರ ಜೀವಗಳಿಗೆ ಆದ್ಯತೆ ನೀಡುವ ಬದಲು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಲು ಪ್ರಧಾನಿಯವರು ಹೋದವರೆಗೂ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮೋದಿ ಸರ್ಕಾರದ ಅತ್ಯಂತ ಕ್ರೂರ ಮತ್ತು ಕೆಟ್ಟ ಆಡಳಿತ ಪ್ರದರ್ಶನಗೊಂಡಿತು” ಎಂದು ಟೀಕಿಸಿದ್ದಾರೆ.
“ಸರ್ಕಾರವು ಕೋವಿಡ್ ಸಾವುಗಳ ಲೆಕ್ಕವನ್ನು ವ್ಯವಸ್ಥಿತವಾಗಿ ಕಡಿಮೆ ವರದಿ ಮಾಡಿದೆ ಎಂದು ನಮಗೆ ಅಂದೇ ತಿಳಿದಿತ್ತು. ಆದರೆ 2021ರಲ್ಲಿ ಮಾತ್ರ ಭಾರತದಾದ್ಯಂತ ಹೆಚ್ಚುವರಿಯಾಗಿ 20 ಲಕ್ಷ ಸಾವುಗಳು ವರದಿಯಾಗಿವೆ ಎಂದು ನಮಗೆ ಈಗ ತಿಳಿದುಬಂದಿದೆ. ಇವುಗಳಲ್ಲಿ ಹೆಚ್ಚಿನವು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಂಭವಿಸಿರುವ ಸಾವು. 20 ಲಕ್ಷ ಸಾವಿನ ಸಂಖ್ಯೆಯೂ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ 3.3 ಲಕ್ಷಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
More than five years ago, the world was ravaged by the COVID-19 pandemic. It was clear – even in that moment – that India underwent devastation on a scale that we hadn’t seen for more than a century.
— Jairam Ramesh (@Jairam_Ramesh) May 18, 2025
From the migrant crisis to the manufactured shortage of vaccines, from the mass… pic.twitter.com/51HDjZivvE
“ಪ್ರಧಾನಿಯವರ ತವರು ರಾಜ್ಯ ಗುಜರಾತ್‌ನಲ್ಲಿ ದಿಗ್ಭ್ರಮೆಗೊಳಿಸುವಷ್ಟು ಪ್ರಮಾಣದಲ್ಲಿ ಸಾವುಗಳು ಸಂಭವಿಸಿದೆ. ಇದೀಗ ಬಂದ ಲೆಕ್ಕಾಚಾರ ನೋಡಿದಾಗ ಗುಜರಾತ್ ಸರ್ಕಾರ ಒಪ್ಪಿಕೊಂಡಿದ್ದಕ್ಕಿಂತ 33 ಪಟ್ಟು ಹೆಚ್ಚು ಸಾವುಗಳು ಸಂಭವಿಸಿದೆ ಎಂದು ತಿಳಿದುಬಂದಿದೆ” ಎಂದು ಹೇಳಿದ್ದಾರೆ.
“ಈ ಸರ್ಕಾರವು ತನ್ನ ಕಿವುಡ ಕ್ರಮಗಳಿಗೆ ವಿಷಾದ ಅಥವಾ ಪಶ್ಚಾತ್ತಾಪವನ್ನು ವ್ಯಕ್ತಪಡಿಸುತ್ತದೆ ಎಂದು ನಿರೀಕ್ಷಿಸುವುದು ನಮ್ಮ ಅತಿರೇಕದ ನಿರೀಕ್ಷೆಯಾಗಬಹುದು. ಆದರೆ ಇತಿಹಾಸ ಈ ದುಷ್ಕೃತ್ಯವನ್ನು ದಾಖಲಿಸುವುದು ಖಚಿತ”ಎಂದು ತಿಳಿಸಿದ್ದಾರೆ.
