- ಗ್ಯಾರಂಟಿ ಲೇವಡಿ ಮಾಡಿದ ಬಿಜೆಪಿಗೆ ಕೈ ತಪರಾಕಿ
- ಯೋಜನೆ ಜಾರಿ ಮಾಡಿ ಬಿಜೆಪಿ ಪ್ರಮುಖರ ಲೇವಡಿ
ಕರುನಾಡ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪತ್ರಿಕಾಗೋಷ್ಠಿ ನಡೆಸಿ ಯೋಜನೆಗಳ ಜಾರಿ ಬಗ್ಗೆ ಮಾಹಿತಿ ನೀಡಿದ್ದರು.
ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಇಲ್ಲಿಯವರೆಗೆ ತಮ್ಮ ಸರ್ಕಾರವನ್ನು ಲೇವಡಿ ಮಾಡುತ್ತಿದ್ದ ವಿಪಕ್ಷ ಬಿಜೆಪಿಗೆ ತಿರುಗೇಟು ನೀಡಿ, ನಮ್ಮ ಬದ್ದತೆ ನೋಡಿಕೊಳ್ಳಿ ಎಂದಿದೆ. ಕೈ ಪಕ್ಷದ ಟ್ವೀಟ್ ಈ ಕೆಳಗಿನಂತಿದೆ:
ನಳಿನ್ ಕುಮಾರ್ ಕಟೀಲ್ ಅವರೇ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ! ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ! ಶೋಭಾ ಕರಂದ್ಲಾಜೆ ಅವರೇ, ನಿಮಗೂ ಪ್ರಯಾಣ ಫ್ರೀ! ಸಿ ಟಿ ರವಿ ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ! ಭಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ(ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ.
ಈ ಸುದ್ದಿ ಓದಿದ್ದೀರಾ?:ಗ್ಯಾರಂಟಿ ಯೋಜನೆ ಜಾರಿ ಮಾಡಿದ ಸರ್ಕಾರ; ಜುಲೈ 1ರಿಂದ ಉಚಿತ ವಿದ್ಯುತ್
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್, “ನಾವು ನುಡಿದಂತೆ ನಡೆಯುವವರು. ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಈಗ ನೀವೇನು ಮಾಡುವಿರಿ” ಎಂದು ಪ್ರಶ್ನಿಸಿದೆ.