- ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಸರ್ಕಾರ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ: ಸದಾನಂದಗೌಡ
- ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿಯಾಗಿದ್ದು, ಸಿಎಂ, ಡಿಸಿಎಂ ಮೂಲಕ ಹಣ ಸಂದಾಯ
ಭ್ರಷ್ಟಾಚಾರ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದ್ದು, “ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್” ಎಂಬ ಪೋಸ್ಟರ್ ಮೂಲಕ ವಾಗ್ದಾಳಿ ನಡೆಸಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಶಾಸಕ ರವಿಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಡಿವಿ ಸದಾನಂದಗೌಡ, “ಬ್ರ್ಯಾಂಡ್ ಬೆಂಗಳೂರು ಹೆಸರರಲ್ಲಿ ಬ್ರ್ಯಾಂಡ್ ಸಿಎಂ, ಡಿಸಿಎಂ ಸಿದ್ದರಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಸರ್ಕಾರ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಜನರಿಗೆ ನಾವು ಪೂರ್ಣ ವಿವರ ಕೊಡಲು ಈ ಪೋಸ್ಟರ್ ಬಿಡುಗಡೆ ಮಾಡುತ್ತೇವೆ” ಎಂದರು.
”ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿಯಾಗಿದ್ದು, ಪಂಚರಾಜ್ಯಗಳ ಚುನಾವಣೆಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಹಣ ಸಂದಾಯವಾಗುತ್ತಿದೆ. ಕಲೆಕ್ಷನ್‌ಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸ್ಪರ್ಧೆಗೆ ಇಳಿದಿದ್ದಾರೆ. ಇದರ ವಂಶವೃಕ್ಷ ಈ ಪೋಸ್ಟರ್‌ನಲ್ಲಿದೆ” ಎಂದು ವಿವರಿಸಿದರು.
“ಸಿಎಂ ಸಿದ್ದರಾಮಯ್ಯ ಅವರಿಂದ ರಣದೀಪ್ ಸಿಂಗ್ ಸುರ್ಜೇವಾಲಾ ಮೂಲಕ ಮತ್ತು ಡಿಕೆ ಶಿವಕುಮಾರ್ ಅವರಿಂದ ಕೆಸಿ ವೇಣುಗೋಪಾಲ ಮೂಲಕ ರಾಹುಲ್ ಗಾಂಧಿಗೆ ಹಣ ಸಂದಾಯವಾಗುತ್ತಿದೆ. ಸಿದ್ದರಾಮಯ್ಯ ಇದರ ಉಸ್ತುವಾರಿಗಾಗಿ ಭೈರತಿ ಸುರೇಶ್ ಮತ್ತು ಮಗ ಯತೀಂದ್ರ ಮೂಲಕ ಹಣ ಡೀಲ್ ಮಾಡುತ್ತಿದ್ದಾರೆ” ಎಂದು ಸದಾನಂದಗೌಡ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿ ನ ಸಂಪಾದಕೀಯ | ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ‘ವಿಶ್ವಗುರು’ವಿಗೆ ಶೋಭೆಯಲ್ಲ
“ಗುತ್ತಿಗೆದಾರರ ಸಂಘದಲ್ಲಿ ಎರಡು ಗುಂಪುಗಳು ಇವೆ. ಒಂದು ಕೆಂಪಣ್ಣ ಮತ್ತು ರಾಮಯ್ಯ ಅವರು ಸಿದ್ದರಾಮಯ್ಯ ಪರವಾದ ಗುಂಪು. ಇನ್ನೊಂದು ಕಡೆ ತಂಡ ದೊಡ್ಡದಿದೆ. ಉಪಾಧ್ಯಕ್ಷರ ನೇತೃತ್ವದಲ್ಲಿ ಈ ತಂಡ ಕೆಲಸ ಮಾಡುತ್ತಿದೆ. ಆ ತಂಡದ ಸದಸ್ಯ ಅಂಬಿಕಾಪತಿ ಮನೆಯ ಮೇಲೆ ಐಟಿ ದಾಳಿ ಮಾಡಿದ್ದು ರಾಜ್ಯ ಗಮನಿಸಿದೆ” ಎಂದರು.
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಹೈಕೋರ್ಟ್ ಕೂಡ ಡಿಕೆ ಶಿವಕುಮಾರ್ ಮೇಲೆ ತನಿಖೆ ನಡೆಸಲು ಒಪ್ಪಿಗೆ ನೀಡಿದೆ. ಕೇವಲ ಐಟಿ ತನಿಖೆಯಿಂದ ತನಿಖೆ ಬೇಡ. ಇದರ ಬೇರು ಹುಡುಕಬೇಕು. ಹೀಗಾಗಿ ಸಿಬಿಐ ತನಿಖೆ ಮಾತ್ರ ಸಾಧ್ಯ. ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ, ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
Live : ಪತ್ರಿಕಾಗೋಷ್ಠಿ
ಸ್ಥಳ : ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ https://t.co/xahIBWXovX
— BJP Karnataka (@BJP4Karnataka) October 20, 2023
“ಈ ಸರ್ಕಾರಕ್ಕೆ ಹೊಸ ಕೆಲಸ ಮಾಡಲು ಉತ್ಸಾಹ ಇಲ್ಲ. ಈವರೆಗೂ ಯಾವುದೇ ಟೆಂಡರ್ ಕರೆದಿಲ್ಲ. ಯಾವಾಗ ಕರೆಯುತ್ತಾರೋ ಅದು ಗೊತ್ತಿಲ್ಲ. ಒಳ್ಳೆಯ ಗುತ್ತಿಗೆದಾರರಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ನಮ್ಮ ಆಗ್ರಹ ಇಷ್ಟೇ, ಕಮಿಷನ್ ಸರ್ಕಾರ ತೊಲಗಬೇಕು. ಈ ಬಗ್ಗೆ ರಾಜ್ಯದ ಸಾಮಾನ್ಯ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು.
”ಬೆಳಗಾವಿಗೆ ಡಿಸಿಎಂ ಯಾಕೆ ಹೋಗಿದ್ದರು ಗೊತ್ತಾ? ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಜಾರಕಿಹೊಳಿ ಕಲೆಕ್ಷನ್ ಜಾಸ್ತಿ ಮಾಡುತ್ತಿದ್ದಾರೆ. ಇದು ಕೈತಪ್ಪಿ ಹೋಗುತ್ತಿದೆ ಎಂಬ ಭಯಬಿದ್ದು ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ” ಎಂದು ದೂರಿದರು.
ATM ಸರ್ಕಾರದ ಕಲೆಕ್ಷನ್ ವಂಶಾವಳಿ. ಅಡಿಯಿಂದ ಮುಡಿಯವರೆಗೆ ಭ್ರಷ್ಟರದ್ದೇ ಪ್ರಭಾವಳಿ.
Collection Tree of ATM Sarkara!#CongressLootsKarnataka pic.twitter.com/kFoRwVPOzt
— BJP Karnataka (@BJP4Karnataka) October 20, 2023