ವೇಶ್ಯಾವಾಟಿಕೆ ದಂಧೆ | ಪುನೀತ್ ಕೆರೆಹಳ್ಳಿ ಜೊತೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕ ಯುವತಿ ಹೇಳಿದ್ದೇನು ?

Date:

ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವ ಬಡ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ತಂಡದಲ್ಲಿ ಪುನೀತ್‌ ಕೆರೆಹಳ್ಳಿ ಕೂಡ ಇದ್ದ. ಅವರ ಬಡತನವನ್ನೇ ಬಳಸಿಕೊಂಡು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ಬಗ್ಗೆ ವೇಶ್ಯಾವಾಟಿಕೆಯಿಂದ ರಕ್ಷಣೆಗೊಳಗಾದ ಯುವತಿಯೇ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದಾಳೆ.

ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಬಂಧಿಯಾಗಿ ಪುನೀತ್ ಕೆರೆಹಳ್ಳಿಯ ಕಪಿಮುಷ್ಠಿಯಲ್ಲಿದ್ದ ಯುವತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯ ಯಥಾವತ್ತು ಇಲ್ಲಿದೆ.

- Advertisement -

ನಾನು ಶ್ರೀಮತಿ ಪ್ರೇಮ (ಗೌಪ್ಯತೆಗಾಗಿ ಹೆಸರು ಬದಲಿಸಲಾಗಿದೆ) ಗಂಡ ಲೇಟ್ ರಮೇಶ, 36 ವರ್ಷ, ಬಸ್ ನಿಲ್ದಾಣದ ಹತ್ತಿರ, ಮನೋರಾಯನ ಪಾಳ್ಯ, ಆರ್ ಟಿ ನಗರ ಅಂಚೆ, ಬೆಂಗಳೂರು ನಗರ 32. ಸ್ವಂತ ವಿಳಾಸ ಭಾರತಿ ನಗರ, ಹಾವಡಿ ಚೆನ್ನೈ, ತಮಿಳುನಾಡು. ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿನ ಕನಕನಗರದ ಗಾಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ನನಗೆ ಇತ್ತೀಚಿಗೆ ಶ್ರೀಮತಿ ಮಂಜುಳ ಮತ್ತು ಮದನ್ ಮೋಹನ್‌ರವರು ಪರಿಚಯವಾಗಿದ್ದು, ನನ್ನನ್ನು ಅವರು ವಾಸವಿದ್ದ ಕೆ ಬಿ ಸಂದ್ರ, ಗುರುಕೃಪ ಹೋಟೆಲ್ ಹತ್ತಿರ, ರಾಜಾರಾಮಣ್ಣ ರಸ್ತೆ, ಅನ್ಸಿಆಲ್ಫಾ ಅಪಾರ್ಟ್‌ಮೆಂಟ್, ನಂ ಸಿ 17[12] ಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅವರ ಮನೆಗೆ ಹೋದಾಗ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ತೊಡಗುವಂತೆ ಬಲವಂತ ಮಾಡುತ್ತಿದ್ದರು. ನಾನು ಬೇಡವೆಂದು ಹೇಳಿದರೂ ಪುಸಲಾಯಿಸಿ ಹೊರಗಡೆಯಿಂದ ಗಿರಾಕಿಗಳನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ನಂತರ ಗಿರಾಕಿಗಳಿಂದ ಹೆಚ್ಚಿನ ಹಣ ಪಡೆದು ನನಗೆ ಕಡಿಮೆ ಹಣ ಕೊಡುತ್ತಿದ್ದರು.

ನನ್ನಂತೆಯೆ ಕೇವಲ 19 ವರ್ಷ ವಯಸ್ಸಿನ ನೇಹಾ, 33 ವರ್ಷ ವಯಸ್ಸಿನ ಶಿಲ್ಪಾ, 33 ವರ್ಷ ವಯಸ್ಸಿನ ತಾಹೀರಾ ಭಾನು (ಎಲ್ಲರ ಹೆಸರುಗಳನ್ನು ಈ ಲೇಖನಕ್ಕಾಗಿ ಬದಲಿಸಲಾಗಿದೆ) ಎಂಬುವರು ಮಂಜುಳಾರವರ ಮನೆಗೆ ಬಂದಿದ್ದು ಅವರುಗಳಿಗೂ ಸಹ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು.

ದಿನಾಂಕ 21/03/2013ರಂದು ಮಧ್ಯರಾತ್ರಿ ಸುಮಾರು 3.00 ಗಂಟೆಯ ಸಮಯದಲ್ಲಿ ಡಿಜೆ ಹಳ್ಳಿ ಪೊಲೀಸರು ನಾವುಗಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಂಜುಳಾ, ಮದನ್ ಮೋಹನ್‌ರವರು ಬಾಡಿಗೆಗೆ ಪಡೆದು ವಾಸವಿದ್ದ ಮನೆಯ ಮೇಲೆ ದಾಳಿ ಮಾಡಿದ್ದು, ನಮ್ಮನ್ನು ಹಿಡಿದುಕೊಂಡರು. ನಂತರ ಪೊಲೀಸರು ನಮ್ಮನ್ನು ಘಟನೆಯ ಬಗ್ಗೆ ವಿಚಾರಣೆ ಮಾಡಿದಾಗ ಮಂಜುಳಾರವರು ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿರುವುದಾಗಿ ಒಪ್ಪಿಕೊಂಡೆವು.

ಪೊಲೀಸರು ದಾಳಿ ಮಾಡಿದಾಗ ಮನೆಯಲ್ಲಿ ಮಂಜುಳಾ, ಮದನ್‌ಮೋಹನ್, ಸಿ ರವಿ, ಕೆರೆಹಳ್ಳಿಯ ಪುನೀತ್ ಕುಮಾರ್, ಭರತ್, ಹೆಚ್ ಡಿ ಚಂದ್ರಶೇಖರ್, ಜಿ ಎಸ್ ಪುನಿತ್ ಕುಮಾರ್ ರವರು ಇದ್ದು ಅವರನ್ನು ವಶಕ್ಕೆ ತೆಗೆದುಕೊಂಡರು.

ಮನೆಯಲ್ಲಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ನಿರೋದ್ ಪ್ಯಾಕೆಟ್‌ಗಳು, ಮೊಬೈಲ್‌ಗಳು, ಮದ್ಯದ ಬಾಟೆಲ್‌ಗಳು, ಮೋಟಾರ್ ಬೈಕನ್ನು ವಶಕ್ಕೆ ತೆಗೆದುಕೊಂಡರು. ನಂತರ ಎಲ್ಲರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು.

ನಮಗೆ ಹಣದ ಆಸೆ ತೋರಿಸಿ ಪುಸಲಾಯಿಸಿ ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದು, ಮಂಜುಳಾ ಮತ್ತು ಮದನ್ ಮೋಹನ್ ಹಾಗು ಅವರ ಮನೆಯಲ್ಲಿ ವೇಶ್ಯಾಟಿಕೆಯಲ್ಲಿ ತೊಡಗಿದ್ದ ಸಿ ರವಿ, ಪುನೀತ್ ಕುಮಾರ್, ಭರತ್, ಹೆಚ್ ಡಿ ಚಂದ್ರಶೇಖರ್, ಜಿ ಎಸ್ ಪುನಿತ್‌ ಕುಮಾರ್‌ರವರನ್ನು ನೋಡಿದ್ದು ಮತ್ತೆ ನೋಡಿದರೆ ಗುರುತಿಸುತ್ತೇನೆ.

ನನ್ನ ಸಮಕ್ಷಮ
ಓದಿಸಿ ಕೇಳಿದೆ, ಹೇಳಿದಂತೆ ಸರಿಯಿದೆ.

(ಚಾರ್ಜ್‌ಶೀಟ್‌ನಲ್ಲಿರುವ ನೊಂದ ಯುವತಿಯ ಹೇಳಿಕೆಯ ಯಥಾವತ್ತನ್ನು ಅರ್ಥ ವ್ಯತ್ಯಾಸವಾಗದಂತೆ, ಆದರೆ ಕಾನೂನು ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬದಲಾವಣೆ ಮಾಡಿಕೊಂಡು ಅಕ್ಷರ ರೂಪಕ್ಕೆ ಇಳಿಸಲಾಗಿದೆ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತಕ್ಕೆ ಕಾಲಮಿತಿ ರದ್ದುಗೊಳಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಗರ್ಭಪಾತಕ್ಕೆ ಇರುವ ಗರಿಷ್ಠ ಕಾಲಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ...

ಕೇಂದ್ರ ಸರ್ಕಾರಕ್ಕೆ ಕರಾಳ ದಿನ: ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿದ್ದ 'ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ- 2026' (ಡಿಲಿಮಿಟೇಶನ್...

ಹೆಸರು ಬೇಟಿ ಬಚಾವೋ, ರಕ್ಷಣೆ ಅತ್ಯಾಚಾರಿಗೆ; ಇದೇ ಮೋದಿ ಭಾರತ!

'ಬೇಟಿ ಬಚಾವೋ' ಎಂದು ಗಂಟಲು ಹರಿಯುವಂತೆ ಕೂಗುವ ಈ ಬಿಜೆಪಿಗರು ತಮ್ಮದೇ...

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...