‘ಮೋದಿ ಜಪ ಮಾಡಿದ್ರೆ ಪತಿಗೆ ಊಟ ಬಡಿಸಬೇಡಿ’; ಮಹಿಳಾ ಮತದಾರರಿಗೆ ಕೇಜ್ರಿವಾಲ್ ಕರೆ

Date:

Advertisements

“ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಮಹಿಳೆಯರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿ” ಎಂದು ಮನವಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ನಿಮ್ಮ ಪತಿ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪ ಮಾಡಿದರೆ ಅವರಿಗೆ ಊಟ ಬಡಿಸಬೇಡಿ” ಎಂದಿದ್ದಾರೆ.

“ಪ್ರತಿ ಮನೆಯಲ್ಲಿಯೂ ಬಿಜೆಪಿಯ ಬದಲಾಗಿ ಎಎಪಿಗೆ ಬೆಂಬಲ ನೀಡುವಂತೆ ಪುರುಷರನ್ನು ಪ್ರೋತ್ಸಾಹಿಸುವುದು ಮಹಿಳೆಯರ ‘ಜವಾಬ್ದಾರಿ’ಯಾಗಿದೆ” ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದು, “ಹೆಚ್ಚಿನ ಪುರುಷರು ಈಗ ಬರೀ ಮೋದಿ ಜಪ ಮಾಡುತ್ತಿದ್ದಾರೆ. ಅದನ್ನು ಸರಿ ಮಾಡಲು ಮನೆಯಲ್ಲಿರುವ ಮಹಿಳೆಯರಿಗೆ ಮಾತ್ರ ಸಾಧ್ಯ. ನಿಮ್ಮ ಪತಿ ಮೋದಿಗೆ ಮತ ಹಾಕುತ್ತೇನೆ ಎಂದು ಹೇಳಿದರೆ ನೀವು ಪತಿಗೆ ಊಟ ಬಡಿಸಲ್ಲವೆಂದು ಹೇಳಿ,” ಎಂದು ಮಹಿಳೆಯರಿಗೆ ಕರೆ ನೀಡಿದರು.

“ಎಎಪಿಗೆ ಮತ ಹಾಕುವಂತೆ ಪತಿಯಿಂದ ನಿಮ್ಮ ಮೇಲೆ ಆಣೆ ಹಾಕಿಸಿಕೊಳ್ಳಿ. ಎಲ್ಲ ಗಂಡಂದಿರೂ ತಮ್ಮ ಪತ್ನಿಯ ಮಾತನ್ನು ಕೇಳಬೇಕಾಗುತ್ತದೆ. ಹೌದು ಅಲ್ಲವೇ? ಪತ್ನಿಯು ತನ್ನ ಮೇಲೆ ಆಣೆ ಹಾಕಿಸಿ ಏನೇ ಹೇಳಿದರೂ ಆತ ಅದನ್ನು ಪಾಲಿಸಲೇಬೇಕಾಗುತ್ತದೆ” ಎಂದು ಹೇಳಿದರು.

Advertisements

“ನಿಮ್ಮ ಪತಿಯ ಬಳಿ ಕೇಜ್ರಿವಾಲ್ ಉಚಿತ ವಿದ್ಯುತ್ ನೀಡುತ್ತಿದ್ದಾರೆ, ಬಸ್ ಟಿಕೆಟ್‌ಗಳನ್ನು ಉಚಿತ ಮಾಡಿದ್ದಾರೆ ಮತ್ತು ಈಗ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದು ತಿಳಿಸಿ. ಬಿಜೆಪಿ ನಿಮಗೆ ಏನು ಮಾಡಿದೆ? ಬಿಜೆಪಿಗೆ ಯಾಕೆ ಮತ ಹಾಕುತ್ತೀರಾ? ಎಂದು ನಿಮ್ಮ ಪತಿಯನ್ನು ಪ್ರಶ್ನಿಸಿ” ಎಂದಿದ್ದಾರೆ.

ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆ ಅಡಿಯಲ್ಲಿ ಸದೆಹಲಿ ಸರ್ಕಾರವು ಬಜೆಟ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಒಂದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ. ಇದನ್ನು ಬಿಜೆಪಿ ಹಣ ವ್ಯರ್ಥ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ ದೆಹಲಿ ಸಿಎಂ, “ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡುವ ಮೂಲಕ ಕೇಜ್ರಿವಾಲ್ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಅವರು (ಬಿಜೆಪಿ) ಹೇಳುತ್ತದೆ. ನೀವು ಬಂಡವಾಳಶಾಹಿಗಳಿಗೆ ಸಾಲ ಮನ್ನಾವನ್ನು ಮಾಡಿದಾಗ ನಿಮ್ಮ ಹಣ ವ್ಯರ್ಥವಾಗಿಲ್ಲವೇ?” ಎಂದು ಪ್ರಶ್ನಿಸಿದರು.

“ಸಬಲೀಕರಣ ವಿಚಾರದಲ್ಲಿ ಈವರೆಗೆ ಬಿಜೆಪಿ ವಂಚನೆ ಮಾಡಿದೆ. ಈವರೆಗೂ ಅವರು ಮಹಿಳಾ ಸಬಲೀಕರಣ ಆಗಬೇಕು ಎನ್ನುತ್ತಿದ್ದರು, ಮಹಿಳೆಯರನ್ನು ಕೊಂಡಾಡುತ್ತಿದ್ದರು. ಆದರೆ ಈಗ ನಮ್ಮ ಸರ್ಕಾರ ಒಂದು ಸಾವಿರ ರೂಪಾಯಿ ಪ್ರತಿ ತಿಂಗಳು ನೀಡಿದರೆ ಅದನ್ನು ವ್ಯರ್ಥ ಎನ್ನುತ್ತಾರೆ. ಬರಿದಾದ ಪರ್ಸ್‌ನಿಂದಾಗಿ ಸಬಲೀಕರಣ ಆಗಲ್ಲ” ಎಂದು ಕುಟುಕಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X