ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣಾ ದಿನಾಂಕ ವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವೇಳಾಪಟ್ಟಿ ಪ್ರಕಟಿಸಿದರು.
ವೇಳಾಪಟ್ಟಿ:
ಮಧ್ಯ ಪ್ರದೇಶ: ಚುನಾವಣಾ ದಿನಾಂಕ:ನವೆಂಬರ್ 17, ಫಲಿತಾಂಶ: ಡಿಸೆಂಬರ್ 3
ಛತ್ತೀಸ್‌ಗಢ: ಚುನಾವಣಾ ದಿನಾಂಕ: ನವೆಂಬರ್ 7 ಮತ್ತು 17, ಫಲಿತಾಂಶ: ಡಿಸೆಂಬರ್ 3 – ಎರಡು ಹಂತ
ತೆಲಂಗಾಣ: ಚುನಾವಣಾ ದಿನಾಂಕ: ನವೆಂಬರ್ 30, ಫಲಿತಾಂಶ: ಡಿಸೆಂಬರ್ 3
ರಾಜಸ್ಥಾನ: ಚುನಾವಣಾ ದಿನಾಂಕ: ನವೆಂಬರ್ 23, ಫಲಿತಾಂಶ: ಡಿಸೆಂಬರ್ 3
ಮಿಜೋರಾಂ: ಚುನಾವಣಾ ದಿನಾಂಕ: ನವೆಂಬರ್ 7, ಫಲಿತಾಂಶ: ಡಿಸೆಂಬರ್ 3
ಈ ಸುದ್ದಿ ಓದಿದ್ದೀರಾ: ಲಡಾಕ್ ಹಿಲ್ ಕೌನ್ಸಿಲ್ ಚುನಾವಣೆ: ಬಿಜೆಪಿಗೆ ಭಾರೀ ಮುಖಭಂಗ; ಮೈತ್ರಿಗೆ ಭರ್ಜರಿ ಗೆಲುವು
ಛತ್ತೀಸ್‌ಗಢ ಹೊರತುಪಡಿಸಿ ಉಳಿದ 4 ರಾಜ್ಯಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ
ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಹೊಸ ಮತದಾರರಾಗಿದ್ದಾರೆ.
ಚುನಾವಣಾ ಆಯುಕ್ತರು ನೀಡಿರುವ ಮಾಹಿತಿಯಂತೆ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17ಗೆ ಕೊನೆಗೊಳ್ಳಲ್ಲಿದ್ದು, ಛತ್ತೀಸ್‌ಗಢ ವಿಧಾನಸಭೆ ಅವಧಿ ಜನವರಿ 3, ಮಧ್ಯಪ್ರದೇಶ ವಿಧಾನಸಭೆ ಅವಧಿ ಜನವರಿ 8, ರಾಜಸ್ಥಾನ ವಿಧಾನಸಭೆ ಅವಧಿ ಜನವರಿ 14 ಮತ್ತು ತೆಲಂಗಾಣ ವಿಧಾನಸಭೆ ಅವಧಿಯು ಜನವರಿ 18ಕ್ಕೆ ಕೊನೆಗೊಳ್ಳಲಿದೆ.
ಮಧ್ಯಪ್ರದೇಶ – 230 ಸ್ಥಾನಗಳು, ಛತ್ತೀಸ್‌ಗಢದ – 90 ಸ್ಥಾನಗಳು, ರಾಜಸ್ಥಾನ – 200 ಸ್ಥಾನಗಳು, ತೆಲಂಗಾಣ – 119 ಸ್ಥಾನಗಳು ಮತ್ತು ಮಿಜೋರಾಂ – 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮತದಾರರು ಅಕ್ಟೋಬರ್ 17 ರಿಂದ ನವೆಂಬರ್ 30 ರವರೆಗೆ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ನವೀಕರಿಸಬಹುದಾಗಿದೆ.
5 ರಾಜ್ಯಗಳ 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳಿವೆ ಮತ್ತು 1.01 ಲಕ್ಷ ಮತಗಟ್ಟೆಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ. 17,734 ಮಾದರಿ ಮತಗಟ್ಟೆ ಕೇಂದ್ರಗಳು ಇರಲಿವೆ. 621 ಮತಗಟ್ಟೆಗಳನ್ನು ಅಂಗವಿಕಲ ಸಿಬ್ಬಂದಿಯು ನಿರ್ವಹಿಸಲಿದ್ದಾರೆ. 8,192 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ಮತದಾರರು:
ಮಿಜೋರಾಂ – 8.52 ಲಕ್ಷ
ಛತ್ತೀಸ್‌ಗಢ- 2.03 ಕೋಟಿ
ಮಧ್ಯ ಪ್ರದೇಶ- 5.6 ಕೋಟಿ
ರಾಜಸ್ಥಾನ- 5.25 ಕೋಟಿ
ತೆಲಂಗಾಣ- 3.17 ಕೋಟಿ