ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಮಯದಲ್ಲಿ ಮತದಾನಕ್ಕೂ 21 ದಿನಗಳ ಮೊದಲು ಅತ್ಯಂತ ನಿಖರವಾದ ಸಮೀಕ್ಷೆಯ ಫಲಿತಾಂಶಗಳನ್ನು ಈದಿನ.ಕಾಮ್ ಪ್ರಕಟಿಸಿತ್ತು. ಈಗ, ಕರ್ನಾಟಕ ಲೋಕಸಭೆ ಚುನಾವಣೆ 2024ರ ಹೊಸ ಸಮೀಕ್ಷೆಯ ಫಲಿತಾಂಶಗಳನ್ನು ನಿಮ್ಮೆದುರು ಇಡುತ್ತಿದೆ. ವ್ಯವಸ್ಥಿತ ವಿಭಿನ್ನ ಮಾದರಿ (ಸಿಸ್ಟಮ್ಯಾಟಿಕ್ ರ್ಯಾಂಡಮ್ ಮಾದರಿ) ವ್ಯವಸ್ಥೆಯ ಮೂಲಕ ಈದಿನ.ಕಾಮ್ ಮನೆ ಮನೆಗೆ ತೆರಳಿ ಮುಖಾಮುಖಿ ಸಮೀಕ್ಷೆ ನಡೆಸಿ, ನೆಲದ ವಾಸ್ತವತೆಯನ್ನು ಕಂಡುಕೊಂಡಿದೆ.
ಲೋಕಸಭಾ ಚುನಾವಣೆ-2024ರ ಸಮೀಕ್ಷೆಯನ್ನು ಅಭ್ಯರ್ಥಿ ಘೋಷಣೆಗೂ ಮುನ್ನ ಫೆಬ್ರವರಿ 15 ರಿಂದ ಮಾರ್ಚ್ 5 ರವರೆಗೆ ನಡೆಸಲಾಗಿದೆ. 52,678 ಮಾದರಿಗಳೊಂದಿಗೆ ನಡೆದಿರುವ ಈ ಸಮೀಕ್ಷೆ ಕರ್ನಾಟಕದಲ್ಲಿ ನಡೆಸಲಾದ ಅತಿ ದೊಡ್ಡ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. ಮತದಾರರ ಬೇಡಿಕೆ, ಆಭಿಪ್ರಾಯ, ಆಸಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ನಾವು 2024ರ ಫೆಬ್ರವರಿ 15ರಿಂದ ನಿರಂತರವಾಗಿ ಈ ಸಮೀಕ್ಷೆಗಳನ್ನು ನಡೆಸಿದ್ದೇವೆ. ಸಮೀಕ್ಷೆಯನ್ನು ನಾವು ಕಂಡುಕೊಂಡ ಅಂಶಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇವೆ.
ಅಂಶ 1: 2024ರ ಚುನಾವಣೆಯಲ್ಲಿ ಮತ ಹಂಚಿಕೆ
- ನಿರೀಕ್ಷಿತ ಕಾಂಗ್ರೆಸ್ ಮತ ಹಂಚಿಕೆ – 43.77%
- ನಿರೀಕ್ಷಿತ ಬಿಜೆಪಿ ಜೆಡಿಎಸ್ ಮೈತ್ರಿ – 42.35%
ಕಾಂಗ್ರೆಸ್ ವಿಧಾನಸಭೆಯಲ್ಲಿ ತನ್ನ ಮತ ಹಂಚಿಕೆಯನ್ನು ಉಳಿಸಿಕೊಂಡಿದೆ. ಜೊತೆಗೆ, ಲೋಕಸಭಾ ಚುನಾವಣೆಯಲ್ಲಿ ತನ್ನ ಮತಗಳ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಿಕೊಳ್ಳಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಸಾಧನೆಯ ಓಟಕ್ಕೆ ಪೈಪೋಟಿ ನೀಡುತ್ತಿದೆ.
ಅಂಶ 2: ಸ್ಥಾನ ಹಂಚಿಕೆ
- ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು 17
- ಬಿಜೆಪಿ-ಜೆಡಿಎಸ್ ಮೈತ್ರಿಗೆ ನಿರೀಕ್ಷಿತ ಸ್ಥಾನಗಳು 11
- 7 ಸ್ಥಾನಗಳಲ್ಲಿ ‘ನೆಕ್ ಟು ನೆಕ್ ಫೈಟ್’ ನಡೆಯಲಿದೆ
ಅಂಶ 3: ಪ್ರವೃತ್ತಿ ಬದಲಾವಣೆ (Change of trend)
1996ರಿಂದ ಮತ ಗಳಿಕೆಯಲ್ಲಿ ಹಂತಹಂತವಾಗಿ ಏರಿಕೆ ಕಂಡಿರುವ ಬಿಜೆಪಿ, ಈ ಚುನಾವಣೆಯಲ್ಲಿ ಮತಗಳ ಪಾಲನ್ನು ಕಳೆದುಕೊಳ್ಳಲಿದೆ. ಮತಗಳಿಕೆ ಕಡಿಮೆಯಾಗಲಿದೆ.
2019ರ ಲೋಕಸಭಾ ಚುನಾವಣೆ
- ಬಿಜೆಪಿ 51.38%
- ಕಾಂಗ್ರೆಸ್ 31.88%
- ಜೆಡಿಎಸ್ 9.67%
2024 ರ ಲೋಕಸಭೆ ಚುನಾವಣೆಯಲ್ಲಿ
- ಕಾಂಗ್ರೆಸ್‌ನ ನಿರೀಕ್ಷಿತ ಮತ ಹಂಚಿಕೆ – 43.77%
- ಬಿಜೆಪಿ-ಜೆಡಿಎಸ್ ಮೈತ್ರಿ ನಿರೀಕ್ಷಿತ ಮತ ಹಂಚಿಕೆ – 42.35%
ಅಂಶ 4: ಸಮಸ್ಯೆಗಳು
10 ವರ್ಷಗಳ ಮೋದಿ ಆಡಳಿತದಲ್ಲಿ ಸಾಮಾನ್ಯ ಜನರು ಅನುಭವಿಸಿದ ಸಮಸ್ಯೆಗಳು.
- 55% ಸಮೀಕ್ಷೆಗೆ ಒಳಪಟ್ಟವರು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- 18% ಸಮೀಕ್ಷೆಗೆ ಒಳಪಟ್ಟವರು ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ
- 75%ರಷ್ಟು ಜನರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- 02% ಜನರು ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- 63% ಮಂದಿ ಕಲ್ಯಾಣ ಯೋಜನೆಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ.
ಈ ವರದಿ ಓದಿದ್ದೀರಾ?: ಈದಿನ ಸಮೀಕ್ಷೆ– ಭಾಗ 1 | ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ; ಗ್ಯಾರಂಟಿಗಳಿಗೆ ನಮ್ಮ ಓಟು – ಆದರೆ ಮೋದಿ ಸರ್ಕಾರ ಚೆಂದ ಎಂದ ಜನ
ಅಂಶ 5: ರಾಜಕೀಯ ಗ್ರಹಿಕೆಗಳು
ಮೋದಿ ಆಡಳಿತದ ಬಗ್ಗೆ ಜನರಿಗೆ ಗ್ರಹಿಕೆ ಇದೆ.
- ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಮತ್ತು ಖ್ಯಾತಿ ಹೆಚ್ಚಿದೆ ಎಂದು 47.64% ಜನರು ಅಭಿಪ್ರಾಯಪಟ್ಟಿದ್ದಾರೆ.
- 14% ಜನರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪರವಾಗಿ ಮತ ಚಲಾಯಿಸುವುದಾಗಿ ಹೇಳುತ್ತಾರೆ.
- ಕಾಂಗ್ರೆಸ್ ಗ್ಯಾರಂಟಿ ಪರವಾಗಿ ಮತ ಚಲಾಯಿಸುತ್ತೇವೆಂದ ಮಹಿಳೆಯರು 59.28% ಇದೆ.
- 67% ಮಂದಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚು ಸಹಾಯಕವಾಗಿವೆ ಎಂದು ಭಾವಿಸುತ್ತಾರೆ.
- 31% ಕೇಂದ್ರ ಸರ್ಕಾರದ ಯೋಜನೆಗಳು ಹೆಚ್ಚು ಸಹಾಯಕವಾಗಿವೆ ಎಂದು ಭಾವಿಸುತ್ತಾರೆ.
- 31% ಜನರು ಕೇಂದ್ರ ಮತ್ತು ರಾಜ್ಯ ಎರಡೂ ಯೋಜನೆಗಳು ತಮಗೆ ಸಹಾಯ ಮಾಡುತ್ತವೆ ಎಂದು ಭಾವಿಸುತ್ತಾರೆ.
- 8%ರಷ್ಟು ಜನರು ನರೇಂದ್ರ ಮೋದಿಯವರ ಕೆಲಸ ತೃಪ್ತಿಕರವಾಗಿದೆ ಎಂದು ಭಾವಿಸಿದ್ದಾರೆ ಮತ್ತು 33.06% ಜನರು ಮೋದಿಯವರ ಕೆಲಸ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- 19% ಪ್ರತಿಕ್ರಿಯಿಸಿದವರೂ ಮೋದಿ ಮೂರನೇ ಅವಧಿಗೆ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪಣಿ: ಇದು ಅಭ್ಯರ್ಥಿಗಳ ಘೋಷಣೆಗೂ ಮುನ್ನ ನಡೆದ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. ಈ ಸಮೀಕ್ಷೆಯು ಅಭ್ಯರ್ಥಿಗಳು, ಸಮಸ್ಯೆಗಳು ಮತ್ತು ಪಕ್ಷಗಳ ಪ್ರಚಾರ ರೀತಿ ಮತ್ತು ನಾಗರಿಕ ಸಮಾಜದಲ್ಲಿನ ಹಿಡಿತವನ್ನು ಬದಲಾಯಿಸಬಹುದು.