ಈದಿನ ಮೆಗಾ ಸರ್ವೆ–1 | ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 17 ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಗೆ 11 ಸ್ಥಾನ; 7 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ

Date:

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಮಯದಲ್ಲಿ ಮತದಾನಕ್ಕೂ 21 ದಿನಗಳ ಮೊದಲು ಅತ್ಯಂತ ನಿಖರವಾದ ಸಮೀಕ್ಷೆಯ ಫಲಿತಾಂಶಗಳನ್ನು ಈದಿನ.ಕಾಮ್ ಪ್ರಕಟಿಸಿತ್ತು. ಈಗ, ಕರ್ನಾಟಕ ಲೋಕಸಭೆ ಚುನಾವಣೆ 2024ರ ಹೊಸ ಸಮೀಕ್ಷೆಯ ಫಲಿತಾಂಶಗಳನ್ನು ನಿಮ್ಮೆದುರು ಇಡುತ್ತಿದೆ. ವ್ಯವಸ್ಥಿತ ವಿಭಿನ್ನ ಮಾದರಿ (ಸಿಸ್ಟಮ್ಯಾಟಿಕ್ ರ್ಯಾಂಡಮ್ ಮಾದರಿ) ವ್ಯವಸ್ಥೆಯ ಮೂಲಕ ಈದಿನ.ಕಾಮ್ ಮನೆ ಮನೆಗೆ ತೆರಳಿ ಮುಖಾಮುಖಿ ಸಮೀಕ್ಷೆ ನಡೆಸಿ, ನೆಲದ ವಾಸ್ತವತೆಯನ್ನು ಕಂಡುಕೊಂಡಿದೆ.

- Advertisement -

ಲೋಕಸಭಾ ಚುನಾವಣೆ-2024ರ ಸಮೀಕ್ಷೆಯನ್ನು ಅಭ್ಯರ್ಥಿ ಘೋಷಣೆಗೂ ಮುನ್ನ ಫೆಬ್ರವರಿ 15 ರಿಂದ ಮಾರ್ಚ್ 5 ರವರೆಗೆ ನಡೆಸಲಾಗಿದೆ. 52,678 ಮಾದರಿಗಳೊಂದಿಗೆ ನಡೆದಿರುವ ಈ ಸಮೀಕ್ಷೆ ಕರ್ನಾಟಕದಲ್ಲಿ ನಡೆಸಲಾದ ಅತಿ ದೊಡ್ಡ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. ಮತದಾರರ ಬೇಡಿಕೆ, ಆಭಿಪ್ರಾಯ, ಆಸಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ನಾವು 2024ರ ಫೆಬ್ರವರಿ 15ರಿಂದ ನಿರಂತರವಾಗಿ ಈ ಸಮೀಕ್ಷೆಗಳನ್ನು ನಡೆಸಿದ್ದೇವೆ. ಸಮೀಕ್ಷೆಯನ್ನು ನಾವು ಕಂಡುಕೊಂಡ ಅಂಶಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...
ಅಂಶ 1: 2024ರ ಚುನಾವಣೆಯಲ್ಲಿ ಮತ ಹಂಚಿಕೆ
  • ನಿರೀಕ್ಷಿತ ಕಾಂಗ್ರೆಸ್ ಮತ ಹಂಚಿಕೆ – 43.77%
  • ನಿರೀಕ್ಷಿತ ಬಿಜೆಪಿ ಜೆಡಿಎಸ್ ಮೈತ್ರಿ – 42.35%

WhatsApp Image 2024 03 19 at 1.22.03 PM 1

ಕಾಂಗ್ರೆಸ್ ವಿಧಾನಸಭೆಯಲ್ಲಿ ತನ್ನ ಮತ ಹಂಚಿಕೆಯನ್ನು ಉಳಿಸಿಕೊಂಡಿದೆ. ಜೊತೆಗೆ, ಲೋಕಸಭಾ ಚುನಾವಣೆಯಲ್ಲಿ ತನ್ನ ಮತಗಳ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಿಕೊಳ್ಳಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಸಾಧನೆಯ ಓಟಕ್ಕೆ ಪೈಪೋಟಿ ನೀಡುತ್ತಿದೆ.

ಅಂಶ 2: ಸ್ಥಾನ ಹಂಚಿಕೆ
  • ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು 17
  • ಬಿಜೆಪಿ-ಜೆಡಿಎಸ್ ಮೈತ್ರಿಗೆ ನಿರೀಕ್ಷಿತ ಸ್ಥಾನಗಳು 11
  • 7 ಸ್ಥಾನಗಳಲ್ಲಿ ‘ನೆಕ್ ಟು ನೆಕ್ ಫೈಟ್’ ನಡೆಯಲಿದೆ
WhatsApp Image 2024 03 19 at 1.22.03 PM
ಅಂಶ 3: ಪ್ರವೃತ್ತಿ ಬದಲಾವಣೆ (Change of trend)

1996ರಿಂದ ಮತ ಗಳಿಕೆಯಲ್ಲಿ ಹಂತಹಂತವಾಗಿ ಏರಿಕೆ ಕಂಡಿರುವ ಬಿಜೆಪಿ, ಈ ಚುನಾವಣೆಯಲ್ಲಿ ಮತಗಳ ಪಾಲನ್ನು ಕಳೆದುಕೊಳ್ಳಲಿದೆ. ಮತಗಳಿಕೆ ಕಡಿಮೆಯಾಗಲಿದೆ.

2019ರ ಲೋಕಸಭಾ ಚುನಾವಣೆ

  • ಬಿಜೆಪಿ 51.38%
  • ಕಾಂಗ್ರೆಸ್‌ 31.88%
  • ಜೆಡಿಎಸ್ 9.67%

2024 ರ ಲೋಕಸಭೆ ಚುನಾವಣೆಯಲ್ಲಿ

  • ಕಾಂಗ್ರೆಸ್‌ನ ನಿರೀಕ್ಷಿತ ಮತ ಹಂಚಿಕೆ – 43.77%
  • ಬಿಜೆಪಿ-ಜೆಡಿಎಸ್‌ ಮೈತ್ರಿ ನಿರೀಕ್ಷಿತ ಮತ ಹಂಚಿಕೆ – 42.35%
ಅಂಶ 4: ಸಮಸ್ಯೆಗಳು

10 ವರ್ಷಗಳ ಮೋದಿ ಆಡಳಿತದಲ್ಲಿ ಸಾಮಾನ್ಯ ಜನರು ಅನುಭವಿಸಿದ ಸಮಸ್ಯೆಗಳು.

  • 55% ಸಮೀಕ್ಷೆಗೆ ಒಳಪಟ್ಟವರು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
  • 18% ಸಮೀಕ್ಷೆಗೆ ಒಳಪಟ್ಟವರು ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ
  • 75%ರಷ್ಟು ಜನರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
  • 02% ಜನರು ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
  • 63% ಮಂದಿ ಕಲ್ಯಾಣ ಯೋಜನೆಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ.

 ಈ ವರದಿ ಓದಿದ್ದೀರಾ?: ಈದಿನ ಸಮೀಕ್ಷೆ– ಭಾಗ 1 | ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ; ಗ್ಯಾರಂಟಿಗಳಿಗೆ ನಮ್ಮ ಓಟು – ಆದರೆ ಮೋದಿ ಸರ್ಕಾರ ಚೆಂದ ಎಂದ ಜನ

ಅಂಶ 5: ರಾಜಕೀಯ ಗ್ರಹಿಕೆಗಳು

ಮೋದಿ ಆಡಳಿತದ ಬಗ್ಗೆ ಜನರಿಗೆ ಗ್ರಹಿಕೆ ಇದೆ.

  • ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಮತ್ತು ಖ್ಯಾತಿ ಹೆಚ್ಚಿದೆ ಎಂದು 47.64% ಜನರು ಅಭಿಪ್ರಾಯಪಟ್ಟಿದ್ದಾರೆ.
  • 14% ಜನರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪರವಾಗಿ ಮತ ಚಲಾಯಿಸುವುದಾಗಿ ಹೇಳುತ್ತಾರೆ.
  • ಕಾಂಗ್ರೆಸ್‌ ಗ್ಯಾರಂಟಿ ಪರವಾಗಿ ಮತ ಚಲಾಯಿಸುತ್ತೇವೆಂದ ಮಹಿಳೆಯರು 59.28% ಇದೆ.
  • 67% ಮಂದಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚು ಸಹಾಯಕವಾಗಿವೆ ಎಂದು ಭಾವಿಸುತ್ತಾರೆ.
  • 31% ಕೇಂದ್ರ ಸರ್ಕಾರದ ಯೋಜನೆಗಳು ಹೆಚ್ಚು ಸಹಾಯಕವಾಗಿವೆ ಎಂದು ಭಾವಿಸುತ್ತಾರೆ.
  • 31% ಜನರು ಕೇಂದ್ರ ಮತ್ತು ರಾಜ್ಯ ಎರಡೂ ಯೋಜನೆಗಳು ತಮಗೆ ಸಹಾಯ ಮಾಡುತ್ತವೆ ಎಂದು ಭಾವಿಸುತ್ತಾರೆ.
  • 8%ರಷ್ಟು ಜನರು ನರೇಂದ್ರ ಮೋದಿಯವರ ಕೆಲಸ ತೃಪ್ತಿಕರವಾಗಿದೆ ಎಂದು ಭಾವಿಸಿದ್ದಾರೆ ಮತ್ತು 33.06% ಜನರು ಮೋದಿಯವರ ಕೆಲಸ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
  • 19% ಪ್ರತಿಕ್ರಿಯಿಸಿದವರೂ ಮೋದಿ ಮೂರನೇ ಅವಧಿಗೆ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿಪ್ಪಣಿ: ಇದು ಅಭ್ಯರ್ಥಿಗಳ ಘೋಷಣೆಗೂ ಮುನ್ನ ನಡೆದ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. ಈ ಸಮೀಕ್ಷೆಯು ಅಭ್ಯರ್ಥಿಗಳು, ಸಮಸ್ಯೆಗಳು ಮತ್ತು ಪಕ್ಷಗಳ ಪ್ರಚಾರ ರೀತಿ ಮತ್ತು ನಾಗರಿಕ ಸಮಾಜದಲ್ಲಿನ ಹಿಡಿತವನ್ನು ಬದಲಾಯಿಸಬಹುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...