ಕರ್ನಾಟಕದ ಚುನಾವಣೆಯಲ್ಲಿ ಗ್ಯಾರಂಟಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತ್ತು. ದೇಶಾದ್ಯಂತ ನಮ್ಮ ಗ್ಯಾರಂಟಿ ಕೆಲಸ ಮಾಡುತ್ತದೆ ಎಂದು ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅದು ಕೈ ಹಿಡಿಯಲಿಲ್ಲ. ಮೋದಿ ನೀಡಿದ ಗ್ಯಾರಂಟಿಗಳನ್ನು ನಂಬಿದ್ದು, ಅಧಿಕಾರ ಹಿಡಿಯಲು ಹೊರಟಿದೆ.
ಛತ್ತೀಸ್ಘಡದಲ್ಲಿ ಒಟ್ಟು 90 ಸ್ಥಾನಗಳಿದ್ದು, ಸರಳ ಬಹುಮತಕ್ಕೆ 46 ಸ್ಥಾನಗಳನ್ನು ಗೆಲ್ಲಬೇಕಿತ್ತು. ಸದ್ಯದ ಟ್ರೆಂಡ್ನಲ್ಲಿ ಬಿಜೆಪಿ 53 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಧಿಕಾರರೂಢ ಕಾಂಗ್ರೆಸ್ ಕೇವಲ 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
#WATCH | BJP workers celebrate at the party headquarters in Delhi as the party leads in Madhya Pradesh, Chhattisgarh and Rajasthan elections.#ElectionResults pic.twitter.com/ePX623KTjz
— ANI (@ANI) December 3, 2023
ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ರಮಣ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಹಾಗೂ ಗ್ಯಾರಂಟಿಗಳ ಮೇಲೆ ಛತ್ತೀಸ್ಘಡದ ಜನರು ನಂಬಿಕೆ ಇರಿಸಿದ್ದಾರೆ. ಕಾಂಗ್ರೆಸ್ನ ಸಿಎಂ ಭೂಪೇಶ್ ಬಘೇಲ್ ಅವರ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದು ಕಾರ್ಯಕರ್ತರ ಗೆಲವು’ ಎಂದು ಬಣ್ಣಿಸಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಂಗ್, “ಇದು ಪಕ್ಷದ ಹೈಕಮಾಂಡ್ ನಿರ್ಧಾರ. ಪಕ್ಷ ನನಗೆ ಯಾವುದೇ ಕೆಲಸ ನೀಡಿದರೂ ನಾನು ಅದನ್ನು ನಿರ್ವಹಿಸುತ್ತೇನೆ” ಎಂದು ತಿಳಿಸಿದ್ದಾರೆ.
ಛತ್ತೀಸ್ಘಡ ಬಿಜೆಪಿ ಅಧ್ಯಕ್ಷ ಅರುಣ್ ಸಾವೋ, “ಕಾಂಗ್ರೆಸ್ನ ದುರಾಡಳಿತ ಕೊನೆಗೊಳ್ಳಲಿದೆ. ಕಮಲ ಅರಳಲಿದೆ. ಛತ್ತೀಸ್ಗಢವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಸರ್ಕಾರ ರಚಿಸುತ್ತೇವೆ” ಎಂದು ತಿಳಿಸಿದ್ದಾರೆ.
#WATCH | Chhattisgarh BJP President Arun Sao says, “The misgovernance of Congress is about to end. The lotus will bloom. Chhattisgarh will move forward on the path of development. Chhattisgarh will get the guarantee of PM Modi. The trends will be converted into reality and we… pic.twitter.com/USiokGjMWy
— ANI (@ANI) December 3, 2023
ಛತ್ತೀಸ್ಘಢದಲ್ಲಿ ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ಗೆ ಸ್ಪಷ್ಟವಾದ ಗೆಲುವು ಒಲಿಯಲಿದೆ ಎಂದು ತಿಳಿಸಿದ್ದವು. ಆದರೆ ಎಕ್ಸಿಟ್ ಪೋಲ್ ಸದ್ಯ ಉಲ್ಟಾ ಹೊಡೆದಿದ್ದು ಬಿಜೆಪಿಯು ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಛತ್ತೀಸ್ಘಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 68 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಪಡೆದಿತ್ತು. ಬಿಜೆಪಿ ಕೇವಲ 15 ಕ್ಷೇತ್ರಗಳ ಜಯಗಳಿಸಿ ಹೀನಾಯ ಸೋಲು ಕಂಡಿತ್ತು.