ಚುನಾವಣಾ ಬಾಂಡ್ | ಬಾಂಡ್‌ಗಳ ಖರೀದಿ ಮೊತ್ತಕ್ಕಿಂತ ನಗದೀಕರಿಸಿದ ಹಣದ ಮೊತ್ತವೇ ಹೆಚ್ಚು; ಯಾಕೆ ಈ ವ್ಯತ್ಯಾಸ?

Date:

Advertisements

ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಕಂಪನಿಗಳು ಖರೀದಿಸಿ ಚುನಾವಣಾ ಬಾಂಡ್‌ಗಳ ಮೊತ್ತಕ್ಕಿಂತ ರಾಜಕೀಯ ಪಕ್ಷಗಳು ನಗದೀಕರಿಸಿದ ಹಣದ ಮೊತ್ತವೇ ಹೆಚ್ಚಾಗಿದೆ. ಎಲ್ಲ ಕಂಪನಿಗಳು ಮತ್ತು ವ್ಯಕ್ತಿಗಳು ಖರೀದಿಸಿದ ಚುನಾವಣಾ ಬಾಂಡ್‌ಗಳ ಮೊತ್ತ 12,155,51,32,000 ರೂ. (12,155 ಕೋಟಿ ರೂ.) ಆಗಿದೆ. ರಾಜಕೀಯ ಪಕ್ಷಗಳು ನಗದೀಕರಿಸಿದ ಒಟ್ಟು ಮೊತ್ತ 12,769,08,93,000 ರೂ. (12,769 ಕೋಟಿ ರೂ.ಗಿಂತ ಹೆಚ್ಚು). ಅಂದರೆ, ಎಲ್ಲ ಕಂಪನಿಗಳು ಖರೀದಿಸಿದ ಚುನಾವಣಾ ಬಾಂಡ್‌ಗಳ ಒಟ್ಟು ಮೊತ್ತಕ್ಕಿಂತ ಪಕ್ಷಗಳು ನಗದೀಕರಿಸಿದ ಮೊತ್ತವು ಸುಮಾರು 600 ಕೋಟಿ ರೂ. ಹೆಚ್ಚಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2019ರ ಏಪ್ರಿಲ್ 12ರಿಂದ ಪ್ರಾರಂಭವಾಗುವ ಡೇಟಾವನ್ನು ಮಾತ್ರ ಬಿಡುಗಡೆ ಮಾಡಿದೆ. ಹೀಗಾಗಿಯೇ ಈ ವ್ಯತ್ಯಾಸವಾಗಿರಬಹುದು ಎಂದು ‘ಟ್ರಾನ್ಸ್‌ಪೆರೆನ್ಸಿ ರೈಟ್ಸ್‌’ (ಪಾರದರ್ಶಕತೆ ಹಕ್ಕುಗಳ) ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.

”ಚುನಾವಣಾ ಬಾಂಡ್‌ಗಳು ಖರೀದಿಸಿದ ದಿನಾಂಕದಿಂದ ಕೇವಲ 15 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಆದ್ದರಿಂದ, ಏಪ್ರಿಲ್ ಆರಂಭದಲ್ಲಿ ಖರೀದಿಸಿದ ಬಾಂಡ್‌ಗಳಲ್ಲಿ ಕೆಲವನ್ನು ಏಪ್ರಿಲ್ 12ರ ನಂತರ ಪಕ್ಷಗಳು ನಗದೀಕರಿಸಿರಬಹುದು. ಹೀಗಾಗಿ, ನಗದೀಕರಿಸಿದ ಡೇಟಾ ಲಭ್ಯವಾಗಿದೆ. ಆದರೆ, ಕೆಲವು ಏಪ್ರಿಲ್ 12ಕ್ಕಿಂತ ಮುಂಚೆ ಮಾರಾಟವಾದ ಡೇಟಾವನ್ನು ಎಸ್‌ಬಿಐ ಬಿಡುಗಡೆ ಮಾಡಿಲ್ಲ” ಎಂದು ಅವರು ಊಹಿಸಿದ್ದಾರೆ.

Advertisements

ಆದಾಗ್ಯೂ, ಈ ವ್ಯತ್ಯಾಸವನ್ನು ಅಂಜಲಿ ಅವರ ಊಹೆಯಂತೆ ವಿವರಿಸಬಹುದೇ ಎಂಬುದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಸ್ಪಷ್ಟಪಡಿಸಬೇಕಾಗುತ್ತದೆ. ಅದೂ, ಚುನಾವಣಾ ಬಾಂಡ್‌ಗಳ ಯೋಜನೆಯ ಮೊದಲ ವರ್ಷದಲ್ಲಿ ಮಾರಾಟ ಮಾಡಿ, ಮಾಹಿತಿಯಲ್ಲಿ ಸಿಗದೇ ಇರುವ ಡೇಟಾವನ್ನು ಎಸ್‌ಬಿಐ ಬಿಡುಗಡೆ ಮಾಡುವ ಮೂಲಕವೇ ಆ ಸ್ಪಷ್ಟತೆ ನೀಡಲು ಸಾಧ್ಯ.

ಆದಾಗ್ಯೂ, ಎಸ್‌ಬಿಐ ಎರಡು ಪ್ರತ್ಯೇಕ ಪಟ್ಟಿಗಳನ್ನು ಒದಗಿಸಿರುವುದರಿಂದ – ಬಾಂಡ್‌ಗಳನ್ನು ಖರೀದಿಸಿದವರಲ್ಲಿ ಯಾರು ಯಾವ ಪಕ್ಷಕ್ಕೆ ಬಾಂಡ್‌ಗಳನ್ನು ನೀಡಿದ್ದಾರೆ. ಯಾವ ಪಕ್ಷ ಯಾವ ಕಂಪನಿಯಿಂದ ಪಡೆದ ಚುನಾವಣಾ ಬಾಂಡ್‌ಅನ್ನು ನಗದೀಕರಿಸಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ, ಅತೀ ಹೆಚ್ಚು ಚುನಾವಣಾ ಬಾಂಡ್‌ಗಳನ್ನು ಪಡೆದು, ಹೆಚ್ಚು ಹಣವನ್ನು ನಗದೀಕರಿಸಿರುವ ಪಕ್ಷ ಆಡಳಿತಾರೂಢ ಬಿಜೆಪಿಯಾಗಿದೆ. ಬಿಜೆಪಿಯು ಬಯೋಬ್ಬರಿ 6,060.50 ಕೋಟಿ ರೂ. ಅಂದರೆ, ಚುನಾವನಾ ಬಾಂಡ್‌ಗಳ ಒಟ್ಟು ಮೊತ್ತದಲ್ಲಿ ಶೇ. 47.46ರಷ್ಟು ಹಣವನ್ನು ಪಡೆದಿದೆ.

ಹೀಗಾಗಿಯೇ, ಬಿಜೆಪಿಗೆ ಯಾವ ಕಂಪನಿ ಎಷ್ಟು ಹಣವನ್ನು ನೀಡಿದೆ ಎಂಬುದು ಸ್ಪಷ್ಟವಾಗಿ ತಿಳಿಯಬಾರದು ಎಂಬ ಕಾರಣಕ್ಕಾಗಿಯೇ, ಈ ರೀತಿ ಎರಡು ಪ್ರತ್ಯೇಕ ಪಟ್ಟಿಗಳನ್ನು ಬಿಡುಗಡೆ ಮಾಡಿ, ಮತದಾರರನ್ನು ದಾರಿ ತಪ್ಪಿಸಿರುವ ಸಾಧ್ಯತೆಗಳೂ ಇವೆ ಎಂದು ಆರೋಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು 6,060 ಕೋಟಿ ದೇಣಿಗೆ, ಜೆಡಿಎಸ್‌ಗೂ ಪಾಲು

ಸರ್ಕಾರ ಅಥವಾ ಪಕ್ಷಗಳು ಮತ್ತು ವ್ಯಾಪಾರ ಸಂಸ್ಥೆಗಳು ಅಥವಾ ಕಾರ್ಪೊರೇಟ್ ಕಂಪನಿಗಳ ನಡುವೆ ಯಾವುದೇ ಕೊಡು-ಪಡೆದುಕೊ (ಕ್ವಿಡ್ ಪ್ರೊ ಕೋಆಪರೇಷನ್‌) ಸಂಬಂಧಗಳಿವೆಯೇ ಎಂಬುದು ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X