- ಗಣೇಶ ಚತುರ್ಥಿಯಂದು ಚಾಮರಾಜಪೇಟೆಯ ಆನಂದಪುರಂ ಕೊಳೆಗೇರಿಯಲ್ಲಿ ನಡೆದಿದ್ದ ದುರಂತ
- ವೈಯಕ್ತಿಕವಾಗಿ ತಲಾ ಎರಡು ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ.ಪರಿಹಾರ ಹಣ ವಿತರಣೆ
ಚಾಮರಾಜಪೇಟೆಯ ಆನಂದಪುರಂ ಕೊಳೆಗೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಸಿಲಿಂಡರ್ ಸ್ಫೋಟ ಘಟನೆಯಿಂದಾಗಿ ಹಾನಿಗೊಳಗಾದ ಐದು ಸಂತ್ರಸ್ತ ಕುಟುಂಬಗಳಿಗೆ ಸಚಿವ ಝಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ ತಲಾ ಎರಡು ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ.ಪರಿಹಾರ ವಿತರಿಸಿದರು.

ಗಣೇಶ ಚತುರ್ಥಿ ದಿನದಂದೇ ಆನಂದಪುರಂ ಕೊಳೆಗೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಬೆಂಕಿಯ ಕೆನ್ನಾಲಿಗೆಗೆ ಸುಮಾರು 8 ಮನೆಗಳು ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು.
ವಿನಾಯಕ ಚಿತ್ರಮಂದಿರರದ ಬಳಿಯ ಗೋದಾಮಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿತ್ತು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅವಘಡ ನಡೆಯದಂತೆ ತಡೆದಿದ್ದರು.
