‘ನಾನು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಎಂದು ಸಣ್ಣ ತೀರ್ಮಾನ ಮಾಡಿದ್ದೇನೆ’ ಎಂದಿರುವ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಹೆಚ್ಚಿನ ಲಾಭ ಪಡೆದುಕೊಂಡಿದ್ದೇನೆ. ಇದೀಗ ಹೆಚ್ಚಿನ ಅಸೆ ಏನೂ ಇಲ್ಲ. ಚುನಾವಣಾ ರಾಜಕೀಯದಲ್ಲಿ ಮುಂದುವರೆಯದಿರಲು ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
ರಾಜ್ಯದ ಸಿಎಂ, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದೇನೆ. 10 ವರ್ಷ ಶಾಸಕ, 20 ವರ್ಷ ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.
‘ಮೂವತ್ತು ವರ್ಷ ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಫಲಾನುಭವಿ. 10 ವರ್ಷ ಶಾಸಕ, 20 ವರ್ಷ ಸಂಸದ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, ಐದು ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ ಏಳು ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿಯಾಗಿದ್ದಾನೆ. ಇಷ್ಟು ಸಿಕ್ಕಿ ಕೂಡ ಸಂತೋಷ ಪಡದ ರಾಜಕಾರಣಿ, ಅವನು ರಾಜಕಾರಣಿ ಅಲ್ಲ. ಅವನನ್ನು ಸ್ವಾರ್ಥಿ ಎಂದು ತಿಳಿದುಕೊಳ್ಳುತ್ತೇನೆ’ ಎನ್ನುವ ಮೂಲಕ ಸಕ್ರಿಯ ರಾಜಕಾರಣದಿಂದ ದೂರವುಳಿಯುವ ಬಗ್ಗೆ ಡಿ.ವಿ ಸದಾನಂದ ಗೌಡ ಮಾತನಾಡಿದ್ದಾರೆ.
ಎಲ್ಲಾ ರಾಜಕೀಯ ಪಕ್ಷದಲ್ಲಿ ನಾನು ಸತ್ಯಹರಿಶ್ಚಂದ್ರ ಅಂತ ಹೇಳಿಕೊಂಡರು ಕೂಡ ಹತ್ತು ಪರ್ಸೆಂಟ್ ಜನ ಅಧಿಕಾರಕ್ಕಾಗಿ ಜಂಪ್ ಮಾಡುವವರಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುವವರಿದ್ದಾರೆ. ಏನೂ ಇಲ್ಲದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ಅವರ ಜೊತೆಗೂ ಹೋಗುವವರಿದ್ದಾರೆ. ಈ ರೀತಿ ಹೋಗುವಂತಹವರು ಎಲ್ಲ ಪೊಲಿಟಿಕಲ್ ಪಾರ್ಟಿಯಲ್ಲಿದ್ದಾರೆ. ಅದರಿಂದ ನಮ್ಮ ಪಾರ್ಟಿ ಕೂಡ ಹೊರತಾಗಿಲ್ಲ ಎಂದು ಇದೇ ವೇಳೆ ಮಾಜಿ ಸಿಎಂ ತಿಳಿಸಿದ್ದಾರೆ.
2021ರಲ್ಲಿ ಕೇಂದ್ರ ಸಚಿವರ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಡಿ.ವಿ ಸದಾನಂದ ಗೌಡ ಕೇಂದ್ರ ಸಚಿವ ಸ್ಥಾನ ತ್ಯಜಿಸಿದ್ದರು. ಪ್ರಸ್ತುತ ಅವರು ಬೆಂಗಳೂರು ಉತ್ತರ ಕ್ಷೇತ್ರದ ಸಂಸದನಾಗಿ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಎಲ್ಲವನ್ನೂ ಈ ರಾಜ್ಯದ ಜನತೆ ಕೊಟ್ಟ ಆಶೀರ್ವಾದದಿಂದ ಈ ಪಕ್ಷ ನಿಮಗೆ ಜವಾಬ್ದಾರಿ ನೀಡಿತ್ತು. ನಿಮಗೆ ಪಕ್ಷ ಒಂದು ಗೌರವಪೂರ್ವಕ ಬೀಳ್ಕೊಡುಗೆ ನೀಡಿದ್ದಾರಾ. ಎಲ್ಲಾ ಪಕ್ಷಗಳ ರಾಜಕಾರಣಿಗಳು ದೆಹಲಿಯ ಗುಲಾಮರಂತೆ ನಡೆದು ಕೊಳ್ಳುವುದು ಕನ್ನಡ ಜನತೆಗೆ ಬಗೆಯುವ ದ್ರೋಹ.
ನಿವೃತ್ತಿ ಜೀವನ ಆರೋಗ್ಯಪೂರ್ಣ ಇರಲೆಂದು ಹಾರೈಸುತ್ತೇನೆ.