ದೇವೇಗೌಡರು ಮೇ 18 ರಂದು ಜನ್ಮದಿನ ಆಚರಿಸಿಕೊಳ್ಳುತ್ತಾರೆ. 2024ರ ಮೇ 18ಕ್ಕೆ ಅವರು 92ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಈ ಇಳಿವಯಸ್ಸಿನಲ್ಲೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೂಡ ನಡೆಸಿದ್ದರು.
ಆದರೆ, ಈಗ ಮೊಮ್ಮಗ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಮತ್ತು ಮಗ ಎಚ್ ಡಿ ರೇವಣ್ಣ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡು ಕುಟುಂಬದಲ್ಲಿ ದೊಡ್ಡ ಕೋಲಾಹಲವೇ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸುವ ಮನಸ್ಸು ದೇವೇಗೌಡರು ಮಾಡಿಲ್ಲ. ಹೀಗಾಗಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಯಾರೂ ಮನೆ ಹತ್ತಿರ ಬರಬೇಡಿ ಎಂದು ದೇವೇಗೌಡರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
Former Prime Minister, JDS Leader @H_D_Devegowda Decided to Not To Celebrate his Birthday on May 18
He will turn 92 on May 18, 2024.#prajwalrevannascandal #HDDevegowda pic.twitter.com/tNCbarWRpY
— Irshad Venur ಇರ್ಷಾದ್ ವೇಣೂರು (@muhammadirshad6) May 16, 2024
ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ, “ಅಭಿಮಾನಿಗಳು ಹಾಗೂ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರಲ್ಲಿ ನನ್ನ ವಿನಂತಿ. ಇದೇ ತಿಂಗಳ 18 ರಂದು ನಾನು 91 ವರ್ಷ ಪೂರೈಸಿ 92ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಾರಣಾಂತರಗಳಿಂದ ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಸಕ್ತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೋರುತ್ತೇನೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? 300ಕ್ಕೂ ಹೆಚ್ಚು ಸ್ಥಾನ ಗೆದ್ದು ‘ಇಂಡಿಯಾ ಮೈತ್ರಿಕೂಟ’ ಸರ್ಕಾರ ರಚಿಸಲಿದೆ: ಲಕ್ನೋದಲ್ಲಿ ಡಿಸಿಎಂ ಡಿಕೆಶಿ ವಿಶ್ವಾಸ
ಮೊಮ್ಮಗನ ಕೇಸ್ ಹೊರಬಿದ್ದ ಬಳಿಕ ದೇವೇಗೌಡರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಘಟನೆ ಅವರಿಗೆ ತೀವ್ರ ನೋವುಂಟು ಮಾಡಿದೆ ಎನ್ನಲಾಗಿದೆ. ಈ ನಡುವೆ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಪತ್ರಕರ್ತರೋರ್ವರು ದೇವೇಗೌಡರು ಇತ್ತೀಚೆಗೆ ಸಣ್ಣ ಪ್ರಮಾಣದಲ್ಲಿ ಗಡ್ಡ ಬೆಳೆಸಿದ್ದನ್ನು ಗಮನಿಸಿ, ಟ್ವೀಟ್ ಮಾಡಿದ್ದರು.
We always respectfully call the former PM, @JanataDal_S supreme leader @H_D_Devegowda sir as appaji, Doddavru in #KarnatakaPolitics
I think this is the time I’m witnessing his beard which I never saw..he will be in clean shave all the time …disheartening. pic.twitter.com/wFZJZtJ7F7
— Madhu M (@MadhunaikBunty) May 12, 2024
ಈ ಟ್ವೀಟ್ನಲ್ಲಿ, ನಾನು ಯಾವಾಗಲೂ ಮಾಜಿ ಪ್ರಧಾನಿಯನ್ನು ‘ಅಪ್ಪಾಜಿ, ದೊಡ್ಡವರು’ ಎಂದು ಗೌರವದಿಂದ ಕರೆಯುತ್ತೇನೆ. ದೇವೇಗೌಡರು ಯಾವಾಗಲೂ ‘ಕ್ಲೀನ್ ಶೇವ್’ ಮಾಡಿಕೊಳ್ಳುತ್ತಿದ್ದರು. ಅವರ ಮುಖದಲ್ಲಿ ಈವರೆಗೆ ಈ ರೀತಿ ಪುಟ್ಟ ಪ್ರಮಾಣದಲ್ಲೂ ಕೂಡ ಗಡ್ಡ ಕಂಡವನಲ್ಲ. ಈ ಫೋಟೊ ನೋಡುವಾಗ ಬೇಸರವಾಗುತ್ತದೆ” ಎಂದು ತಿಳಿಸಿದ್ದರು.
