ಮೋದಿ ಜಾಗಕ್ಕೆ ಗಡ್ಕರಿ?; ಕರಣ್  ಥಾಪರ್ ಸಂದರ್ಶನದಲ್ಲಿ ಕ್ರಿಸ್ಟೋಫೆ ಜಫರ್ಲೋ ತೆರೆದಿಟ್ಟ ಒಳನೋಟಗಳು

Date:

Advertisements
ಮೋದಿಯವರು ಈ ಸರ್ಕಾರವನ್ನು ಉಳಿಸಿಕೊಳ್ಳಲಾರರು ಎನಿಸಿದರೆ, ಪರಸ್ಪರ ಗೌರವಾದರ ತೋರಿ ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಅವರಂತಹ ವ್ಯಕ್ತಿಯನ್ನು ಬಿಜೆಪಿ ಮತ್ತು ಆರೆಸ್ಸೆಸ್ ಹುಡುಕಲಿದೆ.


ಸಮ್ಮಿಶ್ರ
ಸರ್ಕಾರದ ಮಿತ್ರಪಕ್ಷಗಳನ್ನು ನರೇಂದ್ರ ಮೋದಿಯವರು ಜೊತೆಗೆ ಕೊಂಡೊಯ್ಯದಿದ್ದರೆ ಅವರ ಜಾಗಕ್ಕೆ ನಿತಿನ್ ಗಡ್ಕರಿ ಅವರಂತಹ ನಾಯಕನನ್ನು ತರಲಿದೆ ಆರೆಸ್ಸೆಸ್ ಎನ್ನುತ್ತಾರೆ ರಾಜ್ಯಶಾಸ್ತ್ರ ಪರಿಣಿತ ಕ್ರಿಸ್ಟೋಫೆ ಜಫರ್ಲೊ.

ವಿಶೇಷವಾಗಿ ಭಾರತ ರಾಜಕಾರಣದ ಆಳ ಅಧ್ಯಯನ ನಡೆಸಿರುವವರು ಜಫರ್ಲೊ. ‘ದಿ ವೈರ್’ ಗಾಗಿ ಕರಣ್ ಥಾಪರ್ ನಡೆಸಿಕೊಡುವ ಸುದೀರ್ಘ ವಿಡಿಯೋ ಸಂದರ್ಶನದಲ್ಲಿ ಇತ್ತೀಚಿನ ಲೋಕಸಭಾ ಚುನಾವಣೆ ಫಲಿತಾಂಶ ಮೋದಿ ಮತ್ತು ಸಮ್ಮಿಶ್ರ ಸರ್ಕಾರದ ಭವಿಷ್ಯ, ದಕ್ಷಿಣ ಭಾರತ ಮತ್ತು ಬಿಜೆಪಿ ಕುರಿತು ಅವರು ನೀಡಿರುವ ವಿರಳ ಒಳನೋಟಗಳಿವೆ.

ಮೋದಿಯವರು ಈ ಸರ್ಕಾರವನ್ನು ಉಳಿಸಿಕೊಳ್ಳಲಾರರು ಎನಿಸಿದರೆ, ಪರಸ್ಪರ ಗೌರವಾದರ ತೋರಿ ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಅವರಂತಹ ವ್ಯಕ್ತಿಯನ್ನು ಬಿಜೆಪಿ ಮತ್ತು ಆರೆಸ್ಸೆಸ್ ಹುಡುಕಲಿದೆ.

Advertisements

ಮೋದಿಯವರಿಗೆ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಮಂತ್ರಿಯಾಗಿ ಬಹುಮತವೇ ರೂಢಿಯಾಗಿ ಹೋಗಿತ್ತು. ಈಗ ಅದು ಕೈತಪ್ಪಿರುವುದು ಅವರಿಗೆ ಆಗಿರುವ ಖಚಿತ ಹಿನ್ನಡೆ. ಮಿತ್ರಪಕ್ಷಗಳ ಮರ್ಜಿ‌ ಕಾಯಬೇಕಾಗಿ ಬಂದಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮಿತ್ರಪಕ್ಷಗಳೊಂದಿಗೆ ಕೊಟ್ಟು ಪಡೆಯುವ ರಾಜಿ ಒಪ್ಪಂದದ ಸಂಬಂಧ ಇಟ್ಟುಕೊಳ್ಳಬೇಕಾಗುತ್ತದೆ. ಮೋದಿ ಅವರಿಗೆ ಇಂತಹ ಮನೋಭಾವ ಇಲ್ಲ. ಇದರ ಅಗತ್ಯ ಕೂಡ ಅವರಿಗೆ ಇಷ್ಟು ಕಾಲ ಒದಗಿರಲಿಲ್ಲ. ಹೊಂದಾಣಿಕೆ ಅವರಿಗೆ ಗೊತ್ತಿಲ್ಲದ ಪದ. ಭಿನ್ನ ಅಭಿಪ್ರಾಯವನ್ನು ಅವರು ಸಹಿಸುವುದಿಲ್ಲ. ಹೀಗಾಗಿ ಆರೆಸ್ಸೆಸ್ ಮೋದಿಯವರಿಗೆ ಪರ್ಯಾಯದ ಆಲೋಚನೆ ನಡೆಸಿರುತ್ತದೆ. ಈ ಹಿಂದೆ ಆರೆಸ್ಸೆಸ್ ಮನಸಿನಲ್ಲಿದ್ದ ಪರ್ಯಾಯ ವ್ಯಕ್ತಿ ನಿತಿನ್ ಗಡ್ಕರಿ. 2014ರಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷ ಆಗುವುದು ಬಿಜೆಪಿಗೆ ಸಮ್ಮತವಿರಲಿಲ್ಲ.

ನಾಯ್ಡು ಅವರ ಮುಸ್ಲಿಮ್ ಮೀಸಲಾತಿ ಮೋದಿಗೆ ಹಿಡಿಸದಿರಬಹುದು. ಆದರೆ ಅಧಿಕಾರ ಉಳಿಸಿಕೊಳ್ಳಬೇಕಿದ್ದರೆ ಸಹಿಸಿಕೊಳ್ಳಬೇಕಾಗುತ್ತದೆ. ಹೀಗೆ ಹಿಂದುತ್ವವನ್ನು ತೆಳುಗೊಳಿಸಿದರೆಂದು ತೀವ್ರವಾದಿಗಳಿಂದ ಆಕ್ರಮಣಕ್ಕೆ ಗುರಿಯಾಗುವ ಅಪಾಯ ಎದುರಿಸಬೇಕಾದೀತು. ಜಿನ್ನಾ ಅವರನ್ನು ಸೆಕ್ಯೂಲರ್ ಎಂದು ಕರೆದ ಆಡ್ವಾಣಿ, ಮೋದಿಯಂತಹ ತೀವ್ರ ಹಿಂದುತ್ವವಾದಿಗೆ ಜಾಗ ಬಿಟ್ಟು ಹಿನ್ನೆಲೆಗೆ ಸರಿಯಬೇಕಾಯಿತು. ಮೋದಿಯವರು ಅಡ್ವಾಣಿಗೆ ಮಾಡಿದ್ದನ್ನು, ಯೋಗಿ ಆದಿತ್ಯನಾಥ ಮೋದಿಯವರಿಗೆ ಮಾಡಬಹುದು. ಆದಿತ್ಯನಾಥ ತಮ್ಮ ಕಾಲಕ್ಕಾಗಿ ಕಾಯುತ್ತಿರುವ ತೀವ್ರ ಹಿಂದುತ್ವವಾದಿ. ಹಿಂದೂ ಮಹಾಸಭೆಯ ಮೂಲದವರೇ ವಿನಾ ಆರೆಸ್ಸೆಸ್ ಹಿನ್ನೆಲೆಯವರಲ್ಲ. ಈ ಕಾರಣಕ್ಕಾಗಿ ಬೇರೆ ದಾರಿ ತುಳಿಯುಲು ಹೆಚ್ಚು ಸ್ವಾಯತ್ತತೆ ಹೊಂದಿದವರು.

24 Gadkari meets Vajpayee
ನಿತಿನ್‌ ಗಡ್ಕರಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ

ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ನಡೆದದ್ದನ್ನು ಭೂಕಂಪ ಎನ್ನುವುದು ಸಮಂಜಸ ಆಗಲಾರದು. ಅಧಿಕಾರದ ಹಸ್ತಾಂತರವೇನೂ ಆಗಿಲ್ಲ. ಹೀಗಾಗಿ ಭೂಮಿ ನಡುಕ ಎನ್ನಬಹುದು. ನಡುಕದ ನಂತರದ ಆಘಾತಗಳು ಮುಂದುವರೆಯುತ್ತವೆ. ಆದರೆ ಈ ಘಟ್ಟವನ್ನು ಆವರ್ತನದ(cycle) ಮುಕ್ತಾಯ ಎಂದು ಹೇಳಬಹುದು.

1990ರಿಂದ ಭಾರತದ ರಾಜಕಾರಣ ನಾಲ್ಕು ಆವರ್ತನಗಳನ್ನು ಕಂಡಿದೆ. ವಿ.ಪಿ.ಸಿಂಗ್ ಮಂಡಲ್ ವರದಿ ಜಾರಿ ಮಾಡಿದಾಗ ಶುರುವಾದ ಜಾತಿ ರಾಜಕಾರಣ 10 ವರ್ಷ ಕಾಲ ನಡೆಯಿತು. 1998ರಲ್ಲಿ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮೆದು ಹಿಂದುತ್ವದ ಸಮ್ಮಿಶ್ರ ಸರ್ಕಾರ ರಚಿಸಿತು. 2004ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಸಾಮಾಜಿಕ ವಿಷಯಗಳನ್ನು ಕೇಂದ್ರವಾಗಿ ಇರಿಸಿಕೊಂಡು ಆಡಳಿತ ನಡೆಸಿತು. ನರೇಗ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಹಾರದ ಹಕ್ಕು ಹೀಗೆ ಹಕ್ಕುಗಳ ರಾಜಕಾರಣ ನಡೆಯಿತು.

2014ರಲ್ಲಿ ನರೇಂದ್ರ ಮೋದಿ ಗೆಲುವು ಉಗ್ರ ಹಿಂದುತ್ವವನ್ನು ರಾಜಕಾರಣದ ಮುಖ್ಯಭೂಮಿಕೆಗೆ ತಂದಿತು. ಹೊಸ ರೀತಿಯ ಬಹುಸಂಖ್ಯಾವಾದ ಮತ್ತು ಸರ್ವಾಧಿಕಾರ ತಲೆ ಎತ್ತಿತು. ಇದೀಗ ಮೋದಿ ಎದುರಿಸಿರುವ ಹಿನ್ನಡೆಯು ಮೆದುಹಿಂದುತ್ವದೆಡೆಗೆ ಮರಳಬೇಕಾದ ಒತ್ತಡವನ್ನು ಹುಟ್ಟಿಸಿದೆ. ಪ್ರತಿಪಕ್ಷಗಳಿಗೆ ಸಿಕ್ಕಿರುವ ಮುನ್ನಡೆಯು ಸಾಮಾಜಿಕ ವಿಷಯಗಳು ಮತ್ತು ಜಾತಿರಾಜಕಾರಣ ಮೂಲದ್ದಾಗಿದೆ. ಮೂವತ್ತು ವರ್ಷಗಳ ಭಾರತದ ರಾಜಕಾರಣ ಹಿಂದುತ್ವ ಮತ್ತು ಜಾತಿ ರಾಜಕಾರಣದ ನಡುವೆ ಜೋಕಾಲಿಯಾಡಿದೆ. ಒಂದು ತುದಿಯಿಂದ ಇನ್ನೊಂದು ತುದಿಗೆ ಜೀಕಿದಾಗ ಒಂದು ಆವರ್ತನ ಮುಗಿದು ಮತ್ತೊಂದು ಶುರುವಾಗುತ್ತಿದೆ. ಈ ಸಲದ ಲೋಕಸಭಾ ಚುನಾವಣೆ ಫಲಿತಾಂಶವು ಕೋಮು ಧೃವೀಕರಣ ಹೊಳಪು ಕಳೆದುಕೊಳ್ಳುತ್ತಿರುವತ್ತ ಬೆರಳು ತೋರಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಬಿಡಿಸಲು ಸರ್ಕಾರ ಸೋತಿದೆ. ಆಡಳಿತ ವಿರೋಧದ ಅಂಶ ಈ ಸಲದ ಮತದಾನದಲ್ಲಿ ಒಂದು ಹಂತಕ್ಕೆ ಕಾಣಿಸಿಕೊಂಡಿದೆ. ಈ ಸಮಸ್ಯೆಗಳನ್ನು ಅದುಮಿಡುವುದು ಕೋಮುವಾದಕ್ಕೆ ಸಾಧ್ಯವಾಗಿಲ್ಲ ಎಂಬುದು ಈ ಚುನಾವಣೆಯ ಸಂದೇಶ. ಬಿಜೆಪಿ ಈ ಸಂದೇಶವನ್ನು ಗ್ರಹಿಸಿದೆಯೇ ಇಲ್ಲವೇ ಎಂದು ಕಾದು ನೋಡಬೇಕು.

ಮೋದಿಯವರ ವರ್ಚಸ್ಸು ಸವೆಯತೊಡಗಿದೆ. ಆದರೆ ಈಗಲೂ ಅವರೇ ಹೆಚ್ಚು ಜನಪ್ರಿಯ ನಾಯಕ. ಮೋದಿ ಗುಜರಾತಿಗೆ ಕೊಟ್ಟಷ್ಟನ್ನಾದರೂ ತಮ್ಮ ರಾಜ್ಯಗಳಿಗೆ ಕೊಟ್ಟರೆ ಮಿತ್ರಪಕ್ಷಗಳು ಸದ್ಯಕ್ಕೆ ಸುಮ್ಮನಿರಬಹುದು. ಆದರೆ ಬಿಜೆಪಿ ದುರ್ಬಲವಾಯಿತೆಂದರೆ ಹೊಸ ಹೊಸ ಬೇಡಿಕೆಗಳನ್ನು ಮುಂದಿಡುವುದು ನಿಶ್ಚಿತ. ಈ ದಿಸೆಯಲ್ಲಿ ಸನಿಹದಲ್ಲೇ ನಡೆಯಲಿರುವ ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳು ನಿರ್ಣಾಯಕ ಎನಿಸಲಿವೆ. ಬಿಜೆಪಿ ಈ ಎರಡು ರಾಜ್ಯಗಳನ್ನು ಸೋತರೆ ಮೋದಿ ತಮ್ಮ ಮಿತ್ರ ಪಕ್ಷಗಳ ಮಾತುಗಳಿಗೆ ಹೆಚ್ಚು ಕಿವಿ ಕೊಡಬೇಕಾಗುತ್ತದೆ.

ಮೋದಿ ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ದಿನಗಳಿಂದಲೂ ಆರೆಸ್ಸೆಸ್ ಹಿಡಿತದಿಂದ ಬಿಡಿಸಿಕೊಳ್ಳುತ್ತಲೇ ನಡೆದಿದ್ದಾರೆ. ಆರೆಸ್ಸೆಸ್ ಮೇಲೆ ಅವಲಂಬಿತರಾಗಿಲ್ಲ. ಹೀಗಾಗಿ ಆರೆಸ್ಸೆಸ್ ನಿಂದ ಈಗ ಪ್ರತಿರೋಧ ಎದುರಿಸುತ್ತಿದ್ದಾರೆ. ಆದರೆ ಆರೆಸ್ಸೆಸ್ ಸಿದ್ಧಾಂತಗಳು ಮತ್ತು ಮೌಲ್ಯಗಳನ್ನೇ ಅವರು ಪ್ರತಿಪಾದಿಸುತ್ತ ಬಂದಿದ್ದಾರೆ. ಹೀಗಾಗಿ ಮೋದಿ ಜನಪ್ರಿಯತೆ ತಗ್ಗತೊಡಗಿದಾಗ ಮಾತ್ರವೇ ಆರೆಸ್ಸೆಸ್ ಮಾತಾಡುತ್ತಿದೆ. ಅವರು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವರೇ ಇಲ್ಲವೇ ಎಂಬ ಪ್ರಶ್ನೆ ಮುಖ್ಯವಾಗುತ್ತ ಹೋಗಲಿದೆ. ಈ ದಿಸೆಯಲ್ಲಿ ಅವರು ವಿಫಲರಾದರೆ ಮೋದಿಯವರ ಜಾಗವನ್ನು ಬೇರೆ ಯಾರು ತುಂಬಬಲ್ಲರು? ಆರೆಸ್ಸೆಸ್ ಈಗಾಗಲೇ ಆಲೋಚಿಸತೊಡಗಿದೆ.

ಸಂವಿಧಾನ ಮತ್ತು ಮೀಸಲಾತಿಗೆ ಕುತ್ತು ಬಂದಿದೆಯೆಂದು ತಳವರ್ಗಗಳು ಬಿಜೆಪಿ ವಿರೋಧ ಪ್ರಕಟಿಸಿವೆ. ಬಿಜೆಪಿ ಹೆಚ್ಚು ಹೆಚ್ಚು ಬಲಿಷ್ಠ ಜಾತಿಗಳ ಪಕ್ಷವಾಗತೊಡಗಿದರೆ ಪ್ರತಿಪಕ್ಷಗಳಲ್ಲಿ ಬಲಿಷ್ಠ ಜನಪ್ರತಿಧಿಗಳ ಸಂಖ್ಯೆ ದುಪ್ಪಟ್ಟು ಕುಸಿಯುತ್ತಿದೆ. ಹಿಂದೀ ಹೃದಯಭೂಮಿಯಲ್ಲಿ ಬಿಜೆಪಿ ಬೆಂಬಲ ಕುಸಿತಕ್ಕೆ ರೈತ ಚಳವಳಿ, ಜಾಟ್ ಜನಾಂಗದ ವಿರೋಧವೂ ಮುಖ್ಯ ಕಾರಣ.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಆಡಳಿತ ವಿರೋಧಿ ಭಾವನೆಯ ಕೊಡುಗೆಯೂ ಇದೆ. ಪ್ರತಿಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ಮಾತ್ರವಲ್ಲ, ತಮ್ಮದೇ ಮತಗಳನ್ನು ಕೂಡ ಗಳಿಸಿವೆ. ಹತ್ತು ವರ್ಷಗಳಲ್ಲಿ ಮತದಾರರ ಮುಂದೆ ಮೊದಲ ಸಲ ತನ್ನದೇ ಕಾರ್ಯಸೂಚಿಯನ್ನು ಇಡುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ ಜಾತಿ ಜನಗಣತಿ ನಡೆಸುವ ಮತ್ತು ಸಂವಿಧಾನ ಅಪಾಯದಲ್ಲಿದೆ ಎಂದು ಸಾರಿದ್ದು ಈ ಮಾತಿಗೆ ಎರಡು ಉದಾಹರಣೆಗಳು. ಅಷ್ಟೇ ಅಲ್ಲದೆ ವಿಶೇಷವಾಗಿ ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ಈ ಸಲ ಅಸಾಧಾರಣ ಜಾಣತನ ತೋರಿವೆ. ಈ ವಿಷಯದಲ್ಲಿ ಬಿಜೆಪಿಯನ್ನೂ ಹಿಂದಿಕ್ಕಿವೆ. ಅದರ ಆಟವನ್ನು ಅದರದೇ ಹಗ್ಗದಿಂದ ಕಟ್ಟಿ ಹಾಕಿವೆ. ಯಾದವೇತರ ಹಿಂದುಳಿದ ಜಾತಿಗಳಿಗೆ ಮಣೆ ಹಾಕಿವೆ. ಶೇ.92ರಷ್ಟು ಮುಸಲ್ಮಾನ ಮತದಾರರು ಎಸ್.ಪಿ. ಮತ್ತು‌ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿಯ ಧೃವೀಕರಣಕ್ಕೆ ಪ್ರತಿಧೃವೀಕರಣ ಕಟ್ಟಲಾಯಿತು.

ಒಂದು ರಾಷ್ಟ್ರ- ಒಂದು ಚುನಾವಣೆ, ಒಂದು ರಾಷ್ಟ್ರ- ಒಂದು ಧರ್ಮ, ಒಂದು ದೇಶ- ಒಂದು ಭಾಷೆ ಎಂದು ಪ್ರತಿಪಾದಿಸುವ ಬಿಜೆಪಿ, ವೈವಿಧ್ಯತೆಯನ್ನು ಉಪೇಕ್ಷಿಸುತ್ತಿದೆ. ವಿಶೇಷವಾಗಿ ಬಂಗಾಳಿ ಉಪರಾಷ್ಟ್ರೀಯತೆ, ಅಸ್ಮಿತೆಯನ್ನು ಅರ್ಥ ಮಾಡಿಕೊಳ್ಳದಾಗಿದೆ.

ಮಹಾರಾಷ್ಟ್ರ ಕೂಡ ಬಂಗಾಳದಂತೆ ಬಲಿಷ್ಠ ಉಪರಾಷ್ಟ್ರೀಯತೆ ಅಸ್ಮಿತೆಯನ್ನು ಹೊಂದಿರುವ ರಾಜ್ಯ. ಅಲ್ಲಿಯೂ ಶಿವಸೇನೆ, ಎನ್.ಸಿ.ಪಿ ಯನ್ನು ಕೆಣಕಿ ಎಡವಿತು ಬಿಜೆಪಿ. ದಕ್ಷಿಣದ ಬಾಗಿಲುಗಳು ಬಿಜೆಪಿಗೆ ಈಗಾಗಲೇ ತೆರೆದಿದ್ದವು. ಈ ಸಲ ಹೆಚ್ಚು ತೆರೆದಿವೆ. ಬಿಜೆಪಿ ಈಗ ರಾಷ್ಟ್ರೀಯ ಪಕ್ಷ. ಆದರೆ ದಕ್ಷಿಣ ಕೈವಶ ಆಗಬೇಕಿದ್ದರೆ ಉತ್ತರಭಾರತದ- ಮೇಲ್ಜಾತಿಗಳ- ಹಿಂದಿ ಕೇಂದ್ರಿತ ಪಕ್ಷ ಎಂಬ ಬಿಂಬದಿಂದ ಬಿಜೆಪಿ ಹೊರಬರಬೇಕು. ಹಿಂದುತ್ವದ ಪ್ರಾದೇಶೀಕರಣ ಸುಲಭ ಅಲ್ಲ. ಧರ್ಮವೊಂದೇ ಸಾಲದು. ದಕ್ಷಿಣವನ್ನು ಗೆಲ್ಲಬೇಕಿದ್ದರೆ, ತಾನು ಉತ್ತರದಲ್ಲಿ ಗಳಿಸಿಕೊಂಡಿತುವ ಅಸ್ಮಿತೆಯನ್ನು ತ್ಯಾಗ ಮಾಡಬೇಕಾಗುತ್ತದೆ. ಸಿದ್ಧಾಂತವನ್ನು ತೆಳುವಾಗಿಸಿದರೆ ಉತ್ತರದಲ್ಲಿ ಮತದಾರರ ಆಸ್ಥೆಯನ್ನು ಕಳೆದುಕೊಳ್ಳುವುದರ ಜೊತೆಗೆ ತನ್ನ ಆವರಣವನ್ನು ತೀವ್ರವಾದಿಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಇದೊಂದು ದೊಡ್ಡ ದ್ವಂದ್ವ. ಜೊತೆಗೆ ಉತ್ತರಕ್ಕೆ ತೆರಿಗೆ ತೆತ್ತು ತೆತ್ತು ಬೇಸತ್ತಿದೆ ದಕ್ಷಿಣ. ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ದಕ್ಷಿಣದ ರಾಜ್ಯಗಳಲ್ಲಿ ಬೇರೂರುತ್ತಿದೆ. ಜನಸಂಘ ಎದುರಿಸುತ್ತ ಬಂದಿದ್ದ ಈ ದ್ವಂದ್ವವನ್ನು ಹಿಂದುತ್ವದ ಅಲೆ ಹಂಗಾಮಿಯಾಗಿ ಅಡಗಿಸಿತ್ತು.  ದಕ್ಷಿಣದಲ್ಲಿ ಯಶಸ್ಸು ಕಾಣಬೇಕಿದ್ದರೆ ಬಿಜೆಪಿ ತನ್ನನ್ನು ತಾನು ಮರು ಸಂಶೋಧಿಸಿಕೊಳ್ಳಬೇಕಿದೆ. ಕ್ಷೇತ್ರ ಮರುವಿಂಗಡಣೆಯು ದಕ್ಷಿಣವನ್ನು ಬಿಜೆಪಿಯಿಂದ ಇನ್ನಷ್ಟು ದೂರ ಮಾಡಲಿದೆ. ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳು ಅಪ್ರಸ್ತುತ ಆಗಲಿವೆ. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರ ಮರುವಿಂಗಡಣೆ ಜಾರಿ ಸಾಧ್ಯವಿಲ್ಲ.

ಮಿತ್ರಪಕ್ಷಗಳ ಮರ್ಜಿ ಕಾಯಬೇಕಿರುವ ಹೊಸ ಅನಿವಾರ್ಯದಲ್ಲಿ ಮೋದಿ ಮೀಡಿಯಾ, ಪ್ರತಿಪಕ್ಷಗಳು ಹಾಗೂ ತಮ್ಮ ವಿರೋಧಿಗಳ ಕುರಿತು ಸಹನೆ ತೋರಬಹುದೇ ಎಂಬ ಪ್ರಶ್ನೆಯನ್ನು ನಾನು ತಿರುವುಮುರುವಾಗಿ ಇಡಬಯಸುತ್ತೇನೆ.

ಮೋದಿ ಹಾದಿ ತುಳಿದು ಅವರನ್ನು ಇನ್ನಷ್ಟು ಬಲಿಷ್ಠರನ್ನಾಗಿಸಿದ, ಚುನಾವಣಾ ಆಯೋಗ, ನ್ಯಾಯಾಂಗ, ಮೀಡಿಯಾ ಹಾಗೂ ಆಧಿಕಾರಶಾಹಿ ಮೋದಿಗೆ ಬಹುಮತ ಇಲ್ಲದಿರುವ ಈ ಸನ್ನಿವೇಶದಲ್ಲಿ ತಮಗೆ ಬೆನ್ನುಮೂಳೆ ಇದೆಯೆಂದು ತೋರಲಿವೆಯೇ?  ಮೋದಿ ದುರ್ಬಲರು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಜನ ಬಲಿಷ್ಠರಾಗಿದ್ದಾರೆ ಎಂಬ ಕಾರಣಕ್ಕಾಗಿ ಬದಲಾವಣೆ ಕಂಡು ಬಂದೀತು, ನೋಡೋಣ.

ಸೌಜನ್ಯ- ದಿ ವೈರ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X