ಗ್ಯಾರಂಟಿ vs ಸರ್ಕಾರಿ ಉದ್ಯೋಗ: ಹುಸಿ ಕಥನಕ್ಕೆ ಬಲಿಯಾಗುತ್ತಿದ್ದಾರೆಯೇ ಉದ್ಯೋಗಕಾಂಕ್ಷಿಗಳು?

Date:

ಹುದ್ದೆ ಭರ್ತಿ ಮಾಡಬೇಕಾಗಿದ್ದು ಸರ್ಕಾರದ ಹೊಣೆ. ಜನರಿಗೂ ಉದ್ಯೋಗ ಕೇಳುವ ಹಕ್ಕಿದೆ. ಉದ್ಯೋಗ ಭರ್ತಿ ಮಾಡದ ಸರ್ಕಾರದ ವಿರುದ್ಧ ಉದ್ಯೋಗಕಾಂಕ್ಷಿಗಳ ಆಕ್ರೋಶವೂ ನಾವು ಒಪ್ಪುವಂತದ್ದು. ಆದರೆ ಇನ್ನೊಬ್ಬರಿಂದ ಕಿತ್ತು ನಮಗೆ ಕೊಡಿ ಅನ್ನುವುದು ಸಮರ್ಥನೀಯವಲ್ಲ.

ರಾಜ್ಯದಲ್ಲಿ ಸದ್ಯ ಐದು ಗ್ಯಾರಂಟಿ ಯೋಜನೆಗಳ ಬದಲಾಗಿ ಶಾಶ್ವತ ಉದ್ಯೋಗ ಸೃಷ್ಟಿ ಮತ್ತು ನೇಮಕಾತಿ ಪ್ರಕ್ರಿಯೆಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿಯನ್ನು ವಿರೋಧಿಸಿ ಇತರೆ ರಾಜ್ಯಗಳಲ್ಲಿ ‘ಗ್ಯಾರಂಟಿ’ ನಕಲು ಮಾಡಿ ಅಧಿಕಾರಗಿಟ್ಟಿಸಿಕೊಂಡಿರುವ ಬಿಜೆಪಿ ಈ ‘ಗ್ಯಾರಂಟಿ vs ಸರ್ಕಾರಿ ಉದ್ಯೋಗ’ ಎಂಬ ಕೂಗು ಹೆಚ್ಚಾಗುವಂತೆ ಮಾಡಿದೆ. ಉದ್ಯೋಗಾಕಾಂಕ್ಷಿಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರು ಈ ಹುಸಿ ಕಥನಕ್ಕೆ ಬಲಿಯಾಗುತ್ತಿರುವಂತಿದೆ.

- Advertisement -

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸದ್ಯ 2.84 ಲಕ್ಷಕ್ಕೂ (2,84,881) ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಅಧಿಕ ಹುದ್ದೆಗಳು ಶಿಕ್ಷಣ ಇಲಾಖೆಯಲ್ಲಿ ಭರ್ತಿಯಾಗದೆ ಉಳಿದಿವೆ. ಅದನ್ನು ಹೊರತುಪಡಿಸಿದರೆ ಕಂದಾಯ ಮತ್ತು ಆರೋಗ್ಯ ಇಲಾಖೆಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಸರ್ಕಾರದ ಕಾರ್ಯಗಳು ಸರಾಗವಾಗಿ ಸಾಗಬೇಕಾದರೆ ಈ ಉದ್ಯೋಗಗಳು ಭರ್ತಿಯಾಗಬೇಕು ಎಂಬ ಆಗ್ರಹ ಸಮರ್ಥನೀಯ. ಇದು ಖಂಡಿತ ಜನಪರವಾದ ಬೇಡಿಕೆ. ಆದರೆ ಖಾಲಿ ಹುದ್ದೆ ಭರ್ತಿ ಮಾಡಲು ಬಡ ಜನರಿಗೆ ಸಹಾಯವಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಆಗ್ರಹ ಒಪ್ಪುವಂತದ್ದು ಅಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಗೃಹಜ್ಯೋತಿ ಯೋಜನೆ | ಗ್ಯಾರಂಟಿ ಯೋಜನೆ ಲಾಭ ಪಡೆಯುವ ಕುಟುಂಬಗಳೆಷ್ಟು ಗೊತ್ತೇ?

ರಾಜ್ಯ ಸರ್ಕಾರದ ಐದು ಮಹತ್ವಾಕಾಂಕ್ಷೆಯ ‘ಗ್ಯಾರಂಟಿ ಯೋಜನೆಗಳು’ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಆರಂಭದಿಂದಲೂ ಸೃಷ್ಟಿಸಿದೆ. 2024-25 ಮತ್ತು 2025-26ರ ಬಜೆಟ್ ಅಂಕಿಅಂಶಗಳ ಪ್ರಕಾರ, ರಾಜ್ಯದ ಸುಮಾರು 1.37 ಕೋಟಿ ಕುಟುಂಬಗಳು ಯಾವುದಾದರೂ ಒಂದು ಗ್ಯಾರಂಟಿ ಯೋಜನೆಯಡಿ ನೇರವಾಗಿ ಪ್ರಯೋಜನ ಪಡೆಯುತ್ತಿವೆ. ಈ ಯೋಜನೆಗಳಿಗಾಗಿ ವಾರ್ಷಿಕವಾಗಿ ₹52,000 ಕೋಟಿ ವ್ಯಯಿಸಲಾಗುತ್ತಿದೆ. ಇದರಿಂದಾಗಿ ಹಣಕಾಸು ಕೊರತೆ ಉಂಟಾಗಿ ಸರ್ಕಾರಿ ಉದ್ಯೋಗ ನೇಮಕಾತಿ ಸ್ಥಗಿತ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದ್ದು.

ಸದ್ಯ ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಮಣಿದ ಸರ್ಕಾರ ಸುಮಾರು 60,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಮಾರ್ಚ್ 6ರ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಹಾಗೆಯೇ ಹುದ್ದೆಗಳು ಖಾಲಿಯಿವೆ ಎಂಬುದು ಸತ್ಯ. ಹುದ್ದೆ ಭರ್ತಿ ಮಾಡಬೇಕಾಗಿದ್ದು ಸರ್ಕಾರದ ಹೊಣೆ. ಜನರಿಗೂ ಉದ್ಯೋಗ ಕೇಳುವ ಹಕ್ಕಿದೆ. ಉದ್ಯೋಗ ಭರ್ತಿ ಮಾಡದ ಸರ್ಕಾರದ ವಿರುದ್ಧ ಉದ್ಯೋಗಕಾಂಕ್ಷಿಗಳ ಆಕ್ರೋಶವೂ ನಾವು ಒಪ್ಪುವಂತದ್ದು. ಆದರೆ ಇನ್ನೊಬ್ಬರಿಂದ ಕಿತ್ತು ನಮಗೆ ಕೊಡಿ ಅನ್ನುವುದು ಸಮರ್ಥನೀಯವಲ್ಲ.

ಅಷ್ಟಕ್ಕೂ ಬಿಜೆಪಿ ಹೇಳುವಂತೆ ಗ್ಯಾರಂಟಿ ಯೋಜನೆಗಳಿಗೆ ಅಧಿಕ ವೆಚ್ಚವಾಗುವ ಕಾರಣ, ವೇತನ ನೀಡುವಷ್ಟು ಹಣವಿಲ್ಲದೆ ಸರ್ಕಾರ ಉದ್ಯೋಗ ಭರ್ತಿ ಮಾಡುತ್ತಿಲ್ಲ, ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಿದೆ ಎಂಬುದು ನಿಜವೇ? ಅಧಿಕೃತ ಅಂಕಿಅಂಶಗಳ ಪ್ರಕಾರ ಇದು ಸುಳ್ಳು. ಗ್ಯಾರಂಟಿ ಯೋಜನೆಗಳಿಂದಾಗಿ ಬಜೆಟ್‌ನ ಹೆಚ್ಚಿನ ಪಾಲು ವೆಚ್ಚವಾಗುತ್ತಿರುವುದು ನಿಜ. ಆದರೆ ಇದರಿಂದಾಗಿ ಉದ್ಯೋಗ ಭರ್ತಿ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಕಾನೂನು ಅಡೆತಡೆಗಳಿಂದಾಗಿಯೂ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಳ ಮೀಸಲಾತಿ (Internal Reservation) ಮಸೂದೆ ಬಾಕಿ ಇರುವುದೂ ಕೆಲವು ಪ್ರಮುಖ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ.

ಸುಮಾರು 13,000ಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಕಾನೂನು ಹೋರಾಟದ ನಂತರ ಅಂತಿಮ ಹಂತ ತಲುಪಿದ್ದು, ನೇಮಕಾತಿ ಆದೇಶಗಳನ್ನು ನೀಡಲಾಗುತ್ತಿದೆ. ಗೃಹ ಇಲಾಖೆಯು ಇತ್ತೀಚೆಗಷ್ಟೇ 545 PSI ಹುದ್ದೆಗಳ ಮರುಪರೀಕ್ಷೆ ನಡೆಸಿದೆ. ಗೆಜೆಟೆಡ್ ಪ್ರೊಬೇಷನರ್ಸ್ (KAS) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಪರೀಕ್ಷಾ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಅಲ್ಲದೆ, ವಿವಿಧ ಇಲಾಖೆಗಳ ‘ಗ್ರೂಪ್ ಸಿ’ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಭರ್ತಿ ನಡೆದಿಲ್ಲ ಎಂಬುದು ವಾಸ್ತವ. ಹಾಗಿದ್ದಾಗ ಗ್ಯಾರಂಟಿ ಯೋಜನೆಗಳಿಗೆ ಅಧಿಕ ವೆಚ್ಚವಾಗುವ ಕಾರಣ ಸರ್ಕಾರ ಉದ್ಯೋಗ ಭರ್ತಿ ಮಾಡುತ್ತಿಲ್ಲ ಎಂಬ ಬಿಜೆಪಿಯ ಹುಸಿ ಕಥನಕ್ಕೆ ಬಲಿಯಾಗುತ್ತಿರುವುದು ಉದ್ಯೋಗಕಾಂಕ್ಷಿಗಳು ಅಲ್ಲವೇ?

ಈ ಬಗ್ಗೆ ಈ ದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಜಾಗೃತ ಕರ್ನಾಟಕದ ಮುಖಂಡ ಮುತ್ತುರಾಜ್, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ನೀಡಬೇಕೆಂದು ಪ್ರತಿಭಟಿಸುವುದು ಯುವಜನರ ಹಕ್ಕು. ಆದರೆ ಮೀಸಲಾತಿ ಮತ್ತು ಗ್ಯಾರಂಟಿಗಳಿಂದ ನಮಗೆ ಉದ್ಯೋಗ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವುದು ತಪ್ಪು ಮತ್ತು ಅಪಪ್ರಚಾರವಾಗಿದೆ. ಯುವಜನರಿಗೆ ಉದ್ಯೋಗ ಹೇಗೆ ಸಾಂವಿಧಾನಿಕ ಹಕ್ಕೋ ಅದೇ ರೀತಿ ಮತ್ತು ಮೀಸಲಾತಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಸಹ ಜನರ ಸಾಂವಿಧಾನಿಕ ಹಕ್ಕು ಎಂಬುದನ್ನು ಯುವಜನರು ಅರಿಯಬೇಕು. ತಪ್ಪು ಮಾಹಿತಿಯಿಂದ ಪ್ರಭಾವಿತರಾದವರು ನಾಳೆ ಸರ್ಕಾರಿ ನೌಕರರಾದಲ್ಲಿ ಅವರು ಪೂರ್ವಗ್ರಹಪೀಡಿತರಾಗುವುದಿಲ್ಲವೇ? ಅವರು ನಿಜವಾಗಿಯೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ದುಡಿಯುವರೇ? ಈ ಕುರಿತು ಇಡೀ ಸಮಾಜ ಆಲೋಚಿಸಬೇಕು” ಎಂದರು.

muttu raju
ಜಾಗೃತ ಕರ್ನಾಟಕದ ಮುಖಂಡ ಮುತ್ತುರಾಜ್

ಇನ್ನು ಈ ಬಗ್ಗೆ ಈ ದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ರಾಜ್ಯ ಸಮಿತಿ ಸದಸ್ಯ ಸಂತೋಷ್ ಬಜಾಲ್, “ಧಾರವಾಡದಲ್ಲಿ ಉದ್ಯೋಗಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿ, ಭಾಗವಹಿಸುವ ಪ್ರಯತ್ನ ಮಾಡಿದೆ. ಆದರೆ ಈ ಹೋರಾಟದಲ್ಲಿ ಭಾಗಿಯಾಗುವ, ಬೆಂಬಲ ಸೂಚಿಸುವ ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ. ಯಾಕೆಂದರೆ ಬಿಜೆಪಿ ಹಲವು ಬಾರಿ ಅಧಿಕಾರಕ್ಕೆ ಏರಿದೆ. ಒಂದೇ ಒಂದು ಉದ್ಯೋಗ ಸೃಷ್ಟಿಸಿಲ್ಲ, ಇರುವ ಖಾಲಿ ಹುದ್ದೆಯನ್ನೂ ಭರ್ತಿ ಮಾಡಲು ಯಾವ ಯೋಜನೆಯನ್ನು ಜಾರಿ ಮಾಡಿಲ್ಲ. ಖಾಸಗಿ ರಂಗದಲ್ಲಿ ಮೀಸಲಾತಿ ತರಬೇಕು ಎಂಬ ಆಗ್ರಹಕ್ಕೂ ಬೆಂಬಲ ನೀಡುತ್ತಿಲ್ಲ. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆಯೇ ಹೊರತು ಯುವಜನರಿಗೆ ಉದ್ಯೋಗ ಸಿಗಬೇಕು ಎಂಬ ಯಾವ ಇಚ್ಛಾಶಕ್ತಿಯೂ ಬಿಜೆಪಿ ನಾಯಕರುಗಳಿಗಿಲ್ಲ” ಎಂದು ದೂರಿದರು.

“ಗ್ಯಾರಂಟಿ ಯೋಜನೆಗೆ ಅಧಿಕ ವೆಚ್ಚವಾಗುವ ಕಾರಣ ಉದ್ಯೋಗ ಭರ್ತಿ ಮಾಡುತ್ತಿಲ್ಲ, ಆದ್ದರಿಂದ ಗ್ಯಾರಂಟಿ ಯೋಜನೆಯನ್ನು ಕೈಬಿಡಬೇಕು ಎಂಬಂತಹ ಬಿಜೆಪಿಯ ವಾದವನ್ನು ನಾವು ವಿರೋಧಿಸುತ್ತದೆ. ಯಾಕೆಂದರೆ ಗ್ಯಾರಂಟಿ ಯೋಜನೆಯಿಂದಾಗಿ ಹಲವು ಮಂದಿ ಸಹಾಯವಾಗಿದೆ. ಅದನ್ನು ಡಿವೈಎಫ್‌ಐ ಕೂಡಾ ಒಪ್ಪುತ್ತದೆ. ಬಿಜೆಪಿ ಜನರಿಗೆ ಒಂದು ರೂಪಾಯಿಯ ಸಹಾಯವನ್ನೂ ಮಾಡಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಿಂದಾಗಿ ಜನರಿಗೆ ಲಾಭವಾದರೆ ಬಿಜೆಪಿಯ ಭವಿಷ್ಯಕ್ಕೆ ಸಮಸ್ಯೆ, ಸವಾಲಾಗಬಹುದು ಎಂಬ ಕಾರಣಕ್ಕೆ ಬಿಜೆಪಿ ಈ ರೀತಿ ವಿರೋಧ ಮಾಡುತ್ತಿದೆ. ಜನರಿಗೆ ಯಾವ ಪ್ರಯೋಜನವೂ ಸಿಗದಂತೆ ನೋಡುವ ಹುನ್ನಾರ” ಎಂದು ಆರೋಪಿಸಿದರು.

santhosh bajal
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ರಾಜ್ಯ ಸಮಿತಿ ಸದಸ್ಯ ಸಂತೋಷ್ ಬಜಾಲ್

“ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಾಗೆಯೇ ಇದು ಹಲವು ವರ್ಷಗಳ ಹಿಂದೆ ಮಂಜೂರಾಗಿರುವ ಹುದ್ದೆಗಳು. ಸದ್ಯ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಹೆಚ್ಚಿಸಬೇಕು. ಖಾಸಗಿ ರಂಗದಲ್ಲಿಯೂ ಮೀಸಲಾತಿ ತರಬೇಕು. ಗುತ್ತಿಗೆ, ಅರೆಗುತ್ತಿಗೆಗಳನ್ನು ಕೈಬಿಡಬೇಕು” ಎಂದೂ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸುತ್ತಾ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇನ್ನು ಅಧಿಕೃತ ಅಂಕಿಅಂಶಗಳ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 1.22 ಕೋಟಿ ಮಹಿಳೆಯರು ₹2,000 ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 1.62 ಕೋಟಿ ಗ್ರಾಹಕರು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಅನ್ನ ಭಾಗ್ಯದಡಿಯಲ್ಲಿ 4.12 ಕೋಟಿ ಜನರು ಪಡಿತರ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ದಿನಕ್ಕೆ ಸರಾಸರಿ 60-70 ಲಕ್ಷ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಯುವ ನಿಧಿ ಯೋಜನೆಯಡಿ 2.58 ಲಕ್ಷ ನಿರುದ್ಯೋಗಿ ಯುವಕರು ಮಾಸಿಕ ₹1,500 – ₹3,000 ಭತ್ಯೆ ಪಡೆಯುತ್ತಿದ್ದಾರೆ.

ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಲೋಕನೀತಿ-CSDS ನಂತಹ ಸಂಸ್ಥೆಗಳು ನಡೆಸಿದ ಸ್ವತಂತ್ರ ಅಧ್ಯಯನಗಳ ಪ್ರಕಾರ ಶೇ.80ಕ್ಕಿಂತ ಹೆಚ್ಚು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ವೈಯಕ್ತಿಕ ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಭದ್ರತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಸುಮಾರು ಶೇ. 80ರಷ್ಟು ಮಹಿಳೆಯರು ಗ್ಯಾರಂಟಿಗಳಿಂದ ಉಳಿತಾಯವಾದ ಹಣವನ್ನು ಉತ್ತಮ ಆರೋಗ್ಯ ಸೇವೆ ಪಡೆಯಲು ಬಳಸುತ್ತಿರುವುದಾಗಿ ಹೇಳಿದ್ದಾರೆ. ಸುಮಾರು ಶೇ.87ರಷ್ಟು ಮಹಿಳೆಯರು ಈ ಯೋಜನೆಗಳು ಜಾರಿಯಾದ ನಂತರ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ತಮ್ಮ ಪಾತ್ರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಗೃಹ ಜ್ಯೋತಿ ಯೋಜನೆಯಿಂದ ಸುಮಾರು ಶೇ. 89ರಷ್ಟು ಮನೆಗಳಲ್ಲಿ ವಿದ್ಯುತ್ ಬಿಲ್ ಹೊರೆ ಸಂಪೂರ್ಣವಾಗಿ ತಪ್ಪಿದೆ ಅಥವಾ ಕಡಿಮೆಯಾಗಿದೆ. ಹೀಗೆ ಅಧ್ಯಯನ ವರದಿಗಳ ಪ್ರಕಾರ ಈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ದೊಡ್ಡಮಟ್ಟದ ಸಕಾರಾತ್ಮಕ ಪ್ರಭಾವವನ್ನು ಬೀರಿದೆ.

ಜನರ ಕೈಗೆ ನೇರವಾಗಿ ಹಣ ತಲುಪುತ್ತಿರುವುದರಿಂದ ಮಾರುಕಟ್ಟೆಯಲ್ಲಿ ವಹಿವಾಟು ಅಧಿಕವಾಗಿದೆ. ಜನರ ಜೀವನಮಟ್ಟ ಸುಧಾರಿಸಿದೆ ಎಂದೂ ಅಧ್ಯಯನಗಳು ಹೇಳುತ್ತವೆ. ಅಷ್ಟು ಮಾತ್ರವಲ್ಲದೆ ಕರ್ನಾಟಕದ ಆರ್ಥಿಕತೆಯು 2024-25ರಲ್ಲಿ 7.4% ದರದಲ್ಲಿ ಬೆಳೆಯುವ ನಿರೀಕ್ಷೆಯಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ (6.4%) ಹೆಚ್ಚಿದೆ. ಹೀಗಿರುವಾಗ ಕೋಟ್ಯಂತರ ಜನರಿಗೆ ಸಹಾಯವಾಗುವ ಯೋಜನೆಯನ್ನೇ ಕಿತ್ತೊಗೆಯಬೇಕು ಎಂಬ ವಾದ ಅಸಮಂಜಸವಲ್ಲವೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ ಮೋದಿ ಪ್ರಚಾರ ನಡೆಸಿದರೆ ಶಿಷ್ಟಾಚಾರವೇ?

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ...

ಮುಸ್ಲಿಮರನ್ನು ಗುರಿಯಾಗಿಸಿ ಮತದಾನದ ಹಕ್ಕು ಕಸಿಯುವ ತಂತ್ರವೇ ‘SIR’: ಶಿವಸುಂದರ್

“SIR ರದ್ದಾಗಬೇಕು; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬುದಷ್ಟೇ ನಮ್ಮ ಹೋರಾಟವಲ್ಲ,...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

SIR ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ INDIA ಮೈತ್ರಿಕೂಟ ಸಜ್ಜು; ಸಮನ್ವಯ ಸಮಿತಿ ರಚನೆಗೆ ನಿರ್ಧಾರ

ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಕರ್ನಾಟಕದಲ್ಲಿ INDIA ಮೈತ್ರಿಕೂಟದ...