ಗುಜರಾತ್ನ ನರ್ಮದ ಜಿಲ್ಲೆಯ ದೇಡಿಯಾಪದದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕನ ಕೊಲೆ ಯತ್ನ ಮಾಡಿದ ಆರೋಪದ ಮೇಲೆ ಎಎಪಿ ಶಾಸಕ ಚೈತರ್ ವಾಸವ ಅವರನ್ನು ಬಂಧಿಸಲಾಗಿದೆ.
ವಾಸವ ಅವರ ಕ್ಷೇತ್ರ ದೇಡಿಯಾಪದ ವ್ಯಾಪ್ತಿಯ ಪ್ರಾಂಟ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ವಾಸವ ಅವರನ್ನು ಶನಿವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಶಾಸಕ ಮುನಿರತ್ನ ಮತ್ತೆ ಬಂಧನ
ಸ್ಥಳೀಯ ಮಟ್ಟದ ಸಮನ್ವಯ ಸಮಿತಿಯಾದ ‘ಆಪ್ನೋ ತಾಲುಕೋ ವೈಬ್ರಂಟ್ ತಾಲುಕೋ’ (ಎಟಿವಿಟಿ) ಸದಸ್ಯರಾಗಿ ನೇಮಕಗೊಳ್ಳಲು ತಮ್ಮ ನಾಮನಿರ್ದೇಶಿತರನ್ನು ಪರಿಗಣಿಸದಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಾಸವ ಆಕ್ರೋಶಿತಗೊಂಡಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ದೇಡಿಯಾಪ್ಡಾ ತಾಲೂಕು ಪಂಚಾಯತ್ ಅಧ್ಯಕ್ಷ ಸಂಜಯ್ ವಾಸವ ಅವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಶಾಸಕರು ಅವರ ಮೇಲೆ ಮೊಬೈಲ್ ಫೋನ್ ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಸಂಜಯ್ ವಾಸವ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಶಾಸಕರು ದೂರುದಾರರ ಮೇಲೆ ಗಾಜಿನಿಂದ ಹಲ್ಲೆ ನಡೆಸಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ತಡೆದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ದೇಡಿಯಾಪದ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109(ಕೊಲೆ ಯತ್ನ), 79(ಪದಗಳು, ಸನ್ನೆಗಳ ಮೂಲಕ ಮಹಿಳೆಯ ಘನತೆಗೆ ಅವಮಾನ), 115 (2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 351 (3) (ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನ) ಮತ್ತು 324 (3) (ಆಸ್ತಿಗೆ ಹಾನಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
