ಇಸ್ರೇಲ್-ಹಮಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ‘ಹಮಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ’ ಎಂಬ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ, ಒತ್ತೆಯಾಳಾಗಿದ್ದ ಓರ್ವ ಮಹಿಳೆ, ಇಬ್ಬರು ಮಕ್ಕಳನ್ನು ಹಮಸ್ ಬಿಡುಗಡೆಗೊಳಿಸಿದೆ.
ಹಮಸ್‌ನ ಕಸ್ಸಾಮ್ ಬ್ರಿಗೇಡ್ ಮಹಿಳಾ ಒತ್ತೆಯಾಳು ಮತ್ತು ಇಬ್ಬರು ಮಕ್ಕಳನ್ನು ಬಿಡುಗಡೆ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಈ ವಿಡಿಯೋವನ್ನು ಅಲ್-ಜಝೀರಾ ಪ್ರಸಾರ ಮಾಡಿದ್ದು, ಅಪರಿಚಿತ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಇಸ್ರೇಲ್ ಮತ್ತು ಗಾಝಾ ನಡುವಿನ ಗಡಿ ಭಾಗದಲ್ಲಿ ಹಮಸ್ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದೆ. ಆದರೆ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ‘ಅಲ್-ಜಝೀರಾ’ ಮಾಹಿತಿ ಹಂಚಿಕೊಂಡಿದೆ.
ಹಮಸ್‌ನ ಕಸ್ಸಾಮ್ ಬ್ರಿಗೇಡ್ ಬಿಡುಗಡೆಗೊಳಿಸಿರುವ ವಿಡಿಯೋವನ್ನು ದೂರದಿಂದ ಚಿತ್ರೀಕರಿಸಲಾಗಿದ್ದು, ಅಪರಿಚಿತ ಮಹಿಳೆ ಮತ್ತು ಮಕ್ಕಳನ್ನು ಹಿಂದಿನಿಂದ ತೋರಿಸಲಾಗಿದೆ. ಬಿಡುಗಡೆಗೊಂಡವರ ವಿವರಗಳನ್ನು ಹಂಚಿಕೊಂಡಿಲ್ಲ.
ಇಸ್ರೇಲ್ ಮತ್ತು ಗಾಝಾ ನಡುವಿನ ಗಡಿಯಾಗಿರುವ ಬೇಲಿಯ ಸಮೀಪವಿರುವ ತೆರೆದ ಪ್ರದೇಶದಲ್ಲಿ ಅವರನ್ನು ಬಿಟ್ಟ ನಂತರ ಹಮಸ್‌ನವರು ದೂರ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇಸ್ರೇಲ್‌ನ ಅಧಿಕಾರಿಗಳು ಇನ್ನೂ ವೀಡಿಯೊ ಕುರಿತು ಪ್ರತಿಕ್ರಿಯಿಸಿಲ್ಲ ಎಂದು ಅಲ್-ಜಝೀರಾ ಮಾಹಿತಿ ನೀಡಿದೆ. ಹಮಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ ಎಂದು i24 NEWS ಎಂಬ ಇಸ್ರೇಲ್‌ನ ಚಾನೆಲ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
𝗕𝗥𝗘𝗔𝗞𝗜𝗡𝗚 – Hamas video appears to show the release of woman, two children
Hamas’s Qassam Brigades has released a video appearing to show the release of a female hostage and two children. #IsraelPalestineWar #Israel #IsraelPalestineConflict #Gaza#IsrealUnderAttack pic.twitter.com/kWhJkSLlxD
— NVN (@NowVideoNetwork) October 12, 2023
ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿರುವ ಹಮಸ್‌ನ ರಾಜಕೀಯ ವಿಭಾಗದ ಪ್ರತಿನಿಧಿ ಈಝ್ಝತ್ ಅಲ್ ರಿಷ್ಕ್, ‘ಕೆಲವೊಂದು ಪಾಶ್ಚಿಮಾತ್ಯ ಮಾಧ್ಯಮಗಳು ಪ್ಯಾಲೆಸ್ತೀನಿಯರ ಪ್ರತಿರೋಧದವನ್ನು ಸಹಿಸಲಾಗದೆ ಇಸ್ರೇಲ್ ಪರ ಅಜೆಂಡಾ ರೂಪಿಸಲು ಸುಳ್ಳು ಮತ್ತು ಅಪಪ್ರಚಾರ ಹರಡುವುದನ್ನು ಮುಂದುವರಿಸಿದ್ದಾರೆ’ ಎಂದು ತಿಳಿಸಿದ್ದಾರೆ.