2024ರ ಚುನಾವಣೆಯೂ ಸೇರಿದಂತೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವಂತವಾಗಿ ಲೋಕಸಭೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಸರ್ಕಾರ ರಚಿಸುವ ಕನಿಷ್ಠ 272 ಸ್ಥಾನಗಳು ಬೇಕಿರುವ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರವೇ ಗಳಿಸಿದೆ. ಹೀಗಾಗಿ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು, ಬಿಜೆಪಿ ಮತ್ತೆ ಸರ್ಕಾರ ರಚಿಸಲು ಎನ್‌ಡಿಎ ಪಾಲುದಾರರ ಸಹಕಾರ ಅತ್ಯಗತ್ಯವಾಗಿದೆ.
ಕಳೆದ ಎರಡು ಅವಧಿಯ ಸರ್ಕಾರದಲ್ಲಿ ತಮ್ಮನ್ನು ಮೌನವಾಗಿರಿಸಿದ್ದ ಬಿಜೆಪಿಗೆ ಈಗ ಎನ್‌ಡಿಎ ಮಿತ್ರಪಕ್ಷಗಳು ತಲೆನೋವು ಕೊಡಲು ಆರಂಭಿಸಿವೆ. ಸರ್ಕಾರ ರಚನೆಗೆ ಬೆಂಬಲ ನೀಡಬೇಕೆಂದರೆ ಸರ್ಕಾರದಲ್ಲಿ ತಮಗೆ ಪಾಲುದಾರಿಗೆ ಬೇಕೆಂದು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಡುತ್ತಿವೆ. ಹೀಗಾಗಿ, ಎನ್‌ಡಿಎ ಕೂಟದೊಳಗೆ ಕೇಂದ್ರ ಸಚಿವ ಸಂಪುಟದಲ್ಲಿ ಖಾತೆಗಳಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.
ಈ ನಡುವೆ, ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರ ಬಾಬು ನಾಯ್ಡು ಅವರ ಟಿಡಿಪಿಯನ್ನು ತಮ್ಮನ್ನ ಸೆಳೆಯಲು ‘ಇಂಡಿಯಾ’ ಕೂಟದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ಮೋದಿ-ಶಾ ಜೋಡಿಗೆ ತಲೆನೋವಾಗಿ ಪರಿಣಮಿಸಿದೆ.
ಟಿಡಿಪಿ ಮೋದಿ ನೇತೃತ್ವದ ಎನ್‌ಡಿಎ ಜೊತೆಗೆ ಇರುತ್ತದೆ ಎಂದು ನಾಯ್ಡು ಹೇಳಿದ್ದರೂ, ಮೋದಿ-ಶಾ ಎದುರು ನಾನಾ ಬೇಡಿಕೆಗಳನ್ನು ಇಟ್ಟಿದ್ದಾರೆ. ಆ ಬೇಡಿಕೆಗಳಿಗೆ ಮೋ-ಶಾ ಜೋಡಿ ಒಪ್ಪದಿದ್ದರೆ, ಅವರೂ ‘ಇಂಡಿಯಾ’ದತ್ತ ವಾಲಬಹುದು. ಇನ್ನು, ಜೆಡಿಯು ನಡೆ ನಿಗೂಡವಾಗಿದೆ.
ಎನ್‌ಡಿಎ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ಸೇರಿದಂತೆ 10 ಸಚಿವ ಸ್ಥಾನಗಳಿಗೆ ಟಿಡಿಪಿ ಬೇಡಿಕೆ ಇಟ್ಟಿದೆ. ಅದೇ ರೀತಿ, ಮೂರು ಕೇಂದ್ರ ಸಚಿವ ಮತ್ತು ಎರಡು ಕೇಂದ್ರ ರಾಜ್ಯ ಸಚಿವ ಖಾತೆಗಳಿಗೆ ಜೆಡಿಯು ಬೇಡಿಕೆ ಇಟ್ಟಿದೆ.
ಇನ್ನು, ಮಹಾರಾಷ್ಟ್ರ ಶಿವಸೇನೆಯ ಶಿಂಧೆ ಬಣ, ಒಂದು ಸಚಿವ, ಎರಡು ಕೇಂದ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಬಿಹಾರದ ಎಲ್‌ಜೆಪಿ ಒಂದು ಸಚಿವ, ಎರಡು ಕೇಂಧ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಎಚ್‌ಎಎಂ ಪಕ್ಷವೂ ಒಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.
ಈ ಎಲ್ಲರೂ ಈಗ ಎನ್‌ಡಿಎ ಒಳಗೆ ಕಿಂಗ್‌ಮೇಕರ್‌ಗಳಾಗಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ, ಈ ಪಕ್ಷಗಳು ಎನ್‌ಡಿಎ ತೊರೆಯುವುದು ಖಚಿತವಾಗಿದೆ. ಈವರೆಗೆ, ಮೈತ್ರಿ ಸರ್ಕಾರವನ್ನು ನಿಭಾಯಿಸಿ ಅನುಭವವೇ ಇಲ್ಲದ ಮೋದಿ-ಶಾ ಜೋಡಿಗೆ ಇದು ಅಕ್ಷರಶಃ ತಲೆನೋವಾಗಿದೆ. ಯಾವ ರೀತಿಯಲ್ಲಿ ಎಲ್ಲ ಮಿತ್ರ ಪಕ್ಷಗಳನ್ನು ನಿಭಾಯಿಸಬೇಕು ಎಂಬುದು ತೋಚದಂತಾಗಿದೆ. ಎಲ್ಲ ಮಿತ್ರರಿಗೂ ಸಚಿವ ಸ್ಥಾನ ಕೊಟ್ಟರೆ, ಸರ್ಕಾರದಲ್ಲಿ ತಮ್ಮದೇನೂ ಹಿಡಿತ ಇರುವುದಿಲ್ಲ. ತಮ್ಮ ಆಟ ನಡೆಯುವುದಿಲ್ಲ ಎಂಬ ಸತ್ಯದ ಅರಿವೂ ಕೂಡ ಮೋ-ಶಾ ಜೋಡಿಗೆ ಸ್ಪಷ್ಟವಾಗಿ ಗೊತ್ತಾಗಿದೆ.
HA HA HA HA – NARENDRA MODI IS BEING SHOWN HIS REAL PLACE BY NDA PARTNERS!!
TDP : Demands 10 Ministries along with Speakers Post
JDU : Demands 3 Ministries and 2 MoS
Shinde : Demands 1+ Ministries and 2 MoS
LJP : Demands 1 Ministries and 1 MoS
HAM : Demands 1 Minister Post… pic.twitter.com/E2f5ChIvWe
— AAP Ka Mehta 🇮🇳 (@DaaruBaazMehta) June 5, 2024
ಬುಧವಾರ ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಸಭೆ ನಡೆಯಲಿದ್ದು, ಯಾರು ಸರ್ಕಾರ ರಚಿಸಲು ಬಿಜೆಪಿ ಜೊತೆ ಇರುತ್ತಾರೆ. ಯಾರು ಬಂಡಾಯ ಎದ್ದು ಹೊರ ನಡೆಯುತ್ತಾರೆ ಎಂದು ಸಂಜೆಯೊಳಗೆ ಗೊತ್ತಾಗಲಿದೆ.
ಇದೆಲ್ಲವನ್ನೂ, ಇಂಡಿಯಾ ಮೈತ್ರಿಕೂಟ ಗಮನಿಸುತ್ತಿದ್ದಾರೆ. ಎನ್‌ಡಿಎ ಸಭೆಯಲ್ಲಾಗುವ ವಿದ್ಯಮಾನಗಳನ್ನು ಗಮನಿಸಿ, ತಮ್ಮ ನಿರ್ಧಾರಗಳನ್ನು ಮಾರ್ಪಡಿಸಲು ‘ಇಂಡಿಯಾ’ ನಾಯಕರು ಕಾಯುತ್ತಿದ್ದಾರೆ. ಈ ನಡುವೆ, ಬಿಹಾರದಿಂದ ದೆಹಲಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಯಾಗಿ ಪ್ರಯಾಣಿಸಿದ್ದಾರೆ. ಹೀಗಾಗಿ, ನಿತೀಶ್ ‘ಇಂಡಿಯಾ’ ಎಡೆಗೆ ಬರಬಹುದು ಎನ್ನಲಾಗುತ್ತಿದೆ.
ಇನ್ನು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನೂ ಟಿಡಿಪಿಗೆ ಇಂಡಿಯಾ ನಾಯಕರು ನೀಡಿದ್ದಾರೆ. ಹೀಗಾಗಿ, ಎನ್‌ಡಿಎ ಸಭೆಯಲ್ಲಿ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ, ನಾಯ್ಡು ಕೂಡ ಇಂಡಿಯಾ ಜೊತೆಗೂಡುವ ಸಾಧ್ಯತೆಗಳಿವೆ.
ನಿತೇಶ್ ಹೋಮ್ ಮಿನಿಸ್ಟರ್, ನಾಯ್ಡು ಫೈನಾನ್ಸ್ ಮಿನಿಸ್ಟರ್ ಕೇಳಲಿ. 😊😊