ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆಯೇ ಅಮಾನವೀಯ ಕೃತ್ಯ ಎಸಗಿರುವ ಇಸ್ರೇಲ್, ಗಾಝಾದ ಆಸ್ಪತ್ರೆಯೊಂದರ ಮೇಲೆ ವಾಯು ದಾಳಿ ನಡೆಸಿದೆ.
ಗಾಝಾದ ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ನಡೆದ ಇಸ್ರೇಲ್ ಆಕ್ರಮಣದಲ್ಲಿ 500 ಕ್ಕೂ ಹೆಚ್ಚು ಮಂದಿ ಮರಣ ಹೊಂದಿರುವುದಾಗಿ ಪ್ಯಾಲೆಸ್ತೀನ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿರುವುದಾಗಿ ಅಲ್-ಜಝೀರಾ ವರದಿ ಮಾಡಿದೆ.
Scenes documenting the moment when Israeli occupation aircraft bombed the National Arab Hospital in Gaza, which resulted in the death of more than 500 and the injury of more than 600 others.
We note that this hospital received thousands of people displaced from their homes 🇵🇸📍 pic.twitter.com/4pXygiSgaI— Gaza Now in English (@EnglishGaza) October 17, 2023
ಆಸ್ಪತ್ರೆಯಲ್ಲಿ ನೂರಾರು ಮಂದಿ ಗಾಯಾಳುಗಳು ಹಾಗೂ ಸಾರ್ವಜನಿಕರಿದ್ದ ವೇಳೆಯಲ್ಲಿಯೇ ಈ ದಾಳಿ ನಡೆಸಿದೆ.
ಇಸ್ರೇಲ್ ದಾಳಿಗೆ ಆಸ್ಪತ್ರೆಯ ಆವರಣದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಿ ಪ್ಯಾಲೆಸ್ತೀನ್‌ನ ಮಾಧ್ಯಮಗಳು ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ಅಲ್ಲದೇ, ಆಸ್ಪತ್ರೆಯ ಮೇಲೆ ದಾಳಿ ನಡೆಸಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಇಸ್ರೇಲ್ ಈ ನಡೆಯನ್ನು ಖಂಡಿಸಿರುವ ಹಮಾಸ್, ಇದು ಯುದ್ಧಾಪರಾಧ ಎಂದು ಹೇಳಿದೆ.
Dear world,
Israel just bombed a Christian hospital in Gaza and murdered over 500 Palestinian civilians. White phosphorus chemical bombs confirmed by human rights watch was not enough to open your eyes. Over 1000 dead children wasn’t enough. Will you open your eyes and act now? pic.twitter.com/hSoUVJ40eD
— Dr. Omar Suleiman (@omarsuleiman504) October 17, 2023
ಆಸ್ಪತ್ರೆಯ ಮೇಲೆ ನಡೆದ ದಾಳಿಯಿಂದಾಗಿ ಗಂಭೀರ ಗಾಯಗೊಂಡಿರುವವರನ್ನು ಗಾಝಾದ ಅಲ್ ಶಿಫಾ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.